Advertisement

Jayalalithaa ಹಿಂದುತ್ವದ ಮಹಾನಾಯಕಿ; ಆ ಶೂನ್ಯವನ್ನು ಬಿಜೆಪಿ ತುಂಬುತ್ತಿದೆ: ಅಣ್ಣಾಮಲೈ

01:11 AM May 24, 2024 | Vishnudas Patil |

ಹೊಸದಿಲ್ಲಿ: ತಮಿಳುನಾಡಿನಲ್ಲಿ ಹಿಂದುತ್ವದ ಮಹಾನಾಯಕಿಯಾಗಿದ್ದ ಜಯಲಲಿತಾ ಅವರ ಸಾವಿನ ಅನಂತರ ಉಂಟಾದ ಶೂನ್ಯವನ್ನು ಬಿಜೆಪಿ ಯ ಹಿಂದುತ್ವ ತುಂಬುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಹೇಳಿದ್ದಾರೆ.

Advertisement

ಸುದ್ದಿಸಂಸ್ಥೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ಸ್ಥಾನಗಳನ್ನು ಗಳಿಸಲಿದೆ. ರಾಜ್ಯದಲ್ಲಿ 3ನೇ ದೊಡ್ಡ ಪಕ್ಷವಾಗಿ ಗುರುತಿಸಿಕೊಳ್ಳಲಿದೆ ಎಂದಿದ್ದಾರೆ. ಜಯಲಲಿತಾ ಬದುಕಿದ್ದರೆ ಅವರು ತಮಿಳುನಾಡಿನಲ್ಲೇ ಅತಿದೊಡ್ಡ ಹಿಂದುತ್ವ ನಾಯಕಿಯಾಗಿರುತ್ತಿದ್ದರು. ಎಲ್ಲ ಹಿಂದೂ ಮತಗಳು ಅವರಿಗೆ ಸಿಗುತ್ತಿದ್ದವು. ರಾಮಮಂದಿರವನ್ನು ಮೊದಲು ಬೆಂಬಲಿಸಿದ್ದು ಜಯಲಲಿತಾ. ಅವರು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದರು. ಹಲವು ದೇವಸ್ಥಾನಗಳಿಗೆ ಆನೆಗಳನ್ನು ದಾನ ಕೊಟ್ಟಿದ್ದರು ಎಂದಿದ್ದಾರೆ.

ಮೋದಿ 3 ಪಟ್ಟು ಉತ್ತಮ: ಪ್ರಧಾನಿ ಮೋದಿ ಅವರ ರಾಜಕೀಯ ಎದುರಾಳಿಗಳಿ ಗಿಂತ 3 ಪಟ್ಟು ಉತ್ತಮರು. ದೈಹಿಕ, ಮಾನಸಿಕ ಕ್ಷಮ ತೆಗಳಲ್ಲಿ ಮೋದಿ ಅವರು ತಮಗಿಂತ ವಯಸ್ಸಿನಲ್ಲಿ ಕಿರಿ ಯವರಾದ ರಾಹುಲ್‌ ಗಾಂಧಿಗಿಂತ ಉತ್ತಮವಾ ಗಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next