Advertisement

ಸಾರಾ ಅಬೂಬಕ್ಕರ್‌ ಸಾಹಿತ್ಯ ಪ್ರಶಸ್ತಿ ಪ್ರದಾನ, ಸಮ್ಮಾನ 

11:14 AM Mar 25, 2018 | |

ಮಹಾನಗರ: ಕರಾವಳಿ ಲೇಖಕಿಯರ -ವಾಚಕಿಯರ ಸಂಘದ ಆಶ್ರಯದಲ್ಲಿ ಮಹಿಳಾ ದಿನಾಚರಣೆ, ಸಾಧಕಿಯರಿಗೆ ಸಮ್ಮಾನ ಮತ್ತು ಸಾರಾ ಅಬೂಬಕ್ಕರ್‌ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭ ಶನಿವಾರ ಸಾಹಿತ್ಯ ಸದನದಲ್ಲಿ ನಡೆಯಿತು.

Advertisement

ಮುಖ್ಯ ಅತಿಥಿಯಾಗಿದ್ದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಉಮಾ ಪ್ರಶಾಂತ್‌ ಮಾತನಾಡಿ, ಉಳಿದ ಎಲ್ಲ ಕೆಲಸಗಳಿಂದಲೂ ಸಮಾಜ ಸೇವೆ ಮಾಡುವುದು ತುಂಬಾ ಕಷ್ಟದ ಕೆಲಸ. ಯಾಕೆಂದರೆ ಅದು ಪ್ರತಿಫಲ ಸಿಗದೆ ಇರುವ ಕೆಲಸ. ಅದರಲ್ಲೂ ಮಹಿಳೆಯರು ಮುಂಚೂಣಿಯಲ್ಲಿರುವುದು ಸಂತಸದ ವಿಚಾರ ಎಂದರು.

ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ದೊರೆತರೂ ಅವರು ಎದುರಿಸುವ ಸಮಸ್ಯೆಗಳು ಇದ್ದೇ ಇದೆ.
ಇವೆಲ್ಲದರ ವಿರುದ್ಧ ಹೆಣ್ಣು ಮಕ್ಕಳು ದನಿ ಎತ್ತಬೇಕಾಗಿದೆ ಎಂದರು. ಸಮಾಜ ಸೇವಕಿ ಗಾಯತ್ರಿ ಪ್ರಭು, ಕೃಷಿಕ ಮಹಿಳೆ ಗುಲಾಬಿ, ಪೌರ ಕಾರ್ಮಿಕರಾದ ಗೀತಾ ಅವರನ್ನು ಸಮ್ಮಾನಿಸಲಾಯಿತು.

ಅಧ್ಯಕ್ಷೆ ಶಶಿಲೇಖಾ ಬಿ., ಉಪಾಧ್ಯಕ್ಷೆ ವಿಜಯಲಕ್ಷ್ಮೀ ಭಟ್‌ ಯು., ಕಾರ್ಯದರ್ಶಿ ರೂಪಕಲಾ ಆಳ್ವ, ಜತೆ ಕಾರ್ಯದರ್ಶಿ ಅರುಣಾ ನಾಗರಾಜ್‌, ಖಜಾಂಚಿ ಸುಜಯಾ ಶೆಟ್ಟಿ ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ
ಆಕಾಶವಾಣಿ ನಿಲಯ ನಿರ್ದೇಶಕ ಎಸ್‌. ಉಷಾಲತಾ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಆಯಿಶತ್‌ ಸಫ್ವಾನ ಯು. ಅವರಿಗೆ ಸಾರಾ ಅಬೂಬಕ್ಕರ್‌ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next