ಬೆಂಗಳೂರು: ಸಂತೋಷ್ ಪ್ರಕರಣ 40% ಕಾಂಗ್ರೆಸ್ ಟೂಲ್ ಕಿಟ್ ನ ಭಾಗ ಎಂಬುದಕ್ಕೆ ಹಲವಾರು ದೃಷ್ಟಾಂತಗಳಿವೆ ಎಂದು ರಾಜ್ಯ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.
ಸಂತೋಷ್ ಪಾಟೀಲ್ ಮೂಲತಃ ಕಾಂಗ್ರೆಸ್ ಕಾರ್ಯಕರ್ತ. ಸಂತೋಷನಿಂದ ರಾಹುಲ್ ಗಾಂಧಿ ಸಹಿ ನಕಲು. 40% ಕಮಿಷನ್ ಕಾಂಗ್ರೆಸ್ ಸೃಷ್ಟಿ. ಸಂತೋಷ್ ಪಾಟೀಲನಿಂದಲೂ 40% ಕಮಿಷನ್ ಪ್ರಸ್ತಾಪ ಎಂಬ ನಾಲ್ಕು ಅಂಶಗಳನ್ನು ಬಿಜೆಪಿ ಟ್ವೀಟ್ ನಲ್ಲಿ ಉಲ್ಲೇಖಿಸಿದೆ.
ಸಚಿವ ಕೆ.ಎಸ್. ಈಶ್ವರಪ್ಪ ಅವರನ್ನು ಗುರಿಯಾಗಿಸಿಕೊಂಡು ಮಹಾನಾಯಕ(ಡಿ.ಕೆ.ಶಿವಕುಮಾರ್) ಹಲವು ಅಸ್ತ್ರ ಪ್ರಯೋಗಿಸಿದ್ದರು.ಹಿಜಾಬ್ ವಿರುದ್ಧ ಪ್ರತಿಭಟನೆ ಮಾಡಿದ ಯುವಕರಿಗೆ ಕೇಸರಿ ಪೇಟ ಕೊಟ್ಟಿದ್ದೇ ಈಶ್ವರಪ್ಪ ಎಂಬ ಆಪಾದನೆ. ಭಗವಾಧ್ವಜ ವಿಚಾರದಲ್ಲಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಸದನದಲ್ಲಿ ಅಹೋರಾತ್ರಿ ಧರಣಿ.”ಈಶ್ವರಪ್ಪನಿಗೆ ಸೆಟಲ್ಮೆಂಟ್ ಮಾಡುತ್ತೇನೆ” ಎಂದು ಮಹಾನಾಯಕ ಈ ಹಿಂದೆ ಸವಾಲು ಹಾಕಿದ್ದರು. ಎಂದು ಇನ್ನೊಂದು ಟ್ವೀಟ್ ಮಾಡಲಾಗಿದೆ.
“ಬೇನಾಮಿ ಅಧ್ಯಕ್ಷೆ” ಜೊತೆ ಸೇರಿ ಈ ರಿಂಗ್‌ಮಾಸ್ಟರ್ (ರಾಹುಲ್ ಗಾಂಧಿ ) ಈ ಹಿಂದೆ ನಡೆಸಿದ ಷಡ್ಯಂತ್ರ ಎಲ್ಲರಿಗೂ ತಿಳಿದಿದೆ.ಬೆಳಗಾವಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ 40% ಕಾಂಗ್ರೆಸ್ ಟೂಲ್ ಕಿಟ್ ಪ್ರಹಸನದ ನಾಂದಿಗೀತೆ ಹಾಡಲಾಗಿತ್ತೇ ? ಎಂದು ಇನ್ನೊಂದು ಟ್ವೀಟ್ ನಲ್ಲಿ ಪ್ರಶ್ನಿಸಿದೆ.
ಮೃತ ಸಂತೋಷ್ ಈ ಹಿಂದೆ ರಾಹುಲ್ ಗಾಂಧಿ ಸಹಿ ನಕಲು ಮಾಡಿದ್ದು ನಿಜವೇ?ಈ ಕಾರಣಕ್ಕಾಗಿ ಆತನನ್ನು ಕಾಂಗ್ರೆಸ್ಸಿನಿಂದ ಉಚ್ಛಾಟನೆ ಮಾಡಿದ್ದು ಸುಳ್ಳೇ?ಆತ ಕಾಂಗ್ರೆಸ್ಸಿನ “ಬೇನಾಮಿ ಅಧ್ಯಕ್ಷರಿಗೆ”(ಲಕ್ಷ್ಮೀ ಹೆಬ್ಬಾಳ್ಕರ್) ನಿಷ್ಠನಾಗಿದ್ದದ್ದು ಸುಳ್ಳೇ? ಇದು “ಬೇನಾಮಿ ಅಧ್ಯಕ್ಷೆ” ಹಾಗೂ “ಮಹಾನಾಯಕ” ಪೋಣಿಸಿರುವ ಷಡ್ಯಂತ್ರವೇ? ಎಂದು ಇನ್ನೊಂದು ಟ್ವೀಟ್ ನಲ್ಲಿ ಬಿಜೆಪಿ ಪ್ರಶ್ನಿಸಿದೆ.