ಬಳಸಿಕೊಂಡಿರುವುದು ಮಾದರಿಯಾಗಿದೆ ಎಂದು ಜಿ.ಪಂ. ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು. ಪಡುಪಣಂಬೂರು ಗ್ರಾ.ಪಂ.ನ ತೋಕೂರು ದೇವಸ್ಥಾನದ ಬಳಿ ನಿರ್ಮಿಸಿರುವ 4.90 ಲಕ್ಷ ರೂ. ವೆಚ್ಚದ ಕಿಂಡಿಅಣೆಕಟ್ಟು ಉದ್ಘಾಟಿಸಿ ಅವರು ಮಾತನಾಡಿದರು.
Advertisement
ಗ್ರಾಮ ಪಂಚಾಯತ್‌ನ ಅಧ್ಯಕ್ಷ ಮೋಹನ್‌ದಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಥಳೀಯ ಸಂಘ ಸಂಸ್ಥೆಗಳು ಹಾಗೂ ಗ್ರಾಮಸ್ಥರ ವಿಶೇಷ ಸಹಕಾರ ನೀಡಿರುವುದರಿಂದ ಇಂತಹ ಕಿಂಡಿ ಅಣೆಕಟ್ಟು ನಿರ್ಮಿಸಲು ಸಾಧ್ಯವಾಗಿದೆ. ಕುಡಿಯುವ ನೀರಿನ ಬವಣೆಗೆ ಪೂರಕವಾಗಿ ವರ್ಷದ ಹಿಂದೆಯೇ ಈ ಯೋಜನೆಯನ್ನು ರೂಪಿಸಿರುವುದರಿಂದ ಕೃಷಿ ಸಹಿತ ನೀರಿನ ಅಭಾವಕ್ಕೆ ನೆರವು ನೀಡಿದಂತಾಗಿದೆ ಎಂದರು.
ಸುವರ್ಣ ಮಹೋತ್ಸವದ ವರ್ಷಾಚರಣೆಯಲ್ಲಿರುವ ತೋಕೂರು ಯುವಕ ಸಂಘದ ಸಾಮಾಜಿಕ ಚಟುವಟಿಕೆಯ
ಯೋಜನೆಯಲ್ಲಿ ಹಾಗೂ ತೋಕೂರು ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ನ್ಪೋರ್ಟ್ಸ್ ಕ್ಲಬ್‌ನ ಸಹಕಾರದಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಗ್ರಾ.ಪಂ. ಉಪಾಧ್ಯಕ್ಷೆ ಸುರೇಖಾ ಕರುಣಾಕರ್, ಸದಸ್ಯರಾದ ಹೇಮಂತ್ ಅಮೀನ್, ಸಂತೋಷ್ ಕುಮಾರ್, ಲೀಲಾ ಬಂಜನ್, ದಿನೇಶ್ ಕುಲಾಲ್, ಹಳೆಯಂಗಡಿ ಪಿಸಿಎ ಬ್ಯಾಂಕ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಸಿ.ಕೋಟ್ಯಾನ್, ಜಿ.ಪಂ. ಮಾಜಿ ಸದಸ್ಯ ಈಶ್ವರ ಕಟೀಲು, ಉದ್ಯಮಿ ಸಂತೋಷ್ ಆರ್. ಶೆಟ್ಟಿ, ತೋಕೂರು ಮಹಿಳಾ ಮಂಡಳಿಯ ಅಧ್ಯಕ್ಷೆ ವಿನೋದಾ ಭಟ್, ವಿಶ್ವಬ್ಯಾಂಕ್ ಸಮಿತಿಯ ಅಧ್ಯಕ್ಷ ವಿನೋದ್ ಕುಮಾರ್, ಗ್ರಾಮಸ್ಥರಾದ ರಮೇಶ್ ದೇವಾಡಿಗ, ಬಶೀರ್ ಕಲ್ಲಾಪು, ವಿಜಯ ಕುಮಾರ್ ರೈ, ದಾಮೋದರ ಶೆಟ್ಟಿ, ವಿಪುಲ್ಲ ಶೆಟ್ಟಿಗಾರ್, ರಾಮಚಂದ್ರ ಶೆಟ್ಟಿ, ಶೇಖರ್ ಶೆಟ್ಟಿಗಾರ್, ಗೋಪಾಲ ಮೂಲ್ಯ, ಪದ್ಮನಾಭ ಸಾಲ್ಯಾನ್, ಶಂಕರ್ ಪೂಜಾರಿ, ದುರ್ಗಾಪ್ರಸಾದ್ ಶೆಟ್ಟಿ, ಪರಮೇಶ್ವರ ಶೆಟ್ಟಿಗಾರ್, ಮಧುಸೂಧನ್, ಯಶೋಧಾ ಪಿ. ರಾವ್, ಪುಷ್ಪಾ ಕೆ., ಸಂಶುದ್ದಿನ್, ಸಲಾವುದ್ದಿನ್, ಪ್ರಿಯದರ್ಶಿನಿ, ಪಂಚಾಯತ್ ಸಿಬಂದಿ ಅಭಿಜಿತ್ ಮತ್ತಿತರರು ಉಪಸ್ಥಿತರಿದ್ದರು. ತೋಕೂರು ಯುವಕ ಸಂಘದ ಅಧ್ಯಕ್ಷ ಹರಿದಾಸ್ ಭಟ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.