Advertisement

ಅಮ್ಮನ ಆಸ್ಪತ್ರೆ ವಿಡಿಯೋ ನನ್ನಲ್ಲಿದೆ: ದಿನಕರನ್‌

06:20 AM Sep 26, 2017 | Team Udayavani |

ಚೆನ್ನೈ: “ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಆಸ್ಪತ್ರೆಯಲ್ಲಿದ್ದಾಗ ಸೆರೆಹಿಡಿದಿದ್ದ ವಿಡಿಯೋ ನನ್ನಲ್ಲಿದೆ. ಅದನ್ನು ಸಿಬಿಐ, ಇಂಟರ್‌ಪೋಲ್‌ ಸೇರಿ ಯಾವುದೇ ತನಿಖಾ ಸಂಸ್ಥೆಗೂ ನೀಡಲು ಸಿದ್ಧ’ ಎಂದು ಎಐಎಡಿಎಂಕೆ ಬಂಡಾಯ ನಾಯಕ ದಿನಕರನ್‌ ಹೇಳಿದ್ದಾರೆ. 

Advertisement

ಜಯಾ ಆರೋಗ್ಯಕ್ಕೆ ಸಂಬಂಧಿಸಿ ಸುಳ್ಳು ಹೇಳಲಾಗಿತ್ತು ಎಂಬ ಹೇಳಿಕೆ ಹೊರಬಿದ್ದ ಬೆನ್ನಲ್ಲೇ ದಿನಕರನ್‌ ಈ ವಿಚಾರ ತಿಳಿಸಿದ್ದಾರೆ. “ವಿಡಿಯೋವನ್ನು ಶಶಿಕಲಾ ಸೆರೆಹಿಡಿದಿದ್ದರು. ಆದರೆ, ಆಸ್ಪತ್ರೆಯಲ್ಲಿ ಅಮ್ಮಾ ನೈಟಿ ಧರಿಸಿಯೇ ಇದ್ದ ಕಾರಣ, ಅದನ್ನು ನಾವು ಬಹಿರಂಗಪಡಿಸಿರಲಿಲ್ಲ. ಅಮ್ಮಾ ಅವರ ದೇಹದ ತೂಕ ಇಳಿದಿತ್ತು. ಅವರನ್ನು ಯಾರೂ ನೈಟಿಯಲ್ಲಿ ನೋಡಿದ್ದಿಲ್ಲ. ಅದಕ್ಕಾಗಿ ವಿಡಿಯೋ ಬಹಿರಂಗಪಡಿಸಿರಲಿಲ್ಲ’ ಎಂದಿದ್ದಾರೆ ದಿನಕರನ್‌.

Advertisement

Udayavani is now on Telegram. Click here to join our channel and stay updated with the latest news.

Next