Advertisement

ಶಂಕರನಾರಾಯಣ ವಿದ್ಯುತ್‌ ಉಪ ವಿಭಾಗ ಕಚೇರಿಗೆ ಸಂಕಷ್ಟ

10:13 PM Apr 22, 2021 | Team Udayavani |

ಕುಂದಾಪುರ:  ಕಾದಿಟ್ಟ ಅರಣ್ಯ ನೆಪದಲ್ಲಿ ಇಲಾಖೆ ಅನುದಾನ ಇದ್ದರೂ ಸ್ವಂತ ಕಟ್ಟಡ ಮಾಡಲಾಗದೆ ಒಂದೊಂದೇ ಇಲಾಖೆಗಳು ಸಂತ್ರಸ್ತರಾಗುತ್ತಿದ್ದು ಇದೀಗ ಮೆಸ್ಕಾಂ ಸರದಿ. ಅಂದು ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆ  ಇಂದು ವಿದ್ಯುತ್‌ ಉಪ ವಿಭಾಗ.

Advertisement

ಅಸಮಾಧಾನ :

ಶಂಕರನಾರಾಯಣ ತಾಲೂಕು ಕೇಂದ್ರ ರಚಿಸಲು ದಶಕಗಳಿಂದಲೂ ಹೋರಾಟ ಮಾಡು ತ್ತಿರುವ ಶಂಕರನಾರಾಯಣ ತಾಲೂಕು ರಚನ ಹೋರಾಟ ಸಮಿತಿಯ ಹೋರಾಟವೂ ಸೇರಿದಂತೆ ವಿವಿಧ ಪ್ರಯತ್ನದಿಂದ ಒಂದೊಂದೇ ಸರಕಾರಿ ಕಚೇರಿಗಳು ಇಲ್ಲಿಗೆ ಮಂಜೂರಾದರೂ ಕಂದಾಯ ಇಲಾಖೆಯ (ಡೀಮ್ಡ್ ಫಾರೆಸ್ಟ್‌) ನೆಪದಲ್ಲಿ ಸರಕಾರಿ ಸ್ಥಳಗಳು ಲಭ್ಯವಿಲ್ಲ ಎಂದು ತೊಂದರೆಯಾಗುತ್ತಿದೆ. ಡಾ| ಬಿ.ಆರ್‌. ಅಂಬೇಡ್ಕರ್‌ ವಸತಿ ಶಾಲೆ ಸ್ಥಳಾಂ ತರಕ್ಕೆ ಪ್ರಾರಂಭಿಸಿದಾಗ ಸಮಿತಿ ಹಾಗೂ ಗ್ರಾಮ ಪಂಚಾಯ ತ್‌ ಪ್ರಯತ್ನ ದಿಂದ  8 ಎಕರೆ ಜಾಗ ಮಂಜೂರಾಗಿತ್ತು. ಈಗ ವಿದ್ಯುತ್‌ ಉಪ ವಿಭಾಗಕ್ಕೂ ಕಂದಾಯ ಇಲಾಖೆಯಿಂದ ಡೀಮ್ಡ್ ರಹಿತ ಸರಕಾರಿ ಸ್ಥಳಗಳು ಲಭ್ಯವಿಲ್ಲವೆಂಬ ಪತ್ರ ಬರೆದಿದ್ದು ಜನರಿಗೆ ಅಸಮಾಧಾನವಾಗಿದೆ.

ಸಮಿತಿಯ ಹೋರಾಟ :

ಅಂದಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ (2012) ಅವಧಿಯಲ್ಲಿ ಶಂಕರನಾರಾಯಣ ತಾ. ರ. ಹೋ. ಸಮಿತಿಯ ಮನವಿಯ ಮೇರೆಗೆ ಅಂದಿನ ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ,  ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಲಕ್ಷ್ಮೀನಾರಾಯಣ, ಇಲಾಖಾ ಹಿರಿಯ ಅಧಿಕಾರಿಗಳ ಶಿಫಾರಸು ಮೇಲೆ ವಿದ್ಯುತ್‌ ಉಪ ವಿಭಾಗ ಶಂಕರನಾರಾಯಣಕ್ಕೆ ಮಂಜೂರು ಆಗಿತ್ತು.

Advertisement

ಎಚ್ಚೆತ್ತ ಹೋರಾಟ ಸಮಿತಿ :

ಶಂಕರನಾರಾಯಣ ಮೆಸ್ಕಾಂ ಉಪ ವಿಭಾಗಕ್ಕೆ ಅವಶ್ಯ ವಿರುವ ಸರಕಾರಿ ಜಮೀನು ಲಭವಿಲ್ಲವೆಂಬ ವರದಿ ಆಧರಿಸಿ ಶಂಕರನಾರಾಯಣ ತಾ.ರ.ಹೋ.ಸಮಿತಿ ಇಲ್ಲಿ ಲಭ್ಯವಿರುವ ಡೀಮ್ಡ್ ರಹಿತ ಸರಕಾರಿ ಸ್ಥಳಗಳ ಸರ್ವೆ ನಂಬರ್‌ಗಳನ್ನು  ಕಂದಾಯ ಇಲಾಖೆ, ವಿದ್ಯುತ್‌ ಇಲಾಖೆ, ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಅವರಿಗೂ ನೀಡಿದೆ. ಕುಂದಾಪುರ ವಿದ್ಯುತ್‌ ಉಪವಿಭಾಗಕ್ಕೆ ಸೇರಲ್ಪಟ್ಟ ಈಗಿನ 26 ಗ್ರಾಮಗಳ ಶಂಕರನಾರಾಯಣ ವಿದ್ಯುತ್‌ ಉಪವಿಭಾಗಕ್ಕೆ ಅಂದು ಕುಂದಾಪುರ ಉಪ ವಿಭಾಗವು ಬಹು ದೂರವಾಗಿದ್ದು ಗ್ರಾಮಾಂತರ ಪ್ರದೇಶಗಳ ಗ್ರಾಹಕರಿಗೆ ತಮ್ಮ ವಿದ್ಯುತ್‌ ಬಿಲ್ಲುಗಳಿಗೆ ಸಂಬಂಧಿಸಿದ ಹಾಗೂ ಇತರ ದೂರುಗಳಿಗೆ ದೂರದ ಕುಂದಾಪುರಕ್ಕೆ ಹೋಗಲು ಕಷ್ಟವಾಗಿರುದರಿಂದ ಸಮಿತಿಯು ನೀಡಿದ ಮನವಿಗೆ ಸ್ಪಂದನ ದೊರೆತಿದೆ. ಕುಂದಾಪುರ ಉಪ ವಿಭಾಗ ವಿಭಜಿಸಿ ನೂತನ ಶಂಕರನಾರಾಯಣ ಉಪ ವಿಭಾಗ ಮಂಜೂರು ಮಾಡಿದೆ. ಈಗ ಸ್ವಂತ ಕಟ್ಟಡಕ್ಕೆ ಇಲ್ಲಿ ಈ ಇಲಾಖೆಗೆ ಸ್ಥಳ ಲಭ್ಯವಿಲ್ಲವೆಂಬ ನೆಪದಲ್ಲಿ ಎತ್ತಂಗಡಿಯಾದರೆ ಈ ಭಾಗದ ಸಾರ್ವಜನಿಕರು ಪುನಃ  ಹೋರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಶಂಕರನಾರಾಯಣ ತಾ.ರ.ಹೋ.ಸಮಿತಿಯ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ.

ವಿದ್ಯುತ್‌ ಉಪ ವಿಭಾಗಕ್ಕೆ ಜಾಗ ನೀಡಲು ಇಲಾಖಾಧಿಕಾರಿಗಳು ಗ್ರಾ.ಪಂ. ಸಂಪರ್ಕ ಮಾಡಿದ್ದಾರೆ. ಪಂಚಾಯತ್‌ ಸಮೀಪವೇ 55 ಸೆಂಟ್ಸ್‌ ಜಾಗ ಇದ್ದು ಅದನ್ನು ಮಂಜೂರು ಮಾಡಲು ನಿರ್ಣಯ ಮಾಡಲಾಗುವುದು. ಆಗ ಎಲ್ಲ ಕಚೇರಿಗಳು ಜತೆ ಜತೆಗೇ ಸಾರ್ವಜನಿಕ ಸೇವೆಗೆ ದೊರೆಯುವಂತಾಗುತ್ತದೆ. -ರವಿ ಕುಲಾಲ್‌ ಉಪಾಧ್ಯಕ್ಷ, ಗ್ರಾ.ಪಂ. ಶಂಕರನಾರಾಯಣ

ಕೆಲವು ಜಾಗಗಳನ್ನು ಗುರುತಿಸಿ ಮನವಿ ನೀಡಲಾಗಿದೆ. ಕೆಲವು ಜಾಗಗಳು ಬೇರೆ ಬೇರೆ ಕಾರಣದಿಂದ ಮಂಜೂರಾಗಿಲ್ಲ. ಪಂಚಾಯತ್‌ ಕಚೇರಿ ಬಳಿ ಜಾಗವೊಂದನ್ನು ನೀಡುವ ಭರವಸೆ ದೊರೆತಿದೆ. ಜಾಗ ಮೆಸ್ಕಾಂ ಹೆಸರಿಗೆ ಮಂಜೂರಾದ ವರ್ಷದೊಳಗೆ ಕಟ್ಟಡ ರಚನೆಗೆ ಇಲಾಖಾ ಅನುದಾನಕ್ಕಾಗಿ ಕ್ರಮ ಕೈಗೊಳ್ಳಲಾಗುವುದು. -ಯಶವಂತ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಮೆಸ್ಕಾಂ ಶಂಕರನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next