ದುಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರು ನಾಯಕತ್ವಕ್ಕೆ ವಿದಾಯ ಹೇಳಿರುವುದು ಎಲ್ಲರಿಗೂ ಗೊತ್ತಿದೆ. ಈ ಸೀಸನ್ ಬಳಿಕ ತಾನು ಕೇವಲ ನಾಯಕನಾಗಿ ಮುಂದುವರಿಯುತ್ತೇನೆ ಎಂದು ವಿರಾಟ್ ಇತ್ತೀಚೆಗೆ ಹೇಳಿದ್ದಾರೆ. ಹೀಗಾಗಿ ಮುಂದಿನ ಆರ್ ಸಿಬಿ ನಾಯಕ ಯಾರಾಗಬಹುದು ಎನ್ನುವ ಚರ್ಚೆ ಆರಂಭವಾಗಿದೆ.
ಭಾರತದ ಮಾಜಿ ಆಟಗಾರ, ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಅವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮುಂದಿನ ಸೀಸನ್ ನಿಂದ ಆರ್ ಸಿಬಿ ನಾಯಕನಾಗಬಲ್ಲ ಮೂವರು ಆಟಗಾರರ ಹೆಸರನ್ನು ಮಾಂಜ್ರೇಕರ್ ಸೂಚಿಸಿದ್ದಾರೆ.
ಸದ್ಯ ಮುಂಬೈ ಇಂಡಿಯನ್ಸ್ ಉಪನಾಯಕ, ವೆಸ್ಟ್ ಇಂಡೀಸ್ ಆಟಗಾರ ಕೈರನ್ ಪೊಲಾರ್ಡ್ ಅವರು ಆರ್ ಸಿಬಿ ತಂಡವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ ಎಂದು ಸಂಜಯ್ ಮಾಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ:ಬಿಬಿಎಲ್ ನಲ್ಲಿ ಸಿಡ್ನಿ ಥಂಡರ್ಸ್ ಪರ ಆಡಲಿದ್ದಾರೆ ಇಬ್ಬರು ಭಾರತೀಯರು
ಅದಲ್ಲದೆ ಸದ್ಯ ಹೈದರಾಬಾದ್ ತಂಡದಲ್ಲಿರುವ ಡೇವಿಡ್ ವಾರ್ನರ್ ಅಥವಾ ಮುಂಬೈ ಇಂಡಿಯನ್ಸ್ ಆಟಗಾರ ಸೂರ್ಯ ಕುಮಾರ್ ಯಾದವ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ಪರಿಗಣಿಸಬಹುದು ಎಂದು ಮಾಂಜ್ರೇಕರ್ ಹೇಳಿದ್ದಾರೆ.
ಎಬಿ ಡಿವಿಲಿಯರ್ಸ್ ಬಗ್ಗೆ ಮಾತನಾಡಿದ ಸಂಜಯ್, ಎಬಿಡಿ ಇನ್ನು ಎಷ್ಟು ವರ್ಷ ಆಡುತ್ತಾರೆ ಎಂದೂ ನೋಡಬೇಕು. ಕನಿಷ್ಠ ಮೂರು ವರ್ಷ ನಾಯಕತ್ವದ ಜವಾಬ್ದಾರಿ ವಹಿಸುವವರು ಬೇಕಾಗಿದೆ ಎಂದಿದ್ದಾರೆ.