Advertisement

ಡಿಐಜಿ, ಡಿಜಿಪಿ ವಿಐಪಿ ಜಗಳ!ಶಶಿಕಲಾ ವಿಶೇಷ ಆತಿಥ್ಯಕ್ಕಾಗಿ 2 ಕೋಟಿ ಲಂಚ

10:44 AM Jul 13, 2017 | Team Udayavani |

ಬೆಂಗಳೂರು: ಕಾರಾಗೃಹ ಡಿಜಿಪಿ ಸತ್ಯನಾರಾಯಣ ವಿರುದ್ಧವೇ ಲಂಚ ಸ್ವೀಕಾರ ಆರೋಪ ಕೇಳಿಬಂದಿರುವುದಾಗಿ ಕಾರಾಗೃಹ ಉಪಮಹಾ ನಿರೀಕ್ಷಕಿ ರೂಪಾ, ಅವರಿಗೇ ದೂರು ನೀಡಿದ್ದಾರೆ. 

Advertisement

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪೆ¤ ಶಶಿಕಲಾ ಅವರಿಗೆ ವಿಐಪಿ ಸೌಲಭ್ಯ ಕಲ್ಲಿಸಿರುವುದು ಮತ್ತು ಅದಕ್ಕೆ 2 ಕೋಟಿ ರೂ. ಲಂಚ ಸ್ವೀಕಾರ ಆಗಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಆಪಾದನೆ ದುರದೃಷ್ಟವಶಾತ್‌ ತಮ್ಮ ಮೇಲೂ ಇದೆ. ಕಾರಣ ಈ ಬಗ್ಗೆ ಗಮನ ಹರಿಸಿ ಕೂಡಲೇ ಜೈಲಿನ ತಪ್ಪಿತಸ್ಥ ಸಿಬ್ಬಂದಿ ಮೇಲೆ
ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಿ ಎಂದು ಉಪ ಮಹಾ ನಿರೀಕ್ಷಕಿ ಡಿ.ರೂಪಾ ಅವರು ಇಲಾಖೆ  ಮಹಾನಿರ್ದೇಶಕ ಸತ್ಯನಾರಾಯಣ ಅವರಿಗೆ ನೀಡಿದ ವರದಿಯಲ್ಲಿ ಹೇಳಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್‌ ಅವರಿಗೆ ವಿಐಪಿ ಸೌಲಭ್ಯಗಳು ಕಾರಾಗೃಹದಲ್ಲಿ ದೊರೆ ಯುತ್ತಿದ್ದು, ಪ್ರತ್ಯೇಕ ಅಡುಗೆ ಕೋಣೆ ಕಲ್ಪಿಸಲಾಗಿದೆ. ಈ ಬಗ್ಗೆ ತಮ್ಮ ಗಮನಕ್ಕೂ ಬಂದಿದೆ. ಇದಕ್ಕೆ ಎರಡು ಕೋಟಿ ರೂಪಾಯಿ ಲಂಚವನ್ನು ಪಡೆಯಲಾಗಿದೆ ಎನ್ನುವುದು ರೂಪ ಮಾಡಿರುವ
ಆರೋಪದ ಪ್ರಮುಖ ಅಂಶವಾಗಿದೆ.

ಅಲ್ಲದೇ, ಛಾಪಾ ಕಾಗದ ಹಗರಣದಲ್ಲಿ ಭಾಗಿ ಯಾಗಿರುವ ಅಬ್ದುಲ್‌ ಕರಿಂಲಾಲ್‌ ತೆಲಗಿ ಆರೋಗ್ಯ ಸುಧಾರಿಸಿದ್ದರೂ, ಆತನಿಗೆ ವಿಚಾರಣಾ  ಧೀನ ಕೈದಿಗಳಿಂದ ಸೇವೆ ಒದಗಿಸಲಾಗಿದೆ. ಕೈ ಕಾಲು ಒತ್ತಲಿಕ್ಕೂ  ಆತನಿಗೆ ನಾಲ್ಕು ಮಂದಿ ವಿಚಾರಣಾಧೀನ ಕೈದಿಗಳನ್ನು ಕೊಡಲಾಗಿದೆ. ಈ ಬಗ್ಗೆಯೂ ತಮ್ಮ ಗಮನಕ್ಕೆ ಬಂದಿದೆ. ಸಜಾ ಬಂಧಿ ಕೈದಿಗಳ ಜತೆ
ವಿಚಾರಣಾಧೀನ ಕೈದಿಗಳನ್ನು ಬಿಡಬಾರದು ಎಂಬ ನಿಯಮವಿದ್ದರೂ ಜೈಲಿನ ಮುಖ್ಯ ಅಧೀಕ್ಷಕರು
ಕ್ರಮಕೈಗೊಂಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಅದು ಇನ್ನೂ ಈಡೇರಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ಅಂದರೆ ಜೂನ್‌ 29ರಂದು ಜೈಲಿನ ಮುಖ್ಯ ವೈದ್ಯಾಧಿಕಾರಿಗಳ ಹಾಗೂ ನಾಲ್ಕು ಮಂದಿ ವೈದ್ಯರು ಸೇರಿದಂತೆ 10 ಮಂದಿ ವೈದ್ಯರ ಮೇಲೆ ಸಜಾ ಬಂಧಿಯಿಂದ ಹಲ್ಲೆ ನಡೆದಿದೆ. ಈಗಾಗಲೇ ದೂರು ಹೋಗಿದೆ. 

Advertisement

ರೂಪಾ V/s ಸತ್ಯನಾರಾಯಣ
ಇದೇ ವೇಳೆ ಸತ್ಯನಾರಾಯಣ ಅವರ ಬಗ್ಗೆ ರೂಪಾ ಅಸಮಾಧಾನವನ್ನೂ ವ್ಯಕ್ತಪಡಿಸಿ ದ್ದಾರೆ. ಅಧಿಕಾರ ಸ್ವೀಕರಿಸಿದ್ದಾಗಿನಿಂದ ನನ್ನ ಕರ್ತವ್ಯ ದಲ್ಲಿ ಹಸ್ತಕ್ಷೇಪ ಮಾಡುತ್ತಾ ಬಂದಿರು ತ್ತೀರಿ ಎಂದೂ ಹೇಳಿರುವ ಅವರು, ಸೆಂಟ್ರಲ್‌ ಜೈಲಿಗೆ ಹೋಗಿರುವುದರ ಬಗ್ಗೆಯೇ ನನ್ನಿಂದ ವಿವರಣೆ ಕೇಳಿ ಜ್ಞಾಪನಾ ಪತ್ರ ಕೊಟ್ಟಿರುತ್ತೀರಿ ಎಂದಿರುವುದು ಇಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಜೈಲಿನಲ್ಲಿ ಗಾಂಜಾ
ಕಾರಾಗೃಹದಲ್ಲಿ ಮೊದಲಿನಿಂದಲೂ ಗಾಂಜಾ ಮಾರಾಟದ ಬಗ್ಗೆ ಆರೋಪ ಕೇಳಿಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ಸುಮಾರು 25 ಮಂದಿಗೆ ಡ್ರಗ್ಸ್‌ ಮೂತ್ರ ಪರೀಕ್ಷೆಗೊಳಪಡಿಸಲಾಯಿತು. ಈ ವೇಳೆ 18 ಮಂದಿಗೆ ಗಾಂಜ
ಪಾಸಿಟಿವ್‌ ಆಗಿದೆ. ಈ ಬಗ್ಗೆ ವೈದ್ಯರು ಸಹ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜೈಲಿನಲ್ಲಿ ಗಾಂಜಾ ಮಾರಾಟದ ಬಗ್ಗೆ ಅನುಮಾನ ಮೂಡಿದ್ದು, ತನಿಖೆ ನಡೆಸಿದಾಗ ಈ 18 ಮಂದಿ ಕೈದಿಗಳಿಗೆ ನಿತ್ಯ ಗಾಂಜಾ ಸರಬರಾಜು ಮಾಡುತ್ತಿದ್ದು, ತಡೆಗಟ್ಟಲು ಯಾವುದೇ ಕ್ರಮಕೈಗೊಂಡಿಲ್ಲ. ಅಲ್ಲದೇ, ಕಾರಾಗೃಹದ ಆಸ್ಪತ್ರೆಯಲ್ಲಿ ರೆಕಾರ್ಡ್‌ ಕೊಠಡಿ ಯಿದೆ.
ಕೈದಿಗಳ ವೈದ್ಯಕೀಯ ದಾಖಲೆಗಳನ್ನು ಅಲ್ಲಿ ಇಟ್ಟಿದ್ದು, ಅನೇಕ ಬಾರಿ ಕೋರ್ಟ್‌ಗಳಿಗೆ ಈ ದಾಖಲೆ ಗಳನ್ನು ಹಾಜರು ಪಡಿಬೇಕಾಗುತ್ತದೆ. ಇದಕ್ಕೆ ಸರ್ಕಾರಿ ನೌಕರರನ್ನು ರಕ್ಷಣೆಗೆ ನೇಮಿಸ ಬೇಕಿತ್ತು. ಆದರೆ, ಸಿಬ್ಬಂದಿ ಕೊರತೆ ಎಂದು ಹೇಳಿ ಸಜಾ ಬಂಧಿಗಳನ್ನು ರಕ್ಷಣೆಗೆ ಹಾಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next