Advertisement
ಉಗ್ರ ಮತ್ತು ನಕ್ಸಲ್ ಹಾಗೂ ಭೂಗತ ಚಟುವಟಿಕೆಗಳಿಗಾಗಿ ಇವನ್ನು ಬಳಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ರಾಜ್ಯ ಗುಪ್ತಚರ ಮತ್ತು ಆಂತರಿಕ ಭದ್ರತ ವಿಭಾಗ (ಐಎಸ್ ಡಿ) ತನಿಖೆಗೆ ಮುಂದಾಗಿದೆ.
Related Articles
ಜನವರಿಯಿಂದ ರಾಜ್ಯದಲ್ಲಿ ಮತ್ತೆ ಸ್ಯಾಟಲೈಟ್ ಫೋನ್ ಬಳಕೆ ಆರಂಭವಾಗಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ದಟ್ಟಾರಣ್ಯ ಪ್ರದೇಶಗಳು, ಮೈಸೂರು, ಚಾಮರಾಜನಗರದ ಕೆಲವು ಪ್ರದೇಶಗಳಲ್ಲಿ ಲೋಕೇಶನ್ ಪತ್ತೆಯಾಗಿತ್ತು.
Advertisement
ಪ್ರಾಥಮಿಕ ತನಿಖೆಯಲ್ಲಿ ಮತ್ತೂಂದು ಸ್ಫೋಟಕ ವಿಚಾರ ಬೆಳಕಿಗೆ ಬಂದಿದ್ದು, ಕೇರಳ ಮತ್ತು ಗಡಿ ಭಾಗದ ವ್ಯಕ್ತಿಗಳೇ ಸ್ಯಾಟಲೈಟ್ ಫೋನ್ ಬಳಸುತ್ತಿದ್ದಾರೆ.
ದುಬಾೖ, ಅರಬ್ ರಾಷ್ಟ್ರಗಳಿಗೆ ಕರೆಬಹಳಷ್ಟು ಕರೆಗಳು ದುಬಾೖ, ಅರಬ್ ರಾಷ್ಟ್ರಗಳಿಗೆ ಹೋಗಿರುವುದು ಪತ್ತೆಯಾಗಿದೆ. ಸೌದಿ ರಾಷ್ಟ್ರಗಳಿಂದ ಬಂದವರೇ ಸ್ಯಾಟಲೈಟ್ ಫೋನ್ ಬಳಸುತ್ತಿದ್ದಾರೆ ಎಂದು ತನಿಖೆಯಲ್ಲಿ ಕಂಡು ಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲೆಲ್ಲಿಂದ ಕರೆ?
ಗುಂಡ್ಲು ಪೇಟೆ, ಎಚ್.ಡಿ. ಕೋಟೆ, ಮೈಸೂರು ಗ್ರಾಮಾಂತರ, ಕೊಡಗು, ಮಡಿಕೇರಿ, ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿ, ಬೆಳ್ತಂಗಡಿ, ಬಂಟ್ವಾಳ ಮತ್ತು ಹನೂರು ತಾಲೂಕಿನ ಕಾವೇರಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಈ ಫೋನ್‌ಗಳು ಸಕ್ರಿಯವಾಗಿದ್ದು, ಐಎಸ್‌ಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ನಕ್ಸಲ್ ಪ್ರದೇಶಗಳಲ್ಲಿ ಸಕ್ರಿಯ
ಕೊರಿಯಾದ “ತುರಾಯ್’ ಬ್ರ್ಯಾಂಡ್‌ನ ಸ್ಯಾಟಲೈಟ್ ಫೋನ್ ಬಳಕೆಯಾಗಿದೆ. ತುರಾಯ್ ಬ್ರ್ಯಾಂಡ್‌ನ 3 ಮಾದರಿಯ ಸ್ಯಾಟಲೈಟ್ ಫೋನ್‌ಗಳಿದ್ದು, ಅವುಗಳ ಲೋಕೇಶನ್ ಪತ್ತೆ ತತ್‌ಕ್ಷಣ ಸಾಧ್ಯವಿಲ್ಲ. 24 ತಾಸುಗಳ ಬಳಿಕ ಲೋಕೇಶನ್ ಪತ್ತೆಯಾಗುತ್ತದೆ. ಆಗ ಸ್ಥಳ ಪರಿಶೀಲಿಸಿದಾಗ ಯಾರೂ ಇರುವುದಿಲ್ಲ. ಈ ಮಧ್ಯೆ ಕೇರಳ- ಕರ್ನಾಟಕ-ತಮಿಳುನಾಡು ಭಾಗದ ಅರಣ್ಯ ಪ್ರದೇಶದಲ್ಲಿ ನಕ್ಸಲರು ಅಧಿಕವಾಗಿದ್ದಾರೆ. ಅವರು ಸ್ಯಾಟಲೈಟ್ ಫೋನ್ ಗಳನ್ನು ಬಳಕೆ ಮಾಡಿರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.