Advertisement
ಅಸ್ಸಾಂನ 145 ರನ್ನಿಗೆ ಜವಾಬಾಗಿ ಮೊದಲ ದಿನ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿದ್ದ ಕರ್ನಾಟಕ, ದ್ವಿತೀಯ ದಿನ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಸಮರ್ಥ್ 123 ರನ್ ಬಾರಿಸಿದರೆ, ಕೆ. ಗೌತಮ್ 147 ರನ್ ಹೊಡೆದು ಬ್ಯಾಟಿಂಗ್ ಕಾಯ್ದು ಕೊಂಡಿದ್ದಾರೆ. ಈಗಾಗಲೇ 282 ರನ್ ಮುನ್ನಡೆಯಲ್ಲಿರುವ ಕರ್ನಾ ಟಕ, ಸೋಮವಾರವೇ ಇನ್ನಿಂಗ್ಸ್ ಜಯ ಭೇರಿ ಬಾರಿಸಿದರೆ ಅಚ್ಚರಿ ಇಲ್ಲ.
ಆರ್. ಸಮರ್ಥ್ ಒಟ್ಟು 234 ಎಸೆತ ನಿಭಾಯಿಸಿ 10 ಬೌಂಡರಿ ಗಳೊಂದಿಗೆ ತಮ್ಮ 6ನೇ ಶತಕ ಸಂಭ್ರಮವನ್ನು ಆಚರಿಸಿದರು. ಇದರಲ್ಲಿ 10 ಬೌಂಡರಿಗಳಿದ್ದವು. ಮೊದಲ ದಿನ 4 ವಿಕೆಟ್ ಹಾರಿಸಿದ್ದ ಕೆ. ಗೌತಮ್ ದ್ವಿತೀಯ ದಿನ ತಮ್ಮ ಬ್ಯಾಟಿಂಗ್ ತಾಕತ್ತನ್ನೂ ಅನಾವರಣ ಗೊಳಿಸಿ ರಣಜಿಯಲ್ಲಿ ಶತಕದ ಖಾತೆ ತೆರೆದರು. ಅತ್ಯಂತ ಆಕ್ರಮಣಕಾರಿ ಆಟವಾಡಿದ ಗೌತಮ್ ಅಸ್ಸಾಂ ಬೌಲರ್‌ಗಳನ್ನು ಕಾಡುತ್ತ ಹೋಗಿ 158 ಎಸೆತಗಳಿಂದ 147 ರನ್ ಬಾರಿಸಿ ದರು. ಇದು ಅಸ್ಸಾಂನ ಮೊದಲ ಇನ್ನಿಂಗ್ಸ್ ಮೊತ್ತವನ್ನು ಮೀರಿಸಿದ ಸಾಧನೆಯಾಗಿದೆ. 6 ಸಿಕ್ಸರ್ ಹಾಗೂ 10 ಬೌಂಡರಿ ಹೊಡೆದದ್ದು ಗೌತಮ್ ಅವರ ಬ್ಯಾಟಿಂಗ್ ರಭಸಕ್ಕೆ ಸಾಕ್ಷಿ. 3ನೇ ದಿನ ಈ ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ಸೂಚನೆಯೊಂದನ್ನು ಗೌತಮ್ ರವಾನಿಸಿದ್ದಾರೆ. ಕೆ. ಗೌತಮ್ ಜತೆ 38 ರನ್ ಮಾಡಿರುವ ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇವರಿಬ್ಬರ 7ನೇ ವಿಕೆಟ್ ಜತೆಯಾಟ ದಲ್ಲಿ 109 ರನ್ ಹರಿದು ಬಂದಿದೆ. ಕರ್ನಾಟಕ ಸರದಿಯ ಇತರ ಪ್ರಮುಖ ಸ್ಕೋರರ್‌ಗಳೆಂದರೆ ಸ್ಟುವರ್ಟ್ ಬಿನ್ನಿ (41), ಮಾಯಾಂಕ್ ಅಗರ್ವಾಲ್ (31) ಮತ್ತು ಕೌನೈನ್ ಅಬ್ಟಾಸ್ (30). ಕೀಪರ್ ಸಿ.ಎಂ. ಗೌತಮ್ ಗಳಿಕೆ ಕೇವಲ 3 ರನ್.
Related Articles
Advertisement
ಅಸ್ಸಾಂ ಪರ ಅರೂಪ್ ದಾಸ್ ಮತ್ತು ಸ್ವರೂಪಂ ಪುರ್ಕಾಯಸ್ಥ ತಲಾ 3 ವಿಕೆಟ್ ಹಾರಿಸಿದರು.
ಸಂಕ್ಷಿಪ್ತ ಸ್ಕೋರ್: ಅಸ್ಸಾಂ-145. ಕರ್ನಾಟಕ-6 ವಿಕೆಟಿಗೆ 427 (ಕೆ. ಗೌತಮ್ ಬ್ಯಾಟಿಂಗ್ 147, ಆರ್. ಸಮರ್ಥ್ 123, ಬಿನ್ನಿ 41, ಶ್ರೇಯಸ್ ಗೋಪಾಲ್ ಬ್ಯಾಟಿಂಗ್ 38, ಅಗರ್ವಾಲ್ 31, ಅಬ್ಟಾಸ್ 30, ಅರೂಪ್ ದಾಸ್ 101ಕ್ಕೆ 3, ಪುರ್ಕಾಯಸ್ಥ 80ಕ್ಕೆ 3).