Advertisement

ಸಂಕ್ರಾಂತಿ ಸಡಗರ: ಎಳ್ಳು-ಬೆಲ್ಲ ವಿನಿಮಯ

08:12 AM Jan 16, 2019 | Team Udayavani |

ಕಲಬುರಗಿ: ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಜಿಲ್ಲಾದ್ಯಂತ ಮಂಗಳವಾರ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರ ಕೈಗೊಂಡು ಸಂಜೆ ಎಳ್ಳುಬೆಲ್ಲ ಮಿಶ್ರಿತ ಕುಸರೆಳ್ಳು ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.

Advertisement

ಸಂಕ್ರಾಂತಿ ಸುಗ್ಗಿ ಹಬ್ಬದ ಜತೆಗೆ ಸೂರ್ಯ ತನ್ನ ಪಥ ದಕ್ಷಿಣಯಾಣದಿಂದ ಉತ್ತರಾಯಣಕ್ಕೆ ಬದಲಿಸುವ ಕಾಲ. ಹೀಗಾಗಿ ಎಲ್ಲರೂ ಶ್ರದ್ಧೆ ಮತ್ತು ಭಕ್ತಿಯಿಂದ ಸಂಕ್ರಾಂತಿ ಹಬ್ಬ ಆಚರಿಸಿದರು. ನಗರದ ಶರಣಬಸವೇಶ್ವರ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ನೂರಾರು ಜನರು ವಿಶೇಷ ಪೂಜೆ ಕೈಂಕರ್ಯ ಕೈಗೊಂಡರು. ನದಿಗಳ ಸಂಗಮ ಸ್ಥಳಗಳಿಗೆ ತೆರಳಿ ಪುಣ್ಯಸ್ನಾನ ಮಾಡಿದರು.

ಹಬ್ಬದ ಹಿನ್ನೆಲೆಯಲ್ಲಿ ಮನೆಯಂಗಳದಲ್ಲಿ ಬಿಡಿಸಿದ್ದ ರಂಗು-ರಂಗಿನ ರಂಗೋಲಿ ಚಿತ್ತಾರ ಗಮನ ಸೆಳೆಯಿತು. ಹಬ್ಬದ ವಿಶೇಷವಾಗಿ ಹೋಳಿಗೆ, ಶೇಂಗಾ ಹೋಳಿಗೆ, ಸಜ್ಜೆ ರೊಟ್ಟಿ, ಸೇಂಗಾ ಚಟ್ನಿ, ಚಿತ್ರಾನ್ನ, ಹಪ್ಪಳ, ಸಂಡಿಗೆ, ಎಣ್ಣೆಗಾಯಿ ವಿಶಿಷ್ಟ ಖಾದ್ಯಗಳನ್ನು ಮಾಡಲಾಗಿತ್ತು.

ಕುಸರೆಳ್ಳು ಹಂಚುವ ಮೂಲಕ ಎಳ್ಳುಬೆಲ್ಲ ತಿಂದು ಒಳ್ಳೆಯ ಮಾತನಾಡಿ ಎಂದು ಎಲ್ಲರೂ ಹಬ್ಬದ ಶುಭಾಶಯ ಕೋರುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ವಿಶೇಷವಾಗಿ ಮಕ್ಕಳ ತಲೆ ಮೇಲೆ ಕುಸರೆಳ್ಳು, ಬಾರೇಕಾಯಿ, ಕಬ್ಬಿನ ಚೂರು ಹಾಕಿ ಅವರ ಆಯುಷ್ಯ, ಆರೋಗ್ಯ ಉತ್ತಮವಾಗಿರಲಿ ಎಂದು ಹಾರೈಸಿ ಕರಿ ಎರೆದರು.

Advertisement

Udayavani is now on Telegram. Click here to join our channel and stay updated with the latest news.

Next