ಮುಂಬೈ: ಪತ್ರಾ ಚಾವ್ಲ್ ಭೂ ಹಗರಣದ ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಮುಖಂಡ, ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ನ್ಯಾಯಾಂಗ ಬಂಧನ ಸೆಪ್ಟೆಂಬರ್ 19ರವರೆಗೆ ವಿಸ್ತರಿಸಲಾಗಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮುಳುಗಿದ ಟಿಕೆ ಹಳ್ಳಿ ನೀರಿನ ಘಟಕ, ರಾಜಧಾನಿ ನೀರು ಸರಬರಾಜಿಗೆ ಸಂಕಷ್ಟ: ಸಿಎಂ ಭೇಟಿ
ಪತ್ರಾ ಚಾವ್ಲ್ ಭೂ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಸಂಜಯತ್ ರಾವತ್ ಅವರನ್ನು ಬಂಧಿಸಿತ್ತು. ಪ್ರಕರಣದಲ್ಲಿ ಮುಂಬೈ ವಿಶೇಷ ಕೋರ್ಟ್ ರಾವತ್ ಅವರ ನ್ಯಾಯಾಂಗ ಬಂಧನವನ್ನು ಸೆ.19ರವರೆಗೆ ವಿಸ್ತರಿಸಿರುವುದಾಗಿ ವರದಿ ಹೇಳಿದೆ.
ಪತ್ರಾ ಚಾವ್ಲ್ ಪ್ರಕರಣದಲ್ಲಿ ತಮ್ಮ ಕಕ್ಷಿದಾರ ಜಾಮೀನು ಅರ್ಜಿ ಸಲ್ಲಿಸಿಲ್ಲ ಎಂದು ರಾವತ್ ಪರ ವಕೀಲರು ಕೋರ್ಟ್ ಗೆ ತಿಳಿಸಿದ್ದಾರೆ. ರಾವತ್ ನ್ಯಾಯಾಂಗ ಬಂಧನವನ್ನು ಮುಂದುವರಿಸಬೇಕೆಂದು ಜಾರಿ ನಿರ್ದೇಶನಾಲಯ ಕೋರ್ಟ್ ಗೆ ಮನವಿ ಮಾಡಿತ್ತು.
ಇಂದು ಕೋರ್ಟ್ ನಲ್ಲಿ ಸಂಜಯ್ ರಾವತ್ ಕುಟುಂಬ ಸದಸ್ಯರು ಮತ್ತು ಹಲವು ಮಂದಿ ಬೆಂಬಲಿಗರು ಹಾಜರಾಗಿದ್ದರು. 1,034 ಕೋಟಿ ರೂಪಾಯಿ ಚಾವ್ಲ್ ಭೂಹಗರಣ ಆರೋಪದಲ್ಲಿ ಆಗಸ್ಟ್ 1ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರಾವತ್ ಅವರನ್ನು ಸುಮಾರು 6ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಬಂಧಿಸಿತ್ತು.