Advertisement

ಸರಗೂರು ಪಪಂ ನೂತನ ಅಧ್ಯಕ್ಷೆ ಜ್ಯೋತಿ

12:01 PM Oct 05, 2018 | Team Udayavani |

ಎಚ್‌.ಡಿ.ಕೋಟೆ: ಸರಗೂರು ಪಟ್ಟಣ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ 12ನೇ ವಾರ್ಡ್‌ ಸದಸ್ಯೆ ಜ್ಯೋತಿ, ಉಪಾಧ್ಯಕ್ಷರಾಗಿ 7ನೇ ವಾರ್ಡ್‌ ಸದಸ್ಯೆ ಮಂಜುಳಾ ಅವಿರೋಧವಾಗಿ ಆಯ್ಕೆಯಾದರು. 

Advertisement

ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಎರಡೂವರೆ ವರ್ಷದ 2ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ  ಗಾದಿ ಸಾಮಾನ್ಯ ವರ್ಗ(ಮಹಿಳೆ), ಉಪಾಧ್ಯಕ್ಷ ಗಾದಿ ಪರಿಶಿಷ್ಟ ಪಂಗಡ(ಮಹಿಳೆ)ಕ್ಕೆ ಮೀಸಲಾಗಿತ್ತು. ಕಾಂಗ್ರೆಸ್‌ನ ಜ್ಯೋತಿ ಹಾಗೂ ಬಿಜೆಪಿಯ ಮಂಜುಳಾರನ್ನು ಹೊರತುಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರ ಸಲ್ಲಿಸಿರಲಿಲ್ಲ.

ಆದ್ದರಿಂದ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ತಹಶೀಲ್ದಾರ್‌ ಮಂಜುನಾಥ್‌ ಅಧ್ಯಕ್ಷ- ಉಪಾಧ್ಯಕ್ಷರ ಅವಿರೋಧ ಆಯ್ಕೆ ಘೋಷಿಸಿದರು. ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಐದು ವಷ‌ì ಅಧಿಕಾರದ ಅವಧಿಯಲ್ಲಿ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಒಪಂದ ಮಾಡಿಕೊಳ್ಳಲಾಗಿತ್ತು. 

ಈ ಸಂದರ್ಭದಲ್ಲಿ ಸಂಸದ ಆರ್‌.ಧ್ರುವನಾರಾಯಣ್‌, ಶಾಸಕ ಅನಿಲ್‌ ಕುಮಾರ್‌, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಾವತಿ, ಮಾಜಿ ಉಪಾಧ್ಯಕ್ಷೆ ಭಾಗ್ಯಲಕ್ಷ್ಮೀ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಹನುಮನಾಯಕ, ಸದಸ್ಯರಾದ ಮಧುಸೂದನ್‌, ಮಹಮದ್‌ ಉಸ್ಮಾನ್‌, ನಾಗೇಂದ್ರಪ್ಪ, ನಾಗಯ್ಯ, ಮಂಜುಳಾ ನಾಗರಾಜ್‌, ರತ್ನರಂಗನಾಥ್‌, ರವಿಶೆಟ್ಟಿ, ಮುಖ್ಯಾಧಿಕಾರಿ ಅಶೋಕ್‌ ಇನ್ನಿತರರು ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next