Advertisement
ನಂದಿನಿ ಮತ್ತು ಶಾಂಭವಿ ನದಿಯ ಸಂಗಮ ಪ್ರದೇಶದಲ್ಲಿ ನದಿ ಕೊರೆತ ಹೆಚ್ಚಾಗಿ ಬೀಚ್‌ನಲ್ಲಿನ ಬೃಹತ್ ಗಾಳಿ ಮರಗಳು ಧರಾಶಾಯಿಯಾಗಿದ್ದು, ನದಿ ಕೊರೆತ ಮುಂದುವರಿದು ಬಾಡಿಗೆ ಅಂಗಡಿಯ ಒಂದು ಭಾಗ ನೀರಿನ ಸೆಳೆತಕ್ಕೊಳಗಾಗಿ ಅದರ ಅಡಿಪಾಯ ಈಗಾಗಲೇ ನೀರಿಗೆ ಸೇರಿದೆ. ಇದೇ ರೀತಿ ನದಿ ಕೊರೆತ ಮುಂದುವರಿದಲ್ಲಿ ಒಂದೆರಡು ದಿನಗಳಲ್ಲಿ ಸಂಪೂರ್ಣವಾಗಿ ಅಂಗಡಿ ಕಟ್ಟಡ ನೇರವಾಗಿ ಸಮುದ್ರಕ್ಕೆ ಸೇರಲಿವೆ ಎಂಬ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
Related Articles
Advertisement
ಸಾರ್ವಜನಿಕ ಶೌಚಾಲಯ ಬಂದ್ :
ಬೀಚ್ ನಿರ್ಮಾಣವಾದ ಅನಂತರ ಮಂಗಳೂರು ತಾ.ಪಂ.ನ ಅನುದಾನದಲ್ಲಿ ನಿರ್ಮಾಣವಾಗಿರುವ ಸಾರ್ವ ಜನಿಕ ಶೌಚಾಲಯಕ್ಕೆ ವರ್ಷದ ಹಿಂದೆ ಬೀಗ ಹಾಕಲಾಗಿದೆ. ಇದರ ಹೊರಗೆ ಇರುವ ಕೈ ತೊಳೆಯುವ ಬೇಸಿನ್ ಸಹಿತ ಶೌಚಾಲಯದ ಇನ್ನಿತರ ವಸ್ತುಗಳಿಗೆ ಕಿಡಿಗೇಡಿಗಳು ಹಾನಿ ಮಾಡಿದ್ದು, ಇದರಿಂದ ಶೌಚಾಲಯವನ್ನು ಬಂದ್ ಮಾಡಲಾಗಿದೆ ಎನ್ನುತ್ತಾರೆ ಅದರ ಸ್ವತ್ಛತೆಯನ್ನು ಮಾಡುತ್ತಿದ್ದ ಸ್ಥಳೀಯ ನಿವಾಸಿ ದೇವಕಿ.
ಮಿನಿಸ್ಟರ್‌ಗಳು, ಜನಪ್ರತಿನಿಧಿಗಳು, ಅಧಿಕಾರಿಗಳು, ಬರ್ಪೆರ್.. ಕೋಟಿ ಕೋಟಿ ಯೋಜನೆ ಪರ್.. ಪೋಪೆರ್( ಬರ್ತಾರೆ.. ಹೇಳ್ತಾರೆ.. ಹೋಗ್ತಾರೆ) ಆದರೆ ಯಾರಲ್ಲೂ ಬೀಚ್‌ನ್ನು ಉಳಿಸುವ ಇಚ್ಛಾ ಶಕ್ತಿಯಿಲ್ಲ, ಇಲ್ಲಿ ಜೀವರಕ್ಷಕ ಪಡೆಗಳಿಲ್ಲ, ಪೊಲೀಸರು, ಹೋಂ ಗಾರ್ಡ್ ಗಳಿಲ್ಲ, ಪ್ರವಾಸಿಗರಿಗೆ ರಕ್ಷಣೆಯಿಲ್ಲ, ಬೀಚ್‌ನ ಸ್ವತ್ಛತೆ ಮಾ ಡುತ್ತಿರುವ ನನಗೆ 3ತಿಂಗಳಿನಿಂದ ಸಂಬಳವೂ ನೀಡಿಲ್ಲ.
-ದೇವಕಿ, ಸ್ಥಳೀಯ ನಿವಾಸಿ
ಬೀಚ್‌ನ ಅವ್ಯವಸ್ಥೆಯನ್ನು ಈಗಾಗಲೇ ಶಾಸಕ ಉಮಾನಾಥ ಕೋಟ್ಯಾನ್ ಅವರ ಗಮನಕ್ಕೆ ತರಲಾಗಿದೆ. ಪಕ್ಕದ ಹೆಜಮಾಡಿ ಕೋಡಿಯಲ್ಲಿ ನಿರ್ಮಾಣವಾಗಲಿರುವ ಜೆಟ್ಟಿಯ ಯೋಜನೆಗೆ ಪೂರಕವಾಗಿ ಮರವಂತೆ ಬೀಚ್‌ನಂತೆ 17 ಕೋಟಿ ರೂ. ವೆಚ್ಚದಲ್ಲಿ ಸಸಿಹಿತ್ಲು ಬೀಚ್ ಅನ್ನು ಅಭಿವೃದ್ಧಿ ಮಾಡಲು ತಾಂತ್ರಿಕ ಅನುಮತಿಯನ್ನು ನಿರೀಕ್ಷಿಸಲಾಗುತ್ತಿದೆ. ಇಲಾಖೆಗಳ ಅಧಿಕಾರಿಗಳಿಗೆ ಇಲ್ಲಿನ ಸ್ಥಿತಿಗತಿಯನ್ನು ತಿಳಿಸುವ ಕೆಲಸ ಮಾಡಲಾಗುವುದು. -ವಿನೋದ್‌ಕುಮಾರ್ ಬೊಳ್ಳೂರು, ಸದಸ್ಯರು, ದ.ಕ. ಜಿ.ಪಂ.