Advertisement

ವೀರಶೈವ-ಲಿಂಗಾಯತ ಬಿಕ್ಕಟ್ಟು ನಿವಾರಣೆಗೆ ಶರಣ ಪ್ರಕಾಶ್‌ ಯತ್ನ

07:35 AM Sep 09, 2017 | |

ಬೆಂಗಳೂರು: ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಹೆಸರಿನಲ್ಲಿ ಸಮಾಜ ಒಡೆಯುವುದನ್ನು ತಡೆಯಲು ವೀರಶೈವ ಮಹಾಸಭೆ ಮತ್ತು ಲಿಂಗಾಯತ ಧರ್ಮ ಹೋರಾಟದ ಮುಖಂಡರನ್ನು ಒಂದೆಡೆ ಸೇರಿಸಲು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್‌ ಪಾಟೀಲ್‌ ಪ್ರಯತ್ನ ಆರಂಭಿಸಿದ್ದಾರೆ.

Advertisement

ಈ ಕುರಿತಂತೆ ಶುಕ್ರವಾರ ವೀರಶೈವ ಮಹಾಸಭೆ ಅಧ್ಯಕ್ಷ ಶಾಮ ನೂರು ಶಿವಶಂಕರಪ್ಪ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ,ಏಕತೆಯ ಮಂತ್ರ ಜಪಿಸುವ ಪ್ರಸ್ತಾಪ ಮಾಡಿದ್ದಾರೆಂದು ತಿಳಿದು ಬಂದಿದೆ.

ಶಾಮನೂರು ಶಿವಶಂಕರಪ್ಪ ಕೂಡ ಈ ಪ್ರಸ್ತಾಪಕ್ಕೆ ಸಹಮತ ವ್ಯಕ್ತಪಡಿಸಿದ್ದು, ಇದೇ ಸೆ.13 ಅಥವಾ 14ರಂದು ಎರಡೂ ಕಡೆಯ ಮುಖಂಡರ ಸಭೆ ನಡೆಯುವ ಸಾಧ್ಯತೆ ಇದೆ.

ಈಗಾಗಲೇ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಬೇಡಿಕೆಗೆ ಕೇಂದ್ರ ಸರ್ಕಾರ ನಿರಾಕರಿಸಿರುವುದರಿಂದ
ಮತ್ತೆ ಅದೇ ಪ್ರಸ್ತಾಪ ಕಳುಹಿಸಿದರೆ ಆಗುವ ಸಾಧಕ ಬಾಧಕಗಳ ಕುರಿತು ಅಂದಿನ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಬುಧವಾರದ ಸಭೆಯಲ್ಲಿ ವೀರಶೈವ ಮಹಾಸಭೆಯ ಪದಾಧಿಕಾರಿಗಳು ಹಾಗೂ ವೀರಶೈವ ಹೊರತುಪಡಿಸಿ ಲಿಂಗಾಯತ ಪ್ರತ್ಯೇಕ ಧರ್ಮ ಕ್ಕಾಗಿ ಹೋರಾಟ ನಡೆಸುತ್ತಿರುವ ಮುಂಚೂಣಿ ನಾಯಕರಾದ ಎಂ.ಬಿ.ಪಾಟೀಲ್‌, ವಿನಯ ಕುಲಕರ್ಣಿ, ಬಸವರಾಜ ಹೊರಟ್ಟಿ, ಬಸವರಾಜ ರಾಯರೆಡ್ಡಿ, ಎಸ್‌.ಎಂ. ಜಾಮದಾರ್‌ ಸೇರಿದಂತೆ ಕೆಲವೇ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.

Advertisement

ವೀರಶೈವ ಮಹಾಸಭೆ ತಮ್ಮ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸುವಂತೆ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹಾಗೂ ಸಿದ್ಧಗಂಗಾ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಮನವಿ ಮಾಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೆ.18ಕ್ಕೆ ಗುರು ವಿರಕ್ತರ ಸಭೆ ಕರೆದು ವೀರಶೈವ ಲಿಂಗಾಯತ ಒಂದೇ ಎಂಬುವುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನಕ್ಕೆ ವೀರಶೈವ ಮಹಾಸಭೆ ಮುಂದಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next