Advertisement
ಬಿಳಿಪಟ್ಟಿಯ ರಿಫ್ಲೆಕ್ಟರ್ ಹಾಗೂ ಇತರ ಸಂಚಾರ ಮಾರ್ಗಸೂಚಿಗಳು ಅಳಿಸಿ ಹೋಗಿದ್ದರಿಂದ ವಾಹನಗಳ ಸುಗಮ ಮತ್ತು ಸುರಕ್ಷಿತ ಚಾಲನೆಗೆ ಸಮಸ್ಯೆಯಾಗಿತ್ತು. ಇದೀಗ ಕೆಲವೆಡೆ ಇವುಗಳ ಅಳವಡಿಕೆ ಆರಂಭವಾಗಿದ್ದರೂ ಅದಕ್ಕೆ ವೇಗ ನೀಡಬೇಕಾಗಿದೆ.
Related Articles
Advertisement
ಸರ್ವಿಸ್ ರಸ್ತೆಯ ಕೊರತೆ ಬಹುತೇಕ ಕಡೆಗಳಲ್ಲಿ. ರಾ.ಹೆದ್ದಾರಿಗೆ ಸಂದಿಸುವ ಇತರ ರಸ್ತೆಗಳಿಗೆ ವಾಹನಗಳು ಸಂಚರಿಸಬೇಕಾಗಿರುವುದರಿಂದ ಹಾಗು ಇಲ್ಲಿ ಸರ್ವಿಸ್ ರಸ್ತೆಗಳು ನಿರ್ಮಾಣವಾಗದೇ ಇರುವುದರಿಂದ ವಾಹನಗಳು ರಾ.ಹೆ.ಯಲ್ಲಿ ಅಭಿಮುಖವಾಗಿ ಸಂಚರಿಸಬೇಕಾದ ಅನಿರ್ವಾರ್ಯತೆ ಇದೆ. ಈ ಭಾಗಗಳಲ್ಲಿ ಆಭಿಮುಖವಾಗಿ ಸಂಚರಿಸುವ ವಾಹನಗಳಿಗೆ ಹಾಗು ನೇರವಾಗಿ ಸಂಚರಿಸುವ ವಾಹನಗಳಿಗೆ ಸಂಚಾರದ ಅರಿವನ್ನು ಮೂಡಿಸಲು ಕೂಡ ಈ ಗುರುತುಗಳು ಅನುಕೂಲಕರ. ಕಾಮಗಾರಿಗೆ ಚುರುಕು
ಕುಂದಾಪುರದಿಂದ ಉಡುಪಿ ತನಕ ಮಾಸಿಹೋಗಿರುವ ರಸ್ತೆಗುರುತುಗಳನ್ನು ಮರು ಮುದ್ರಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಳೆ ಬಿಡುವಿನ ಸಮಯವನ್ನು ನೋಡಿಕೊಂಡು ಈ ಕಾಮಗಾರಿಗೆ ಚುರುಕು ನೀಡಲಾಗುವುದು.
– ತಿಮ್ಮಯ್ಯ, ಟೋಲ್ ಸೀನಿಯರ್ ಮ್ಯಾನೇಜರ್, ಉಡುಪಿ ಟೋಲ್ ವೇ