Advertisement

ಶಂಕರನಾರಾಯಣ: ಮೆಸ್ಕಾಂ ಕಟ್ಟಡಕ್ಕೆ ಜಾಗ ನೀಡಲು ಮನವಿ

09:26 PM Feb 03, 2022 | Team Udayavani |

ಕುಂದಾಪುರ: ಶಂಕರ ನಾರಾಯಣ ವಿದ್ಯುತ್‌ ಉಪ ವಿಭಾಗವು ಇಲಾಖಾ ಅನುದಾನವು  ಲಭ್ಯವಿದ್ದರೂ ಸಹ ಸ್ವಂತ ಕಟ್ಟಡ ರಚನೆಗೆ ಜಾಗ ಗುರುತಿಸಲು ಕಂದಾಯ ಇಲಾಖೆ ಅಸಮರ್ಥವಾಗಿರುವುದರಿಂದ ತತ್‌ಕ್ಷಣ ವ್ಯವಸ್ಥೆ ಮಾಡಬೇಕು ಎಂದು ಉಡುಪಿ ಜಿಲ್ಲಾ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಹಾಗೂ ಶಂಕರನಾರಾಯಣ ತಾಲೂಕು ರಚನ ಹೋರಾಟ ಸಮಿತಿ ಸಂಚಾಲಕ  ಚಿಟ್ಟೆ ರಾಜಗೋಪಾಲ ಹೆಗ್ಡೆ ಅವರು ಉಡುಪಿ ಜಿಲ್ಲಾ ನೂತನ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ ಮತ್ತು ಬಂದರು,  ಒಳನಾಡು ಜಲಸಾರಿಗೆ  ಸಚಿವ ಎಸ್‌.ಅಂಗಾರ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

Advertisement

ಶಂಕರನಾರಾಯಣ ಪೇಟೆಗೆ ಅತೀ ಸಮೀಪವೇ ಇರುವ ಹಲವು ಸರಕಾರಿ ಜಾಗಗಳ ಆರ್‌.ಟಿ.ಸಿ.ಯೊಂದಿಗೆ ಸಚಿವರ ಜತೆ ಚರ್ಚಿಸಿದ ಅವರು ಶೀಘ್ರದಲ್ಲೇ ನಿವೇಶನ ದೊರಕಿಸಿಕೊಡಲು ಒತ್ತಾಯಿಸಿದರು.

ಆರಂಭ:

2012ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸರಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಂದಿನ ಇಂಧನ ಸಚಿವೆ  ಶೋಭಾ ಕರಂದ್ಲಾಜೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಲಕ್ಷಿ$¾à ನಾರಾಯಣ ಹಾಗೂ ವಿದ್ಯುತ್‌ ಇಲಾಖಾ ಹಿರಿಯ  ಅಧಿಕಾರಿಗಳ ಶಿಫಾರಸು ಮೇರೆಗೆ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿಯ ಕೋರಿಕೆ ಮೇರೆಗೆ ಬಹುದೊಡ್ಡ ವಿಭಾಗವಾದ  ಕುಂದಾಪುರ ವಿದ್ಯುತ್‌ ಉಪ‌ ವಿಭಾಗವನ್ನು ವಿಭಜಿಸಿ ನೂತನ ಶಂಕರನಾರಾಯಣ ವಿದ್ಯುತ್‌ ಉಪ ವಿಭಾಗ 26 ಗ್ರಾಮಗಳ ವ್ಯಾಪ್ತಿಯ ಕಚೇರಿ ಶಂಕರನಾರಾಯಣದಲ್ಲಿ ಆರಂಭಿಸಲಾಯಿತು.

ಬಾಡಿಗೆ ಕಟ್ಟಡ :

Advertisement

2013ರಿಂದಲೂ ತಿಂಗಳಿಗೆ 18 ಸಾವಿರ ರೂ. ಬಾಡಿಗೆ ಮೇಲೆ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುವ ಈ ಇಲಾಖೆಗೆ ಇಲಾಖಾ ಅನುದಾನ ಲಭ್ಯವಿದ್ದರೂ ಸ್ವಂತ ಕಚೇರಿ, ಅಧಿಕಾರಿಗಳ ಕ್ವಾರ್ಟರ್ಸ್‌, ಮಳೆಗಾಲದಲ್ಲಿ ಗಾಳಿಮಳೆಗೆ ಕಂಬ ತುಂಡಾದರೆ ಸಿಡಿಲಿಗೆ ಟಿಸಿ ಭಸ್ಮವಾದರೆ ಕಂಬ, ಟಿಸಿ, ವಯರು ದಾಸ್ತಾನು ಇಡಲು ಗೋದಾಮು, ಗ್ರಾಹಕರಿಗೆ ಬಿಲ್‌ ಕಟ್ಟಲು ಕೌಂಟರ್‌ ಆವಶ್ಯಕತೆ ಇದ್ದು, ಇಲಾಖಾ ಹಿರಿಯ ಅಧಿಕಾರಿಗಳ ಹಾಗೂ ಜನ ಸಂಪರ್ಕ ಸಭೆಯಲ್ಲೂ ಸ್ವಂತ ಕಟ್ಟಡ ಆವಶ್ಯಕತೆ ಕುರಿತು ಚರ್ಚೆ ಆಗುತ್ತಲೇ ಇವೆ.

26 ಗ್ರಾಮಗಳ ವ್ಯಾಪ್ತಿ :

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಹುದ್ದೆ ಹೊಂದಿದ ಈ ಉಪ ವಿಭಾಗವು ಬೆಳ್ವೆ, ಹಾಲಾಡಿ, ಸಿದ್ದಾಪುರ, ಅಂಪಾರು, ಹೊಸಂಗಡಿಯಲ್ಲಿ ಕಿರಿಯ ಎಂಜಿನಿಯರ್‌ (ಜೆಇ) ಕಚೇರಿ ಶಾಖೆಯನ್ನು ಹೊಂದಿ ಹಳ್ಳಿಹೊಳೆಯಿಂದ ಕಾವ್ರಾಡಿ, ಹಳ್ಳಾಡಿ – ಹರ್ಕಾಡಿ, ಅಮಾಸೆಬೈಲು, ಶೇಡಿಮನೆ, ಮಡಾಮಕ್ಕಿವರೆಗೆ ಸುಮಾರು 25ರಿಂದ 26 ಗ್ರಾಮಗಳ ವ್ಯಾಪ್ತಿ ಹೊಂದಿದೆ.

“ಸುದಿನ’ ವರದಿ :

ಈ ಸಮಸ್ಯೆ ಕುರಿತು “ಉದಯವಾಣಿ’ “ಸುದಿನ’ 2021ರ ಎ. 23ರಂದು ಕಾದಿರಿಸಿದ ಅರಣ್ಯ ನೆಪ; 26 ಗ್ರಾಮಗಳ ವ್ಯಾಪ್ತಿ, ಶಂಕರನಾರಾಯಣ ವಿದ್ಯುತ್‌ ಉಪ ವಿಭಾಗ ಕಚೇರಿಗೆ ಸಂಕಷ್ಟ ಎಂದು ವರದಿ ಮಾಡಿತ್ತು.

ನೂತನ ಉಸ್ತುವಾರಿ ಸಚಿವರಿಗೆ ಎಲ್ಲ ವಿವರಣೆ ನೀಡಿ, ಲಭ್ಯ ಸರಕಾರಿ ಸ್ಥಳದ ಮಾಹಿತಿ ನೀಡಿ ಶೀಘ್ರ ಕಡತ ವಿಲೇವಾರಿಗೆ ಸೂಚಿಸುವಂತೆ ಮನವಿ ಮಾಡಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. -ಚಿಟ್ಟೆ ರಾಜಗೋಪಾಲ ಹೆಗ್ಡೆ ಹೋರಾಟಗಾರರು 

Advertisement

Udayavani is now on Telegram. Click here to join our channel and stay updated with the latest news.

Next