Advertisement
ರವಿವಾರ ಉಡುಪಿ ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಪಲಿಮಾರು ಮಠ, ಸಂಸ್ಕೃತ ಭಾರತೀ ಉಡುಪಿ ಮಂಡಲ, ಶ್ರೀ ರಾಮಕೃಷ್ಣ ಶಾರದಾ ಆಶ್ರಮ (ಬೈಲೂರು ಮಠ) ಸಹಯೋಗದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಿದ ಜಿಲ್ಲಾ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಅದಮಾರು ಮಠದ ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸಂಸ್ಕೃತದಿಂದ ಆಳವಾದ ಜ್ಞಾನಾರ್ಜನೆ ಸಾಧ್ಯ. ಸಂಪಾದನೆಯ ದೃಷ್ಟಿಯಿಂದ ಇಂಗ್ಲಿಷ್‌ನಂತಹ ಭಾಷೆಗಳಿದ್ದರೆ ತ್ಯಾಗ ಮತ್ತು ಸಂತೋಷಕ್ಕಾಗಿ ಸಂಸ್ಕೃತವಿದೆ. ಈ ಭಾವನೆ ನಮ್ಮೆಲ್ಲರಲ್ಲಿಯೂ ಮೂಡಬೇಕು. ಸಂಸ್ಕೃತ ಕಲಿಯುವ ಕುರಿತಾಗಿ ಇರುವ ತಪ್ಪುಕಲ್ಪನೆಗಳು ದೂರವಾಗಬೇಕು. ಸಂಸ್ಕೃತವನ್ನು ಕಲಿಸಲು ಸರಕಾರಗಳು ಕೂಡ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನುಡಿದರು.
ಉಡುಪಿ ನಗರಸಭೆ ಆಯುಕ್ತ ಮಂಜುನಾಥಯ್ಯ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಂಸ್ಕೃತ ಭಾರತಿ ಉಡುಪಿ ಮಂಡಲದ ಅಧ್ಯಕ್ಷ ಪಿ. ಶ್ರೀಧರ ಆಚಾರ್ಯ ಸ್ವಾಗತಿಸಿದರು. ಉಪಾಧ್ಯಕ್ಷೆ ಸುಮತಾ ನಾಯಕ್ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕ ಶ್ರೀಹರಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ರಾಘವೇಂದ್ರ ರಾವ್ ವಂದಿಸಿದರು. ಮಹೇಶ ಕಾಕತ್ಕರ್, ಡಾ| ಪಾದೆಕಲ್ಲು ವಿಷ್ಣುಭಟ್ಟ, ಡಾ| ಎಸ್.ಆರ್. ಅರುಣ ಕುಮಾರ್, ಡಾ| ಪದ್ಮನಾಭ ಮರಾಠೆ, ಉದಯ ಕುಮಾರ್ ಸರಳತ್ತಾಯ, ನಾಡೋಜ ಡಾ| ಕೆ.ಪಿ. ರಾವ್ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
Related Articles
ಪಲಿಮಾರು ಮಠದಲ್ಲಿ ಸಂಸ್ಕೃತ ಪಾಠದ ಸಂದರ್ಭ ಓರ್ವ ಜರ್ಮನ್ ಪ್ರಜೆ ಆಗಮಿಸಿದರು. ಅವರನ್ನು ಸ್ವಾಗತಿಸಲು ತೆರಳಿದ ಸಂಸ್ಕೃತ ವಿದ್ಯಾರ್ಥಿ “ಎಕ್ಸ್‌ಕ್ಯೂಸ್ ಮಿ’ ಎಂದು ಮಾತು ಆರಂಭಿಸಿದರು. ಆಗ ಜರ್ಮನಿ ಪ್ರಜೆ “ಅಹಂ ಸಂಸ್ಕೃತಂ ಜಾನಾಮಿ’ (ನನಗೆ ಸಂಸ್ಕೃತ ತಿಳಿದಿದೆ) ಎಂದರು. ಜರ್ಮನಿ ಸೇರಿದಂತೆ ಹಲವಾರು ವಿದೇಶಿಯರಿಗೆ ಸಂಸ್ಕೃತ ಜ್ಞಾನವಿದೆ. ಸೂಪರ್ ಕಂಪ್ಯೂಟರ್‌ಗಳಲ್ಲಿ ಸಂಸ್ಕೃತವನ್ನು ಅಳವಡಿಸಿದರೆ ಉತ್ತಮ ಎನ್ನುವ ಚಿಂತನೆ ಜಗತ್ತಿನಲ್ಲಿ ನಡೆಯುತ್ತಿದೆ ಎಂದು ಅದಮಾರು ಕಿರಿಯ ಯತಿ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.
Advertisement