Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳೇಕೋಟೆ ಹಾಗೂ ಅಂಗಡಿ ಗ್ರಾಮಗಳ ಸಸ್ಯ ಕೇಂದ್ರಗಳಲ್ಲಿ ನೇರಳೆ, ಬೀಟೆ, ಮಹಾಗನಿ, ಸಂಪಿಗೆ ತಾರೆ, ಬಿದಿರು, ಶ್ರೀಗಂಧ, ಬೈನೆ, ಹಣ್ಣಿನ ಗಿಡಗಳಾದ ಹೆಬ್ಬಲಸು, ಮಾವು, ನೇರಳೆ, ನೆಲ್ಲಿ ಸೇರಿದಂತೆ ವಿವಿಧ ತಳಿಗಳ ಗಿಡಗಳನ್ನು ಬೆಳೆಸಲಾಗಿದೆ. ಮಗುವಿಗೊಂದು ಮರ, ಶಾಲೆಗೊಂದು ವನ ಯೋಜನೆಯಡಿ 2230 ಗಿಡಗಳನ್ನು ನೀಡಲಾಗುತ್ತದೆ. ಹಸಿರು ಕರ್ನಾಟಕ ಯೋಜನೆಯಡಿ ಗ್ರಾಮೀಣ ಪ್ರದೇಶಗಳ ಮನೆಗಳಿಗೆ 19800 ಸಸಿಗಳನ್ನು ನೀಡಲಾಗುತ್ತದೆ. ರೈತರು ಹಾಗೂ ಸಾರ್ವಜನಿಕರಿಗಾಗಿ 78400 ಗಿಡಗಳನ್ನು ಹಾಗೂ ಕಾವೇರಿ ಕೂಗು ಯೋಜನೆ ಅಡಿ ಕಾವೇರಿ ನದಿಯ ಉಪನದಿಗಳ ಪ್ರದೇಶಗಳಲ್ಲಿ 95 ಸಾವಿರ ಗಿಡಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದರು.
Advertisement
ಅರಣ್ಯ ಇಲಾಖೆಯಿಂದ ಸಸಿಗಳ ವಿತರಣೆಗೆ ಸಿದ್ಧತೆ: ಜಗನ್ನಾಥ್
08:04 AM May 29, 2020 | Suhan S |
Advertisement
Udayavani is now on Telegram. Click here to join our channel and stay updated with the latest news.