Advertisement

Rajeev Taranath: ಜೀವನವನ್ನೇ ಸಂಗೀತಕ್ಕೆ ಮುಡಿಪಿಟ್ಟ ಸಾಧಕ

11:33 PM Jun 11, 2024 | Team Udayavani |

1932ರ ಅಕ್ಟೋಬರ್‌ 17ರಲ್ಲಿ ರಾಯ ಚೂರು ಜಿಲ್ಲೆಯ ತುಂಗಭದ್ರಾ ಗ್ರಾಮದಲ್ಲಿರುವ ಪ್ರೇಮಾಯತನ ಆಶ್ರಮದಲ್ಲಿ ರಾಜೀವ್‌ ತಾರಾನಾಥರು ಅವರು ಜನಿಸಿದರು. ಅತ್ಯಂತ ಸರಳತೆ ಮತ್ತು ಶ್ರೇಷ್ಠ ಸಂಗೀತಕ್ಕೆ ಹೆಸರಾದ ರಾಜೀವ್‌ ಅವರು ತಮ್ಮ ಪ್ರಾರಂಭಿಕ ಪಾಠಗಳನ್ನು ತಮ್ಮ ತಂದೆ ಪಂಡಿತ ತಾರಾನಾಥರಿಂದ ಪಡೆದರು. ಕೇವಲ ಒಂಭತ್ತು ವರ್ಷದವರಿದ್ದಾಗ ಅವರು ಪ್ರಥಮ ಸಂಗೀತ ಕಛೇರಿಯನ್ನು ನಡೆಸಿದರು. ಇಪ್ಪತ್ತರ ತಾರುಣ್ಯದಲ್ಲಿ ಆಕಾಶವಾಣಿಯಲ್ಲಿ ಸಂಗೀತಗಾರರಾಗಿ ಹಾಡುತ್ತಿದ್ದರು. ರಾಜೀವ್‌ ತಾರಾನಾಥರು ಸಾಹಿತ್ಯದಲ್ಲಿ ಪಿಎಚ್‌.ಡಿ ಪದವಿ ಪಡೆದವರಾದರೂ, ತಮಗಿದ್ದ ಇಂಗ್ಲಿಷ್‌ ಪ್ರಾಧ್ಯಾಪಕ ಹುದ್ದೆ ತ್ಯಜಿಸಿ, ಸಂಗೀತವನ್ನು ಅಭ್ಯಸಿಸಲು ಕೊಲ್ಕತ್ತಾಗೆ ತೆರಳಿ ಅಲ್ಲಿ ಉಸ್ತಾದ್‌ ಅಲಿ ಅಕºರ್‌ ಖಾನ್‌ ಅವರ ಶಿಷ್ಯರಾದರು.  ಅಲಿ ಅಕºರ್‌ ಖಾನರು 2009ರಲ್ಲಿ ನಿಧನರಾಗುವವರೆಗೆ ರಾಜೀವ್‌ ತಾರಾನಾಥರು ಅವರ ಶಿಷ್ಯರಾಗಿಯೇ ಮುಂದುವರಿದಿದ್ದರು. ಅಕ್ಬರ್‌ ಅಲಿ ಖಾನ್‌ ಅವರಲ್ಲದೆ ಪಂಡಿತ್‌ ರವಿಶಂಕರ್‌, ಅನ್ನಪೂರ್ಣಾದೇವಿ, ಪಂಡಿತ್‌ ನಿಖೀಲ್‌ ಬ್ಯಾನರ್ಜಿ ಮತ್ತು ಉಸ್ತಾದ್‌ ಆಶಿಶ್‌ ಖಾನ ಮಾರ್ಗದರ್ಶನವನ್ನೂ ರಾಜೀವ್‌ ತಾರಾನಾಥರು ಪಡೆದುಕೊಂಡಿದ್ದರು.

Advertisement

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಕಲಾವಿಭಾಗದ ಮುಖ್ಯಸ್ಥರಾಗಿ 1995ರಿಂದ 2005ರ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ರಾಜೀವ ತಾರಾನಾಥರು, ಬಳಿಕ ಮೈಸೂರಿನ ನಿವಾಸಿಯಾಗಿ ಹಲವಾರು ಶಿಷ್ಯರಿಗೆ ಸಂಗೀತವನ್ನು ಧಾರೆ ಎರೆದರು. ಭಾರತ ಮತ್ತು ವಿದೇಶಗಳಲ್ಲೆಡೆಗಳಲ್ಲಿ ರಾಜೀವ್‌ ತಾರಾನಾಥರ ಸಂಗೀತ ಕಾರ್ಯಕ್ರಮಗಳು ಜರುಗಿವೆ. ಆಸ್ಟ್ರೇಲಿಯಾ, ಯೂರೋಪ್‌, ಯೆಮನ್‌, ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲೆಲ್ಲಾ ಅವರ ಸಂಗೀತ ಕಾರ್ಯಕ್ರಮಗಳು ನಡೆದು ಅಪಾರ ಅಭಿಮಾನಿ ಬಳಗ ಅವರಿಂದ ಸ್ಫೂರ್ತಿ ಪಡೆದಿದೆ.

ಇದರ ಜತೆಗೆ ಹಲವು ಚಲನಚಿತ್ರಗಳಿಗೂ ರಾಜೀವ್‌ ತಾರಾನಾಥರ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಕನ್ನಡದ ಸಂಸ್ಕಾರ, ಪಲ್ಲವಿ, ಅನುರೂಪ, ಶೃಂಗಾರ ಮಾಸ, ಪೇಪರ್‌ ಬೋಟ್‌, ಮಲಯಾಳಂನ ಕಾಂಚನ ಸೀತಾ ಮತ್ತು ಕಟವ್‌ ಮುಂತಾದವು.

ಹತ್ತಾರು ಧ್ವನಿ ಸುರುಳಿಗಳು: ರಾಜೀವ್‌ ತಾರಾನಾಥರ ಪ್ರಮುಖ ಸಂಗೀತ ಧ್ವನಿ ಸುರುಳಿಗಳೆಂದರೆ ಮನನ ಮೆಡಿಟೇಶನ್‌: ಬಿಹಾಗ್‌ ಮತ್ತು ಭೈರವಿ ರಾಗಗಳು, ಹಾರ್ಮನಿ; ಸಿಂಧು ಭೈರವಿ ರಾಗಮಾಲಿಕೆ, ಕಾಫಿ ರಾಗದ ಹಲವು ಮುಖಗಳು, ರಸರಂಗ್‌, ರಿಫ್ಲೇಕ್ಸನ್‌ ಅರೌಂಡ್‌ ನೂನ್‌ ತೋಡಿ ಮತ್ತು ಕಾಫಿ ರಾಗಗಳು, ಡೇ ಬ್ರೇಕ್‌ ಆ್ಯಂಡ್‌ ಎ ಕ್ಯಾಂಡಲ್‌ ಎಂಡ್‌, ಭಾರತೀಯ ಶಾಸ್ತ್ರೀಯ ಸಂಗೀತ; ರಾಗ ನಟಭೈರೋ, ರಾಗ ಕೌಶಿ ಭೈರವಿ, ಭೈರವಿ, ಓರ್ವ ದಿ ಮೂನ್‌-ರಾಗ ಚಂದ್ರ ನಂದನ, ರಾಗ ಅಹಿರ್‌ ಭೈರವ್‌, ರಾಗ ಚಾರುಕೇಶಿ, ದಿ ಮ್ಯಗ್ನಿ ಫಿಶನ್ಸ್‌ ಆಫ್ ಯಮನ್‌ ಕಲ್ಯಾಣ್‌, ಇನ್‌ ದಿ ಮಾಸ್ಟರ್ಸ್‌  ಟ್ರೆಡಿಶನ್‌, ರಾಗ್‌ ಬಸಂತ್‌ ಮುಖಾರಿ, ರಾಗ್‌ ಕಿರ್ವಾಣಿ, ರಾಗ್‌ ಕೋಮಲ್‌ ದುರ್ಗಾ, ರಾಗ್‌ ಪುರಿಯಾ ಧನಶ್ರೀ.1989ರಿಂದ 1992ರ ಅವಧಿಯಲ್ಲಿ ರಾಜೀವ್‌ ತಾರಾನಾಥರು ಫೋರ್ಡ್‌ ಪ್ರತಿಷ್ಠಾನದ ವಿದ್ವಾಂಸರಾಗಿ ಮೈಹಾರ್‌ – ಅÇÉಾ ಉದ್ದಿನ್‌ ಘರಾಣಾದ ಸಂಗೀತ ಪದ್ಧತಿಗಳ ಕುರಿತಾಗಿ ಸಂಶೋಧನೆ ನಡೆಸಿ ಆ ಘರಾಣದ ಭೋಧನೆಗಳ ಕುರಿತಾದ ವಿದ್ವತ್‌ ಪೂರ್ಣ ಗ್ರಂಥವನ್ನು ಪ್ರಕಟಿಸಿದರು.

ಪ್ರಶಸ್ತಿ ಮತ್ತು ಗೌರವಗಳು

Advertisement

1993 ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ

1996ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

1998ರಲ್ಲಿ ಸಂಗೀತ ರತ್ನ ಮೈಸೂರು ಟಿ. ಚೌಡಯ್ಯ ಸ್ಮಾರಕ ಪ್ರಶಸ್ತಿ,

1999-2000 ಸಂಗೀತ, ನಾಟಕ ಅಕಾಡೆಮಿ ಪ್ರಶಸ್ತಿ,

2006ರಲ್ಲಿ ಕೆಂಪೇಗೌಡ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ

2013ರಲ್ಲಿ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟ್ ವತಿಯಿಂದ ರಾಷ್ಟ್ರೀಯ ಸಮ್ಮಾನ ಗೌರವ

2019ರಲ್ಲಿ ಪದ್ಮಶ್ರೀ ಪ್ರಶಸ್ತಿ, ಮುರುಘಾ ಮಠದ ಬಸವಶ್ರೀ ಪ್ರಶಸ್ತಿ

Advertisement

Udayavani is now on Telegram. Click here to join our channel and stay updated with the latest news.

Next