ಭಾರತೀನಗರ: ಸಮೀಪದ ಅಣ್ಣೂರು ಗ್ರಾಮದಲ್ಲಿ ಸಂಕ್ರಾಂತಿ ಅಂಗವಾಗಿ ಜಾನುವಾರುಗಳನ್ನು ಸಂಭ್ರಮದಿಂದ ಕಿಚ್ಚಾಯಿಸಿದರು.
ಪ್ರತಿ ವರ್ಷದಂತೆ ಸಂಜೆ 6.30ರ ನಂತರ ಗ್ರಾಮದ ಹೊರ ವಲಯದಲ್ಲಿ ಎಲ್ಲಾ ಜಾನುವಾರುಗಳು ಕರೆತಂದು ಕಿಚ್ಚಾಯಿಸುತ್ತಿದ್ದರು. ಗ್ರಾಮದಲ್ಲಿ 200ಕ್ಕೂ ಹೆಚ್ಚು ಜೋಡಿ ಎತ್ತುಗಳನ್ನು ವಿವಿಧ ರೀತಿಯಲ್ಲಿ ಅಲಂಕರಿಸಿದ್ದರು. ಗ್ರಾಮದ ಪಟೇಲ್ ರಾಮಕೃಷ್ಣ, ವಿನು ಅವರು ತಮ್ಮ ಎತ್ತು ಗಳಿಗೆ ಜೆಡಿಎಸ್ ಬಾವುಟ ಕಟ್ಟಿ ಕಿಚ್ಚಾಯಿಸಲು ಮುಂದಾದರೆ ಇನ್ನು ಕೆಲವರು ಬಲೂನ್, ಸೇಬು, ಗುಲಾಬಿ ಹಾರ ಸೇರಿದಂತೆ ವಿವಿಧ ರೀತಿ ಯಲ್ಲಿ ಎತ್ತುಗಳನ್ನು ಶೃಂಗರಿಸಿಗೊಂಡು ಕಿಚ್ಚಾಯಿಸಿದರು.
ಇನ್ನು ಕೆಲ ರೈತರು ಎಮ್ಮೆ, ಆಡು, ಟಗರು, ಇಲಾತಿ ಹಸು ಸೇರಿದಂತೆ ಜಾನುವಾರು ಗಳನ್ನು ಕಿಚ್ಚಾಯಿಸಿ ಸಂಭ್ರಮಿಸಿದರು. ಕೆಲ ರೈತರು ನಾ ಮುಂದು ತಾ ಮುಂದು ಎಂದು ಕಿಚ್ಚಾಯಿಸಿದ್ದು ಕಂಡುಬಂತು. 2 ಸಾವಿ ರಕ್ಕೂ ಹೆಚ್ಚು ಮಂದಿ ಕಿಚ್ಚಾಯಿಸುವುದನ್ನು ನೋಡಲು ಬಂದಿದ್ದರು. ಎಲ್ಲರೂ ಮೊಬೈಲ್‌ನಲ್ಲಿ ಫೋಟೋ, ವಿಡಿಯೋಗಳನ್ನು ಸೆರೆ ಹಿಡಿದಿದ್ದು ಕಂಡುಬಂತು.
ಕೆ.ಎಂ.ದೊಡ್ಡಿಯಲ್ಲಿ ಎತ್ತುಗಳ ಸಂಖ್ಯೆ ಇಳಿಮುಖ: ಎತ್ತುಗಳನ್ನು ಶೃಂಗರಿಸಿ ಕಿಚ್ಚಾಯಿಸು ವುದೇ ಸಂಕ್ರಾಂತಿ ವಿಶೇಷ. ಆದರೆ, ಕಿಚ್ಚಾಯಿಸಲು ಕೇವಲ 6 ಜೋಡಿ ಎತ್ತುಗಳು ಮಾತ್ರ ಕೆ.ಎಂ. ದೊಡ್ಡಿಯಲ್ಲಿ ಇದ್ದವು. ಅವುಗಳನ್ನು ಕಿಚ್ಚಾಯಿಸ ಲಾಯಿತು. ಎತ್ತುಗಳ ಸಂಖ್ಯೆ ಇಳಿಮುಖಗೊಂಡ ಹಿನ್ನೆಲೆಯಲ್ಲಿ ಹಬ್ಬದ ಸಂಭ್ರಮಕ್ಕೆ ಕಳೆ ಇಲ್ಲದಂತಾಯಿತು. ಕಿಚ್ಚಾಯಿಸುವ ಸಂಭ್ರಮ ನೋಡಲು ಕೆ.ಎಂ. ದೊಡ್ಡಿಗೆ ಆಗಮಿಸಿದ್ದ ನೂರಾರು ಜನರು ಜಾನು ವಾರುಗಳ ಸಂಖ್ಯೆ ಇಳಿಮುಖವಾಗಿದ್ದರಿಂದ ಬೇಸರ ವ್ಯಕ್ತಪಡಿಸಿ, ನಿರಾಸೆಯಿಂದ ಮನೆಗೆ ಹಿಂತಿರುಗಿದರು.
ಕಿಚ್ಚಾಯಿಸುವ ಮುನ್ನ ಮೆಳ್ಳ ಹಳ್ಳಿಯ ರೈತ ರೇಣುಕಾಪ್ರಸಾದ್ ಅವರು ತಮ್ಮ ಎತ್ತುಗಳನ್ನು ಮೈಕ್ ಸೌಂಡ್‌ನೊಂದಿಗೆ ಕೆ.ಎಂ. ದೊಡ್ಡಿಯ ಮದ್ದೂರು-ಮಳವಳ್ಳಿ ಮುಖ್ಯರಸ್ತೆ ಯಲ್ಲಿ ಕುಣಿದು ಕುಪ್ಪಳಿಸುತ್ತ ಮೆರವಣಿಗೆ ನಡೆಸಿ ಎಲ್ಲರ ಗಮನ ಸೆಳೆದರು. ಕೆ.ಎಂ.ದೊಡ್ಡಿಯ ಆಸರೆ ಸೇವಾಟ್ರಸ್ಟ್ ಅಧ್ಯಕ್ಷ ರಘು ತಮ್ಮ ದ್ವಿಚಕ್ರ ವಾಹನಕ್ಕೆ ಮೈಕ್‌ಕಟ್ಟಿಕೊಂಡು ಆಡನ್ನು ಮೆರವಣಿಗೆ ನಡೆಸಿ ಕಿಚ್ಚಾಯಿಸಲು ಕರೆ ತಂದರು. ತಾಲೂಕಿನ ಅಂಬರಹಳ್ಳಿ, ಯಡಗನ ಹಳ್ಳಿ, ದೊಡ್ಡರಸಿನಕೆರೆ, ಚಿಕ್ಕರಸಿನಕೆರೆ ಹೀಗೆ ಅನೇಕ ಗ್ರಾಮಗಳಲ್ಲಿ ಜಾನುವಾರುಗಳನ್ನು ಕಿಚ್ಚಾಯಿಸಿದರು.