Advertisement

“ಸಪ್ತಶೃಂಗಿ’ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ಜ.1ರಿಂದ ಗರ್ಭಗುಡಿಗೆ ಪ್ರವೇಶವಿಲ್ಲ

09:55 AM Dec 29, 2019 | Team Udayavani |

ನಾಸಿಕ್‌: ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ಸಪ್ತಶೃಂಗಿ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಜ.1ರಿಂದ ಗರ್ಭಗುಡಿಯೊಳಗೆ ಪ್ರವೇಶ ನೀಡದಿರಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ. ಆದರೆ, ಪೂಜೆ ಮತ್ತು ಆರತಿ ಸಂದರ್ಭಗಳಲ್ಲಿ ಮಾತ್ರ ಗರ್ಭಗುಡಿಗೆ ಪ್ರವೇಶ ಕಲ್ಪಿಸಲು ತೀರ್ಮಾನಿಸಲಾಗಿದೆ.

Advertisement

ಗರ್ಭಗುಡಿಯ ಪಾವಿತ್ರ್ಯತೆಯನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀ ಸಪ್ತಶೃಂಗ ನಿವಾಸಿನಿ ದೇವಿ ಟ್ರಸ್ಟ್‌ ತಿಳಿಸಿದೆ. ಬೆಟ್ಟದ ಮೇಲಿರುವ ಈ ದೇಗುಲವು ಮಹಾರಾಷ್ಟ್ರದ “ಮೂರೂವರೆ ಶಕ್ತಿಪೀಠ’ಗಳಲ್ಲೊಂದು ಎಂಬ ಹಿರಿಮೆ ಹೊಂದಿರುವುದರಿಂದ ಇಲ್ಲಿ ವರ್ಷವಿಡೀ ಭಕ್ತರು ದರ್ಶನಕ್ಕೆ ಆಗಮಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next