Advertisement

ವಿಂಡೀಸ್ ಸರಣಿಗೆ ಧವನ್ ಬದಲು ಸಂಜು ಸ್ಯಾಮ್ಸನ್ ಆಯ್ಕೆ ?

09:34 AM Nov 28, 2019 | Team Udayavani |

ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ ಟ್ವೆಂಟಿ ಸರಣಿಗೆ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಬದಲು ಸಂಜು ಸ್ಯಾಮ್ಸನ್ ಆಯ್ಕೆಯಾಗುವ ಸಾಧ್ಯತೆಯಿದೆ.

Advertisement

ಸರಣಿಗೆ ತಂಡವನ್ನು ಈಗಾಗಲೆ ಪ್ರಕಟಿಸಲಾಗಿದ್ದು, ಅದರಲ್ಲಿ ಶಿಖರ್ ಸ್ಥಾನ ಪಡೆದಿದ್ದಾರೆ. ಆದರೆ ಸದ್ಯ ಸಯ್ಯದ್ ಮುಷ್ತಾಕ್ ಅಲಿ ಕೂಟದಲ್ಲಿ ಆಡುತ್ತಿರುವ ಧವನ್  ಎಡಕಾಲಿಗೆ ಗಾಯ ಮಾಡಿಕೊಂಡಿದ್ದಾರೆ. ಧವನ್ ಅವರ ವೈದ್ಯಕೀಯ ವರದಿ ಬಂದ ನಂತರ ಮುಂದಿನ ಕ್ರಮದ ಬಗ್ಗೆ ಬಿಸಿಸಿಐ ಪ್ರಕಟಿಸಲಿದೆ.

ಒಂದು ವೇಳೆ ಧವನ್ ಅಲಭ್ಯರಾದರೆ ಆಗ ಸಂಜು ಸಾಮ್ಸನ್ ಅವರನ್ನು ಆಯ್ಕೆಗೆ ಪ್ರಕಟಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಬಾಂಗ್ಲಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಸಂಜು ಸ್ಯಾಮ್ಸನ್ ರನ್ನು ಒಂದೂ ಪಂದ್ಯವಾಡಿಸಿದೇ ವಿಂಡೀಸ್ ವಿರುದ್ದದ ಸರಣಿಯಿಂದ ಕೈಬಿಡಲಾಗಿತ್ತು. ಇದಕ್ಕೆ ಭಾರಿ ಆಕ್ರೋಶವು ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next