ಬಹಳ ಜಾಗರೂಕರಾಗಿದ್ದಾರೆ. ಸ್ವಚ್ಛತೆ ಮತ್ತು ಶುಚಿತ್ವದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಕೈಗಳನ್ನು ಚೆನ್ನಾಗಿ ತೊಳೆಯುತ್ತಾರೆ. ಸ್ಯಾನಿಟೈಸರ್ ಬಳಕೆಯನ್ನೂ ಮಾಡುತ್ತಾರೆ. ಹೆಚ್ಚಿನ ಸ್ಯಾನಿಟೈಸರ್‌ಗಳಲ್ಲಿ ಆಲ್ಕೋಹಾಲ್ ಇರುವ ಕಾರಣ, ಕೈಯೆಲ್ಲ ಒಂದು ರೀತಿಯ ವಾಸನೆ ಬರುತ್ತದೆ.
ಅದೇ ಕೈಯಿಂದ ಆಹಾರವನ್ನು ಮುಟ್ಟಲು ಅಥವಾ ಸೇವಿಸಲು ಮನಸ್ಸು ಒಪ್ಪುವುದಿಲ್ಲ. ಇನ್ನೂ ಕೆಲವು ಸ್ಯಾನಿಟೈಸರ್‌ಗಳು ಫಾರ್ಮಲಿನ್ ನಂತೆ ವಾಸನೆ ಬೀರುತ್ತವೆ. ಆಗ ಆಸ್ಪತ್ರೆಯಲ್ಲಿರುವಂತೆ ಭಾಸವಾಗುತ್ತದೆ. ಹಾಗಾಗಿ, ಇದೀಗ ಸ್ಯಾನಿಟೈಸರ್ ಮತ್ತು ಹ್ಯಾಂಡ್‌ವಾಶ್ ತಯಾರಕರು ಸುಗಂಧ ಬಳಸಿ ದುರ್ವಾಸನೆಯನ್ನು ಮರೆಮಾಚುವಲ್ಲಿ ಯಶಸ್ವಿ ಆಗಿದ್ದಾರೆ.
ಗ್ರೀನ್ ಆಪಲ್, ಲೆಮನ್, ಸ್ಟ್ರಾಬೆರಿ, ಕಿತ್ತಳೆ, ಅನಾನಸು, ಲಿಚ್ಚಿ ಯಂತಹ ಹಣ್ಣುಗಳ ಸುಗಂಧ ಉಳ್ಳ ಹ್ಯಾಂಡ್ ವಾಶ್‌ಗಳು ಹಾಗೂ ಸ್ಯಾನಿಟೈಸರ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಗುಲಾಬಿ, ಕೇಸರಿ, ಮಲ್ಲಿಗೆ, ಸಂಪಿಗೆ, ಲ್ಯಾವೆಂರ್ಡ, ಆರ್ಕಿಡ್‌ನಂತ ಹೂವುಗಳ ಸುಗಂಧವನ್ನು ಬಳಸಿಯೂ ಹ್ಯಾಂಡ್‌ವಾಶ್ ಮತ್ತು ಸ್ಯಾನಿಟೈಸರ್‌ಗಳನ್ನೂ ತಯಾರಿಸಲಾಗುತ್ತದೆ. ಅಂತೆಯೇ ಚಂದನ, ಗಂಧ, ಮುಂತಾದ ಪರಿಮಳ ಬೀರುವ ಮರಗಳ ಸುಗಂಧಕ್ಕೆ ಹೋಲುವ ಫ್ರೇಗ್ರೇನ್ಸ್ ಬಳಸಿಯೂ ತಯಾರಿಸಲಾದ ಹ್ಯಾಂಡ್‌ವಾಶ್ ಮತ್ತು ಸ್ಯಾನಿಟೈಸರ್ ಗಳನ್ನು ಜನರು ಉಪಯೋಗಿಸುತ್ತಿದ್ದಾರೆ. ಕೇವಲ ಸುಗಂಧವಷ್ಟೇ ಅಲ್ಲ, ಔಷಧೀಯ ಗುಣಗಳೂ ಇರಬೇಕೆಂದು ಬಯಸುವವರು ಬೇವು (ನೀಂ), ತುಳಸಿ, ಇತ್ಯಾದಿಗಳ ರಸ ಉಳ್ಳ ಆಯುರ್ವೇದೀಯ ಸಾಬೂನು,ಹ್ಯಾಂಡ್‌ವಾಶ್ ಹಾಗೂ ಸ್ಯಾನಿಟೈಸರ್‌ಗಳ ಮೊರೆ ಹೋಗಿದ್ದಾರೆ.
ಮಹಿಳೆಯರು ಹೆಚ್ಚಾಗಿ ಒಂದೇ ಬ್ಯಾಗ್ ಅನ್ನು ಎಲ್ಲಾ ಕಡೆಯೂ ತೆಗೆದುಕೊಂಡು ಹೋಗುವುದಿಲ್ಲ. ದೊಡ್ಡ ಬ್ಯಾಗ್, ಚಿಕ್ಕ ಬ್ಯಾಗ್, ಪರ್ಸ್, ಕ್ಲಚ್, ಹೀಗೆ ಸಂದರ್ಭ ಅಥವಾ ಹೋಗುವ ಜಾಗಕ್ಕೆ ತಕ್ಕಂತೆ, ಕೈಚೀಲಗಳನ್ನು ಬದಲಿಸುತ್ತಾ ಇರುತ್ತಾರೆ. ಹಾಗಿದ್ದಾಗ ಕೆಲವೊಮ್ಮೆ ಸ್ಯಾನಿಟೈಸರ್ ಇಟ್ಟುಕೊಳ್ಳುವುದೇ ಮರೆತು ಹೋಗುವ ಸಾಧ್ಯತೆ ಇದೆ. ಅದನ್ನು ತಪ್ಪಿಸಲು, ಪ್ರತಿ ಬ್ಯಾಗ್‌ನಲ್ಲಿಯೂ ಒಂದೊಂದು ಚಿಕ್ಕ ಸ್ಯಾನಿಟೈಸರ್ ಬಾಟಲಿಯನ್ನು ಇಟ್ಟುಕೊಳ್ಳಬಹುದು. ಹೇಗಿದ್ದರೂ ಪಾಕೆಟ್ ಸೈಜ್ ಸ್ಯಾನಿಟೈಸರ್‌ಗಳು ಮತ್ತು ಹ್ಯಾಂಡ್‌ವಾಶ್‌ಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಹಾಗಾಗಿ, ಒಂದೊಂದು ಬ್ಯಾಗ್ ನಲ್ಲಿ ಒಂದೊಂದು ಸುಗಂಧದ ಸ್ಯಾನಿ ಟೈಸರ್ ಅಥವಾ ಹ್ಯಾಂಡ್ ವಾಶ್ ಇಟ್ಟು ಕೊಂಡು ಹೋಗಬಹುದು. ಒಂದೇ ಬಗೆಯ ಸುಗಂಧದ ಸ್ಯಾನಿಟೈಸರ್ ಬಳಸುವುದು ಬೋರ್ ಅನ್ನಿಸಿದರೆ, ಬಗೆಬಗೆಯ ಸುಗಂಧದ ಸ್ಯಾನಿಟೈಸರ್‌ಗಳನ್ನು ಬಳಸಬಹುದು.
– ಅದಿತಿಮಾನಸ ಟಿ.ಎಸ್.