Advertisement
ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲ ಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಉಮಾಶ್ರೀ ಅವರು ಅಬ್ಬಕ್ಕ ಪ್ರಶಸ್ತಿ ಮತ್ತು ಪುರಸ್ಕಾರವನ್ನು ಪ್ರದಾನ ಮಾಡಿದರು. ಉಳ್ಳಾಲದ ರಾಣಿ ಅಬ್ಬಕ್ಕ ನಾಡಿಗೆ ಸ್ವಾಭಿಮಾನವನ್ನು ಕಟ್ಟಿಕೊಟ್ಟ ಧೀಮಂತ ಮಹಿಳೆಯಾಗಿದ್ದು, ಅವರ ಕಾಲದಲ್ಲಿ ಇದ್ದ ಧರ್ಮ ಸಮನ್ವಯ ಪ್ರಸ್ತುತ ದಿನಗಳಲ್ಲೂ ಮುಂದುವರಿಯಬೇಕಾಗಿದೆ; ಸೌಹಾರ್ದಯುತ, ಸ್ವಸ್ಥ ಸಮಾಜ ಪುನರುತ್ಥಾನವಾಗಬೇಕಾಗಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು.
ವೀರರಾಣಿ ಅಬ್ಬಕ್ಕನ ಹೆಸರಿನಲ್ಲಿ ಜಿಲ್ಲಾಮಟ್ಟದ ರಂಗಮಂದಿರ ಮತ್ತು ಅಬ್ಬಕ್ಕ ಭವನ ನಿರ್ಮಾಣಕ್ಕೆ 8 ಕೋ.ರೂ.ಗಳನ್ನು ಸರಕಾರ ಬಿಡುಗಡೆ ಮಾಡಿದೆ. ಇಲ್ಲಿನ ಸಚಿವರ ಒತ್ತಾಸೆಯ ಮೂಲಕ ಈ ಅನುದಾನ ಬಿಡುಗಡೆಗೊಂಡಿದ್ದು, ಅವರ ಅಭಿವೃದ್ಧಿಪರ ದೂರದೃಷ್ಟಿಯ ಕಾರಣದಿಂದ ಬೇಡಿಕೆಗೆ ಇಲ್ಲವೆನ್ನದೆ ನೀಡಲಾಗಿದೆ ಎಂದು ಸಚಿವೆ ಉಮಾಶ್ರೀ ತಿಳಿಸಿದರು.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಲೋಕಾಯುಕ್ತ ನ್ಯಾ| ಸಂತೋಷ್ ಹೆಗ್ಡೆ ಮಾತನಾಡಿದರು. ಮೇಯರ್ ಕವಿತಾ ಸನಿಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಮೋಹನ್ ಶೆಟ್ಟಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕರಂಬಾರ್ ಮಹಮ್ಮದ್, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹಿರಿಯ ಸಾಹಿತಿ ಬಿ.ಎನ್. ಸುಮಿತ್ರಾಬಾಯಿ, ಉಳ್ಳಾಲ ನಗರಸಭಾ ಅಧ್ಯಕ್ಷ ಕುಂಞಿಮೋನು, ಸಮಾಜ ಸೇವಕ ಹೈದರ್ ಪರ್ತಿಪ್ಪಾಡಿ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಎಫ್‌ಕೆಸಿಸಿಐ ಹಿರಿಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ, ಛೋಟಾ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ| ಶಿವಕುಮಾರ್ ಮಗದ, ಗ್ರಾ.ಪಂ. ಸದಸ್ಯ ದೀಪಕ್ ಪಿಲಾರ್, ನ್ಯಾಯವಾದಿ ಗಂಗಾಧರ್ ಉಳ್ಳಾಲ, ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ್ ರೇವಣRರ್, ವಿದುಷಿ ರಾಜಶ್ರೀ ಉಳ್ಳಾಲ, ಕೌನ್ಸಿಲರ್ ರಝಿಯಾ ಇಬ್ರಾಹಿಂ ಉಪಸ್ಥಿತರಿದ್ದರು. ರಾಜ್ಯೋತ್ಸವ ಪ್ರಶಸ್ತಿ ಹಾಗೂ ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಉಳ್ಳಾಲ ಮೋಹನ್ ಕುಮಾರ್ ಅವರನ್ನು ಸಮ್ಮಾನಿಸಲಾಯಿತು.
Related Articles
Advertisement
ದಿನಕರ ಉಳ್ಳಾಲ ಸ್ವಾಗತಿಸಿ ಪ್ರಸ್ತಾವನೆಗೈದರು. ಧನಲಕ್ಷ್ಮೀ ಗಟ್ಟಿ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಕೋಶಾಧಿಕಾರಿ ಆನಂದ ಅಸೈಗೋಳಿ ವಂದಿಸಿದರು.
ರಾಣಿ ಅಬ್ಬಕ್ಕ ಪ್ರಗತಿಪರ ಚಿಂತನೆ ಗಳನ್ನು ಮೈಗೂಡಿಸಿಕೊಂಡಿದ್ದರು. ಎಲ್ಲ ಧರ್ಮ ದವರನ್ನು ಸೇರಿಸಿಕೊಂಡು ವ್ಯಾಪಾರ ಒಪ್ಪಂದಗಳನ್ನು ಮಾಡಿದಾಕೆ. ಸಮಾಜದ ಅಭಿವೃದ್ಧಿಗಾಗಿ ತನ್ನ ಪತಿ ಮತ್ತು ಪೋರ್ಚುಗೀಸರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ.– ಸಾರಾ ಅಬೂಬಕ್ಕರ್