Advertisement

ಶರತ್‌ ಕೊಲೆ ಪ್ರಕರಣ: ಐವರ ವಿಚಾರಣೆ, ಇಬ್ಬರ ಹೇಳಿಕೆ ದಾಖಲು

03:20 AM Jul 16, 2017 | Team Udayavani |

ಮಂಗಳೂರು: ಆರೆಸ್ಸೆಸ್‌ ಕಾರ್ಯಕರ್ತ ಶರತ್‌ ಮಡಿವಾಳ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇದುವರೆಗೆ ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಹಾಗೂ ಇಬ್ಬರ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.

Advertisement

ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ ಕುಮಾರ್‌ ರೆಡ್ಡಿ ನೀಡಿದ ಮಾಹಿತಿಯನ್ವಯ, ಶರತ್‌ ಕೊಲೆ ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಕೊಲೆಗೆ ಸಂಬಂಧಿಸಿ ಬಲವಾದ ಮಾಹಿತಿಗಳು ದೊರೆತಿವೆ. ನೈಜ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವ ನಿಟ್ಟಿನಲ್ಲಿ ಸ್ವಲ್ಪ ಸಮಯ ಬೇಕಾಗಬಹುದು. ಈ ನಿಟ್ಟಿನಲ್ಲಿ ಜನರ ಸಹಕಾರವೂ ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ 5 ತನಿಖಾ ತಂಡಗಳನ್ನು ರಚಿಸಲಾಗಿದ್ದು, ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ. ಕೆಲವೊಂದು ಮಾಹಿತಿಗಳ ಆಧಾರದಲ್ಲಿ ಪೊಲೀಸರು ತನಿಖಾ ಪ್ರಕ್ರಿಯೆ ಚುರುಕುಗೊಳಿಸಿದ್ದು, ಶೀಘ್ರದಲ್ಲಿ ಆರೋಪಿಗಳ ಬಂಧನ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

“ಸ್ಫೋಟಕ ಮಾಹಿತಿ’: ವಜ್ರದೇಹಿ ಶ್ರೀಗಳಿಗೆ
ಪೊಲೀಸ್‌ ನೋಟಿಸ್‌
ಬಂಟ್ವಾಳ
: ಬಿ.ಸಿ.ರೋಡ್‌ನ‌ ಶರತ್‌ ಮಡಿವಾಳ ಕೊಲೆ ಹಿಂದಿನ ಪಿತೂರಿ ಹಾಗೂ ಕೊಲೆಯ ಸ್ಫೋಟಕ ಮಾಹಿತಿ ತನ್ನಲ್ಲಿರುವುದಾಗಿ ಹೇಳಿಕೆ ನೀಡಿದ್ದ  ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರಿಗೆ ಬಂಟ್ವಾಳ ಪೊಲೀಸ್‌ ವೃತ್ತ ನಿರೀಕ್ಷಕರು ಜು. 14ರಂದು ನೋಟಿಸ್‌ ಜಾರಿ ಮಾಡಿದ್ದಾರೆ.

ಶ್ರೀಗಳು ಶುಕ್ರವಾರ ಮಂಗಳೂರಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ತನ್ನಲ್ಲಿ ಸ್ಫೋಟಕ ಮಾಹಿತಿ ಇದ್ದು, ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಿದರೆ ಬಹಿರಂಗಪಡಿಸುವೆ ಎಂದು ತಿಳಿಸಿದ್ದರು.

Advertisement

ಜು. 17ರ ಬೆಳಗ್ಗೆ 11ಕ್ಕೆ ಬಂಟ್ವಾಳ ನಗರ ಠಾಣೆಗೆ ಬಂದು ಮಾಹಿತಿ ನೀಡುವಂತೆ ಶ್ರೀಗಳಿಗೆ ಸೂಚಿಸಲಾಗಿದೆ. ನೊಟೀಸನ್ನು ಖುದ್ದು ಜಾರಿ ಮಾಡಿ ದಿನಾಂಕ ಸಹಿತ ಸಹಿ ಪಡೆದು ಪಾಲನಾ ವರದಿ ಒಪ್ಪಿಸುವಂತೆ ಎಸ್‌ಐಗೆ ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next