Advertisement

ಪಕ್ಷದ ನೀತಿ ಟೀಕಿಸಿದ ಕಾಂಗ್ರೆಸ್ ವಕ್ತಾರ ಹುದ್ದೆಯಿಂದ ಝಾ ವಜಾ; ಸಂಜಯ್ ಟ್ವೀಟ್ ನಲ್ಲೇನಿದೆ?

05:09 PM Jun 18, 2020 | Nagendra Trasi |

ನವದೆಹಲಿ:ಪಕ್ಷದ ಧೋರಣೆ, ನೀತಿಯನ್ನು ಟೀಕಿಸಿ ಪತ್ರಿಕೆಯೊಂದರಲ್ಲಿ ಲೇಖನ ಬರೆದಿದ್ದ ಸಂಜಯ್ ಝಾ ಅವರನ್ನು ಕಾಂಗ್ರೆಸ್ ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಜಾತಂತ್ರ, ಉದಾರ ಮೌಲ್ಯ ಹಾಗೂ ಸಹಿಷ್ಣುತೆಯಿಂದ ದೂರ ಸರಿಯುತ್ತಿದೆ ಎಂದು ಝಾ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.

Advertisement

ಅಂದು ಪಂಡಿತ್ ಜವಾಹರಲಾಲ್ ನೆಹರೂ ಅವರು ನಿರಂಕುಶಾಧಿಕಾರವನ್ನು ಎಚ್ಚರಿಸಿ ಒಮ್ಮೆ ಪತ್ರಿಕೆಯಲ್ಲಿ ಲೇಖನವನ್ನು ಬರೆದಿದ್ದರು ಎಂಬುದಾಗಿ ಸಂಜಯ್ ಝಾ ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದು, ಅದು ನಿಜವಾದ ಕಾಂಗ್ರೆಸ್, ಅಲ್ಲಿ ಪ್ರಜಾಪ್ರಭುತ್ವ, ಉದಾರತೆ, ಸಹಿಷ್ಣುತೆ ಎಲ್ಲವೂ ಒಳಗೊಂಡಿತ್ತು. ಆದರೆ ಈಗ ನಾವು ಈ ಮೌಲ್ಯಗಳಿಂದ ದೂರ ಸರಿಯುತ್ತಿದ್ದೇವೆ ಎಂದು ಟ್ವೀಟ್ ನಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ಏನೇ ಆಗಲಿ ಇನ್ನು ಮುಂದೆಯೂ ತಾನು ಪಕ್ಷದ ಶಿಸ್ತಿನ, ಭಯರಹಿತ ಸಿದ್ಧಾಂತದ ಸೈನಿಕನಾಗಿ ಪಕ್ಷದಲ್ಲಿ ಇರುವುದಾಗಿ ಝಾ ತಿಳಿಸಿದ್ದಾರೆ. ಸಂಜಯ್ ಝಾ ಅವರನ್ನು ಬುಧವಾರ ಪಕ್ಷದ ವರಿಷ್ಠೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ವಕ್ತಾರ ಹುದ್ದೆಯಿಂದ ವಜಾಗೊಳಿಸಿ, ಅಭಿಷೇಕ್ ದತ್ ಅವರನ್ನು ನೇಮಕ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next