Advertisement

ಓಕಳೀಪುರದಲ್ಲಿ ಸಂಕ್ರಾಂತಿ ಸಡಗರ

11:40 AM Jan 16, 2018 | |

ಬೆಂಗಳೂರು: ನಗರದ ಹೃದಯ ಭಾಗ ಮೆಜೆಸ್ಟಿಕ್‌ ಸಮೀಪದ ಓಕಳೀಪುರದಲ್ಲಿ ಸೋಮವಾರ ಸಂಕ್ರಾಂತಿ ಸಂಭ್ರಮ ಮೇಳೈಸಿತ್ತು. ಎಲ್ಲ ಓಣಿಗಳ ಮನೆಯಂಗಳಗಳು ರಂಗೋಲಿಯಿಂದ ಕಂಗೊಳಿಸುತ್ತಿದ್ದವು. ಮನೆಬಾಗಿಲಿಗೆ ಬರುವ ಅತಿಥಿಯ ಸ್ವಾಗತಕ್ಕೆ ಅಣಿಗೊಂಡಿದ್ದವು. ಓಕಳೀಪುರದ ಸುತ್ತಮುತ್ತ ತಮಿಳು ಮತ್ತು ಕನ್ನಡಿಗರು ನೆಲೆಸಿರುವುದರಿಂದ ಪೊಂಗಲ್‌ ಮತ್ತು ಸಂಕ್ರಾಂತಿ ಸಂಭ್ರಮ ಎಲ್ಲೆಡೆ ಮನೆಮಾಡಿತ್ತು.

Advertisement

ಬೆಳಗ್ಗೆ ಓಕಳೀಪುರದ ಗಣೇಶ ದೇವಸ್ಥಾನದ ಮೂಲಕ ಎತ್ತಿನಗಾಡಿಯಲ್ಲಿ ಮೆರವಣಿಗೆ ಸಾಗಿದ ಸ್ಥಳೀಯ ಶಾಸಕ ದಿನೇಶ್‌ ಗುಂಡೂರಾವ್‌, ಶ್ರೀರಾಂಪುರ ವೃತ್ತ ಸೇರಿದಂತೆ ಓಕಳೀಪುರದ ಗಲ್ಲಿ, ಗಲ್ಲಿಗಳಲ್ಲಿ ಸಾಗಿದರು. ಕಾಂಗ್ರೆಸ್‌ ಕಾರ್ಯಕರ್ತರು ಗಾನ ಬಜಾನದ ಮೂಲಕ ಸ್ವಾಗತಿಸಿದರು.

ಇದೇ ವೇಳೆ ಮಾತನಾಡಿದ ದಿನೇಶ್‌ ಗುಂಡೂರಾವ್‌, ನಾವೆಲ್ಲರೂ ಹಳ್ಳಿಯಿಂದಲೇ ಬಂದವರು. ಆದರೆ ಈಗ ಹಳ್ಳಿಯ ವಾತಾವರಣ, ಆಚರಣೆ ಮರೆಯುತ್ತಿದ್ದೇವೆ. ನಗರದಲ್ಲಿ ನೆಲೆಸಿರುವ ಈಗಿನವರಿಗೆ ಹಳ್ಳಿಯ ಸಂಕ್ರಾಂತಿಯ ಸೊಬಗು ತಿಳಿದಿಲ್ಲ.

ಹಳ್ಳಿಯ ಆ ಸೊಗಡನ್ನು ಮತ್ತೆ ನೆನಪಿಸುವ ಉದ್ದೇಶದಿಂದ ಮೆರವಣಿಗೆಯಲ್ಲಿ ಸಾಗಿ ಶುಭಾಷಯ ಕೋರಿದ್ದಾಗಿ ಹೇಳಿದರು. ಜನರ ಆಥಿತ್ಯಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಸಂಕ್ರಮಣ ಎಲ್ಲರಿಗೂ ಸುಖ ಮತ್ತು ಸಮೃದ್ಧಿª ನೀಡಲಿ ಎಂದು ಹಾರೈಸಿದರು.

ಗೋವಾ ಸಚಿವರು ಕ್ಷಮೆ ಯಾಚಿಸಬೇಕು: ಮಹದಾಯಿ ನೀರಿನ ವಿಚಾರವಾಗಿ ಕನ್ನಡಿಗರ ಬಗ್ಗೆ ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಲೇಕರ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದಿನೇಶ್‌ ಗಂಡೂರಾವ್‌, ಎರಡೂ ರಾಜ್ಯಗಳ ನಡುವೆ ಸೌಹರ್ದತೆ ಬೆಸೆಯುವ ಕೆಲಸವನ್ನು ಉನ್ನತ ಸ್ಥಾನದಲ್ಲಿದ್ದವರು ಮಾಡುಬೇಕು.

Advertisement

ಅದನ್ನು ಬಿಟ್ಟು, ಸಚಿವ ವಿನೋದ್‌ ಪಾಲೇಕರ್‌ ಕನ್ನಡಿಗರ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಗೋವಾ ಸಚಿವರು ರಾಜ್ಯದ ಜನತೆಯಲ್ಲಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು. ವಿನೋದ್‌ ಪಾಲೇಕರ್‌ ಹೇಳಿಕೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಟೀಕಿಸಿದರು.

20 ಟನ್‌ ಕಬ್ಬು ವಿತರಣೆ: ಸಂಕ್ರಾಂತಿಯನ್ನು ಎಳ್ಳು, ಬೆಲ್ಲ ವಿತರಿಸಿ ಹಬ್ಬದ ಶುಭಾಷಯ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ನಗರದ ಚುಂಚಘಟ್ಟ ಮುಖ್ಯರಸ್ತೆಯ ಆಂಜನೇಯ ದೇವಾಲಯದ ಸಮೀಪ ಆಯೋಜಿಸಿದ್ದ  ಸಂಕ್ರಾಂತಿ ಸುಗ್ಗಿ ಸಂಭ್ರದಮಲ್ಲಿ 10 ಸಾವಿರ ಸಾರ್ವಜನಿಕರಿಗೆ ಸುಮಾರು 20 ಟನ್‌ನಷ್ಟು ಕಬ್ಬಿನ ಜತೆಗೆ ಸುಮಾರು 10 ಟನ್‌  ಕಡಲೆಕಾಯಿ, 1 ಟನ್‌ ಎಳ್ಳು ಹಾಗೂ 1 ಟನ್‌ ಬೆಲ್ಲ ಉಚಿತವಾಗಿ ವಿತರಿಸಲಾಯಿತು.

ಎಚ್‌.ದೇವರಾಜು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಕ್ಕರೆನಾಡು ಮಂಡ್ಯ ಮತ್ತು ಇತರೆಡೆಗಳಿಂದ ತರಿಸಿದ್ದ 20 ಟನ್‌ನಷ್ಟು ಕಬ್ಬು ಮತ್ತು ಎಳ್ಳು-ಬೆಲ್ಲವನ್ನು ಸಾರ್ವಜನಿಕರಿಗೆ ವಿತರಿಸಿ, ಸಂಕ್ರಾಂತಿ ಸುಗ್ಗಿ ಸಂಭ್ರಮ ಆಚರಿಸಲಾಯಿತು. ಕಾಂಗ್ರೆಸ್‌ ಮುಖಂಡ ಡಾ. ರಾಮೋಜಿ ಗೌಡ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next