Advertisement

ಸರ್ದಾರ್ಜಿ ಜೋಕ್‌ ತಡೆಗಟ್ಟಲು ಅಸಾಧ್ಯ; ಸುಪ್ರೀಂಕೋರ್ಟ್‌

12:46 PM Feb 08, 2017 | Sharanya Alva |

ನವದೆಹಲಿ: ಸಿಖ್‌ ಸಮುದಾಯವನ್ನು ಲೇವಡಿ ಮಾಡುವ ಜೋಕ್ಸ್‌ಗಳಿಗೆ ನಿಷೇಧ ಹೇರಲು ಸಾಧ್ಯವಿಲ್ಲ. ಅದನ್ನು ತಡೆಯಲು ನಿಯಮಗಳನ್ನು ಜಾರಿ ಮಾಡುವ ಮೂಲಕ ನೈತಿಕ ಮಾರ್ಗದರ್ಶನ ನೀಡಲು ಸಾಧ್ಯವಿಲ್ಲ . ಒಂದು ವೇಳೆ ಅಂಥ ಆದೇಶ ನೀಡಿದರೂ ಅದನ್ನು ಜಾರಿಗೊಳಿಸುವವರು ಯಾರೆಂದು ಎಂದು ಸುಪ್ರೀಂಕೋರ್ಟ್‌ ಮಂಗಳವಾರ ಹೇಳಿದೆ.

Advertisement

ನ್ಯಾಯಮೂರ್ತಿಗಳಾದ ದೀಪಕ್‌ ಮಿಶ್ರಾ ಮತ್ತು ಆರ್‌.ಭಾನುಮತಿ ನೇತೃತ್ವದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸಮುದಾಯವನ್ನು ಗುರಿಯಾಗಿಸಿಕೊಂಡು ಲೇವಡಿ ಮಾಡುವಂಥ ಜೋಕ್ಸ್‌ ಗಳು ಇವೆ. ಎಸ್‌ಎಂಎಸ್‌, ಇಂಟರ್‌ನೆಟ್‌ಗಳಲ್ಲಿ ಅವುಗಳು ಹರಿದಾಡುತ್ತಿವೆ.

ಅವುಗಳನ್ನು ನಿಷೇಧಿಸುವಂತೆ ಅಮೃತಸರದ ಶಿರೋಮಣಿ ಗುರುದ್ವಾರಾ ಪ್ರಬಂಧಕ ಸಮಿತಿ ಸೇರಿದಂತೆ ಹಲವು ಸಿಖ್‌ ಸಂಘಟನೆಗಳು ಕಳೆದ ವರ್ಷದ ಮಾರ್ಚ್‌ನಲ್ಲಿ ಸುಪ್ರೀಂಕೋರ್ಟಿಗೆ ಅರಿಕೆ ಮಾಡಿಕೊಂಡಿದ್ದವು.
ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶಾಖಾ ಪ್ರಕರಣದಂತೆ ಈ ಜೋಕ್ಸ್‌ಗಳ ವಿಚಾರವನ್ನೂ ಪರಿಗಣಿಸಬೇಕು ಎಂದು ಸಂಘಟನೆಗಳ ವಾದವನ್ನು ಸುಪ್ರೀಂಕೋರ್ಟ್‌ ಒಪ್ಪಲಿಲ್ಲ. ಇಂಥ ಪ್ರಕರಣಗಳ ವಿರುದ್ಧ ಹೋರಾಡಿ ಗೌರವಕ್ಕೆ ಚ್ಯುತಿ ತಂದುಕೊಳ್ಳಬೇಡಿ ಎಂದಿತು.

*ನಿಯಮಗಳ ಬಗ್ಗೆ ಆದೇಶ ‌ ಸುಲಭ; ಅನುಷ್ಠಾನ ಕಷ್ಟ

*„ವಿಶಾಖಾ ಪ್ರಕರಣ, ಜೋಕ್ಸ್‌ ವಿವಾದ ಬೇರೆ ಬೇರೆ

Advertisement

„*„ಇಂಥ ಪ್ರಕರಣಗಳ ವಿರುದ್ಧ ಕಾನೂನು ಹೋರಾಟ ನಡೆಸಿ ಚ್ಯುತಿ ತಂದುಕೊಳ್ಳಬೇಡಿ

Advertisement

Udayavani is now on Telegram. Click here to join our channel and stay updated with the latest news.

Next