Advertisement

AIADMKಯಿಂದಲೇ ಪನ್ನೀರ್ ವಜಾ; ಪಳನಿಸ್ವಾಮಿ ನೂತನ ಸಾರಥಿ!

01:16 PM Feb 14, 2017 | Team Udayavani |

ಚೆನ್ನೈ:ತಮಿಳುನಾಡಿನ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ವಿಕೆ ಶಶಿಕಲಾ ನಟರಾಜನ್ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂಗೆ ಭರ್ಜರಿ ಶಾಕ್ ನೀಡಿದ್ದಾರೆ. ಎಐಎಡಿಎಂಕೆಯಿಂದ ಪನ್ನೀರ್ ಸೆಲ್ವಂ ಅವರನ್ನು ಉಚ್ಚಾಟಿಸಿ, ಪಿಡ್ಲ್ಬುಡಿ ಸಚಿವ ಪಳನಿಸ್ವಾಮಿಯನ್ನು ಎಐಎಡಿಎಂಕೆ ಶಾಸಕಾಂಗ ಪಕ್ಷದ ನೂತನ ನಾಯಕನನ್ನಾಗಿ ಮಾಡಿ ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲ ಸೆಲ್ವಂ ಜೊತೆ ಗುರುತಿಸಿಕೊಂಡಿದ್ದ ಸಂಸದರು, ಶಾಸಕರು ಸೇರಿ 19 ಮಂದಿಯನ್ನೂ ಪಕ್ಷದಿಂದ ಉಚ್ಚಾಟಿಸಲಾಗಿದೆ.

Advertisement

ಎಐಎಡಿಎಂಕೆ ಪಕ್ಷದಿಂದಲೇ ಪನ್ನೀರ್ ಸೆಲ್ವಂ ಅವರನ್ನು ಶಶಿಕಲಾ ಉಚ್ಚಾಟಿಸಿದ್ದಾರೆ. ಜಯಾ ಬಣದಲ್ಲಿ ಗುರುತಿಸಿಕೊಂಡಿದ್ದ ಲೋಕೋಪಯೋಗಿ ಸಚಿವ ಇ.ಪಳನಿಸ್ವಾಮಿಗೆ ಶಾಸಕಾಂಗ ಪಕ್ಷದ ಪಟ್ಟ ಕಟ್ಟಿ ಪನ್ನೀರ್ ಸೆಲ್ವಂಗೆ ಸೆಡ್ಡು ಹೊಡೆಯುವ ಮೂಲಕ ತಮಿಳುನಾಡಿನ ರಾಜಕೀಯ ಹೈಡ್ರಾಮಾ ಮತ್ತಷ್ಟು ಬಿಗಡಾಯಿಸಿದಂತಾಗಿದೆ.

ಜೈಲಿಗೆ ಹೋಗುವ ಮುನ್ನ ಶತಾಯಗತಾಯ ಪನ್ನೀರ್ ಸೆಲ್ವಂಗೆ ಮುಖ್ಯಮಂತ್ರಿ ಪಟ್ಟದ ಮೇಲೆ ಕೂರಲು ಅವಕಾಶ ನೀಡಬಾರದೆಂಬ ಹಠಕ್ಕೆ ಬಿದ್ದಿದ್ದ ಶಶಿಕಲಾ, ಕೋವತ್ತೂರು ಗೋಲ್ಡನ್ ಬೇ ರೆಸಾರ್ಟ್ ನಲ್ಲಿ ಶಾಸಕರ ಜೊತೆ ಮಾತುಕತೆ ನಡೆಸಿ ಈ ರಣತಂತ್ರ ಹೆಣೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ನಾವು ಶಾಂತಿ ಕಾಪಾಡುತ್ತೇವೆ, ಉತ್ತಮ ಆಡಳಿತ ನೀಡುತ್ತೇವೆ: ಪನ್ನೀರ್
ಸುಪ್ರೀಂ ತೀರ್ಪಿನ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಪನ್ನೀರ್ ಸೆಲ್ವಂ, ಇದು ಅಮ್ಮನ ಸುವರ್ಣ ಯುಗದ ಮುಂದುವರಿದ ಭಾಗ. ನಾವು ರಾಜ್ಯದಲ್ಲಿ ಶಾಂತಿ ಕಾಪಾಡುತ್ತೇವೆ. ಉತ್ತಮ ಆಡಳಿತ ನೀಡುವುದಾಗಿ ಹೇಳಿರುವ ಅವರು, ವಿಶ್ವಾಸಮತ ಯಾಚನೆಯಲ್ಲಿ ತಮಗೆ ಬಹುಮತ ಸಿಗುವುದಾಗಿ ಭರವಸೆ ವ್ಯಕ್ತಪಡಿಸಿದ್ದಾರೆ.

ನಮ್ಮನ್ನು ಉಚ್ಚಾಟಿಸೋ ಹಕ್ಕು ಶಶಿಕಲಾಗಿಲ್ಲ!
ಎಐಎಡಿಎಂಕೆ ಪಕ್ಷದಿಂದ ನಮ್ಮನ್ನು ಉಚ್ಚಾಟಿಸುವ ಅಧಿಕಾರ ಶಶಿಕಲಾ ನಟರಾಜನ್ ಗೆ ಇಲ್ಲ ಎಂದು ಎಐಎಡಿಎಂಕೆಯ ಬಂಡಾಯ ಶಾಸಕರು ತಿರುಗೇಟು ನೀಡಿದ್ದಾರೆ.

Advertisement

ಶಶಿಕಲಾ ನಟರಾಜನ್ ದೋಷಿ ಎಂದು ತೀರ್ಪು ಹೊರಬಿದ್ದ ನಂತರ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಹಂಗಾಮಿ ಸಿಎಂ ಪನ್ನೀರ್ ಸೆಲ್ವಂ ಸೇರಿದಂತೆ 20 ಮಂದಿಯನ್ನು ಪಕ್ಷದಿಂದ ವಜಾಗೊಳಿಸಿ ಆದೇಶ ನೀಡಿದ್ದರು.

ಪಕ್ಷದಿಂದ ವಜಾಗೊಂಡಿರುವ ಮುಖಂಡರಲ್ಲಿ ಒಬ್ಬರಾದ ಮನೋಜ್ ಪಾಂಡಿಯನ್ ಪ್ರಕಾರ, ಶಶಿಕಲಾಗೆ ನಮ್ಮನ್ನು ಪಕ್ಷದಿಂದ ವಜಾಗೊಳಿಸುವ ಅಧಿಕಾರ ಇಲ್ಲ. ಯಾಕೆಂದರೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದಲೇ ಶಶಿಕಲಾರನ್ನು ಇ.ಮಧುಸೂದನನ್ನ ಅವರು ಕಳೆದ ವಾರವೇ ಉಚ್ಚಾಟಿಸಿದ್ದರು. ಆಕೆಯನ್ನು ಈಗಾಗಲೇ ಜನರೇ ತಿರಸ್ಕರಿಸಿದ್ದರು, ಈಗ ಕೋರ್ಟ್ ಕೂಡ ಅದನ್ನೇ ಪುನರುಚ್ಚರಿಸಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next