ಹುಣಸೂರು: ಸನಾತನ ಹಿಂದೂ ಧರ್ಮದ ಆಚಾರ-ವಿಚಾರ, ಸಂಸ್ಕಾರ ಶಿಕ್ಷಣ ನೀಡುವುದರೊಂದಿಗೆ ದೇಶದ ಸಂಸ್ಕೃತಿ ಉಳುವಿಗಾಗಿ ಏಕಲ್ ವಿದ್ಯಾಲಯವು ಶ್ರಮಿಸುತ್ತಿದೆ ಎಂದು ಹನಗೋಡು ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ವೈ.ಎಸ್.ಹನುಮಂತರಾಯ ಶ್ಲಾಘಿಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ತಾಲೂಕಿನ ನೇರಳಕುಪ್ಪೆ ಆಶ್ರಮ ಶಾಲೆಯಲ್ಲಿ ಆಯೋಜಿಸಿದ್ದ ಏಕಲ್ ವಿದ್ಯಾಲಯದ ಮೈಸೂರು ಅಂಚಲ್ (ಜಿಲ್ಲೆ) ವಿಭಾಗ ಮಟ್ಟದ ಪ್ರ ಶಿಕ್ಷಣಾರ್ಥಿಗಳ ಆಭ್ಯಾಸವರ್ಗ (ತರಬೇತಿ) ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇಡೀ ವಿಶ್ವವೇ ನಮ್ಮದೇಶದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ತವರಿಸುತ್ತಿರುವ ಸಂದರ್ಭದಲ್ಲಿ ನಮ್ಮದೇಶದಲ್ಲೇ ಹಿಂದೂ ಸಂಸ್ಕೃತಿ ಮರೆಯಾಗುತ್ತಿರುವ ಹಿನ್ನಲೆಯಲ್ಲಿ ಏಕಲ್ ವಿದ್ಯಾಲಯದ ವತಿಯಿಂದ ತನ್ನ ಆಚಾರ್ಯ(ಶಿಕ್ಷಕ) ವರ್ಗದ ಮೂಲಕ ಸನಾತನ ಧರ್ಮದ ಗುರುಕುಲ ಮಾದರಿ ಶಿಕ್ಷಣ ಪದ್ಧತಿಯನ್ನು ಮತ್ತೆ ಪರಿಚಯಿಸುವುದು ಅಭಿನಂದನೀಯ ಎಂದರು.
ಏಕಲ್ ವಿದ್ಯಾಲಯದ ರಾಜ್ಯ ಪ್ರಮುಖ್ ಬಾಲಸುಬ್ರಮಣ್ಯ ವಿದ್ಯಾಲಯವು ದೇಶ ವ್ಯಾಪ್ತಿಯಲ್ಲದೆ ಶ್ರೀಲಂಕದಲ್ಲೂ ಕಾರ್ಯ ನಿರ್ವಹಿಸುತ್ತಿದ್ದು ಗ್ರಾಮೀಣ ಪ್ರದೇಶ 6 ರಿಂದ 16 ವಯಸ್ಸಿನ ವಿದ್ಯಾರ್ಥಿಗಳಲ್ಲಿ ಹಿಂದೂ ಧರ್ಮದ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಸಂಸ್ಕಾರವನ್ನು ತಿಳಿಸಿಕೊಡುವ ಜೊತೆಗೆ ಹಿಂದೂ ಧರ್ಮ ರಕ್ಷಣಾ ಕಾರ್ಯ ನಡೆಸಿಕೊಂಡು ಬರುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ನೇರಳಕುಪ್ಪೆ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ನೇರಳಕುಪ್ಪೆ ಮಹದೇವ್ ತಾ.ಪಂ. ಮಾಜಿ ಸದಸ್ಯ ಕೆ.ಗಣಪತಿ, ಸೇರಿದಂತೆ ವಿದ್ಯಾಲಯದ ಪ್ರಮುಖರು ಹಾಜರಿದ್ದರು.