ಮುಂಬಯಿ: ಜಿಎಸ್‌ಬಿ ಸಭಾ ದಹಿಸರ್ ಬೊರಿವಲಿ ಸಂಸ್ಥೆಯು ದಶ ವಾರ್ಷಿಕವಾಗಿ ಆಚರಿಸಿದ ನವರಾತ್ರಿ ಉತ್ಸವ 2017 ಸಂಭ್ರಮದಲ್ಲಿ ಹಿಂದಿ ತೆನಾಲಿರಾಮ ಧಾರಾವಾಹಿಯ ಕಿರುತೆರೆ ನಟ ಕೃಷ್ಣ ಭಾರದ್ವಾಜ್ ಮತ್ತು ಪ್ರಿಯಂವದಾ ಕಾಂತ್, ಪಟೇಲ್ ಕೀ ಪಂಜಾಬಿ ಶಾØದಿ ಹಿಂದಿ ಚಲನಚಿತ್ರದ ಅಭಿನೇತ್ರಿ ಪಾಯಲ್ ಗೋಶ್, ನಟಿ ಶರ್ಮಿಳಾ ಶಿಂಧೆ ರಾಜರಾಮ್ ಮತ್ತಿತರರು ಆಗಮಿಸಿ ದೇವಿ ದರ್ಶನಗೈದು ತುಲಭಾರ ಸೇವೆ ನಡೆಸಿದರು.
ದಹಿಸರ್ ಪೂರ್ವದ ಎನ್. ಎಲ್ ಕಾಂಪ್ಲೆಕ್ಸ್‌ನ ಸಾರಸ್ವತ ಕಲ್ಚರಲ್ ಆ್ಯಂಡ್ ರಿಕ್ರಿಯೇಷನ್ ಸೆಂಟರ್ ಮೈದಾನದ ಮಾಧವೇಂದ್ರ ಸಭಾಗೃಹದಲ್ಲಿನ ಭವ್ಯ ಅಲಂಕೃತ ಮಂಟಪದಲ್ಲಿ ನವರೂಪಗಳಿಂದ ಪುಷ್ಪಾಲಂಕೃತವಾಗಿ ಶೃಂಗರಿಸಿ ರಜತ ಪ್ರಭಾವಳಿಯೊಂದಿಗೆ ಸ್ವರ್ಣ ಮುಕುಟ, ವಜ್ರ, ಚಿನ್ನಾಭರಣ, ಸರಸ್ವತಿ ದೇವಿಯ ಆರಾಧನೆಯನ್ನು ಗಣ್ಯರು ಮುಕ್ತ ಕಂಠದಿಂದ ಪ್ರಶಂಸಿದರು.
ಮಹಾಲಕ್ಷ್ಮೀ ಪೂಜೆ, ದಿನ 12 ಅಡಿ ಎತ್ತರದ ಬಾಲಾಜಿಯೊಂದಿಗೆ ಶ್ರೀ ಮಹಾಲಕ್ಷ್ಮೀ ರಾರಾಜಿಸಿದ್ದು ಅಂದು ವಿಘ್ನಾರ್ಥ ಭಜನ ಮಂಡಳಿಯಿಂದ ಭಜನೆ, ಅರಸಿನ ಕುಂಕುಮ ಕಾರ್ಯ ಕ್ರಮ ನೆರವೇರಿತ್ತು.
ವೇದಮೂರ್ತಿ ಲಕ್ಷ್ಮೀ ನಾರಾಯಣ ಭಟ್, ವೇದ ಮೂರ್ತಿ ಉಲ್ಲಾಸ್ ಭಟ್, ವೇದಮೂರ್ತಿ ಮಂಜುನಾಥ್ ಪುರಾಣಿಕ್, ವೇದಮೂರ್ತಿ ಪ್ರಶಾಂತ್ ಪುರಾಣಿಕ್, ವೇದಮೂರ್ತಿ ವಿನಾಯಕ ಪುರಾಣಿಕ್ ಮತ್ತಿತರ ವಿದ್ವಾಂಸರು ವಿವಿಧ ಪೂಜಾಧಿಗಳನ್ನು ನೆರವೇರಿಸಿ ಆಗಮಿಸಿದ್ದ ಸರ್ವ ಸದ್ಭಕ್ತರಿಗೆ ಪ್ರಸಾದ ವಿತರಿಸಿ ಅನುಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ಕುಂದಾಪುರ ಶ್ರೀನಿವಾಸ ಪ್ರಭು, ಜಿ. ಡಿ. ರಾವ್, ಸಿ. ಎಂ. ಎಸ್ ರಾವ್, ಶೋಭಾ ವಿ. ಸುಗುಣಾ ಕೆ. ಕಾಮತ್, ಅಧ್ಯಕ್ಷ ಕೆ. ಆರ್. ಮಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಎಂ. ಉದಯ ಪಡಿಯಾರ್, ಗೌರವ ಕೋಶಾಧಿಕಾರಿ ಮೋಹನ್ ಎ. ಕಾಮತ್, ಜತೆ ಕಾರ್ಯ ದರ್ಶಿಗಳಾದ ಸಾಣೂರು ಮನೋಹರ್ ವಿ. ಕಾಮತ್, ವಿನೋದ್ ಕೆ. ಪ್ರಭು ಸಹಿತ ಸೇವಾಕರ್ತರು ಉಪಸ್ಥಿತರಿದ್ದು ವಿಜಯದಶಮಿ ದಿನ ಶಾರದಾದೇವಿಗೆ ಮಹಾಪೂಜೆ ನೆರವೇರಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್