Advertisement

ಕ್ವಾರ್ಟರ್‌ ಫೈನಲ್‌ನಲ್ಲಿ ಸಾನಿಯಾ, ಬೋಪಣ್ಣ

07:40 AM Sep 05, 2017 | |

ನ್ಯೂಯಾರ್ಕ್‌: ಯುಎಸ್‌ ಓಪನ್‌ ಡಬಲ್ಸ್‌ ಮುಖಾಮುಖೀಯಲ್ಲಿ ಸಾನಿಯಾ ಮಿರ್ಜಾ ಮತ್ತು ರೋಹನ್‌ ಬೋಪಣ್ಣ ಕ್ವಾರ್ಟರ್‌ ಫೈನಲ್‌ ಹಣಾಹಣಿಗೆ ಸಜ್ಜಾಗಿದ್ದಾರೆ. ಆದರೆ ಲಿಯಾಂಡರ್‌ ಪೇಸ್‌-ಪುರವ್‌ ರಾಜ್‌ ಸೋತು ನಿರ್ಗಮಿಸಿದ್ದಾರೆ.

Advertisement

ವನಿತಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ-ಶುಯಿ ಪೆಂಗ್‌ (ಚೀನ) ಎರಡೂಕಾಲು ಗಂಟೆಗಳ ಭಾರೀ ಹೋರಾಟವೊಂದನ್ನು ಜಾರಿಯಲ್ಲಿರಿಸಿ ಸೊರಾನಾ ಕಿಸ್ಟಿì (ರೊಮೇನಿಯಾ)-ಸಾರಾ ಸೊರಿಬೆಸ್‌ ಟೊರ್ಮೊ (ಸ್ಪೇನ್‌) ವಿರುದ್ಧ 6-2, 3-6, 7-6 (7-2) ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು.

ಮಿಕ್ಸೆಡ್‌ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ-ಗ್ಯಾಬ್ರಿಯೇಲಾ ದಾಬ್ರೋವ್‌ಸ್ಕಿ (ಕೆನಡಾ) ಸೇರಿಕೊಂಡು ಮರಿಯಾ ಜೋಸ್‌ ಮಾರ್ಟಿನೆಜ್‌ (ಸ್ಪೇನ್‌)-ನಿಕೋಲಾಸ್‌ ಮೊನ್ರೊ (ಆಮೆರಿಕ) ಜೋಡಿಯನ್ನು 6-3, 6-4ರಿಂದ ಹಿಮ್ಮೆಟ್ಟಿಸಿದರು. 7ನೇ ಶ್ರೇಯಾಂಕದ ಇಂಡೋ-ಕೆನಡಿಯನ್‌ ಜೋಡಿ ಇನ್ನು 3ನೇ ಸ್ರೇಯಾಂಕದ ಮೈಕಲ್‌ ವೀನಸ್‌ (ನ್ಯೂಜಿಲ್ಯಾಂಡ್‌)-ಹಾವೊ ಚಿಂಗ್‌ ಚಾನ್‌ (ಚೈನೀಸ್‌ ತೈಪೆ) ವಿರುದ್ಧ ಆಡಲಿದೆ.ಪುರುಷರ ಡಬಲ್ಸ್‌ ದ್ವಿತೀಯ ಸುತ್ತಿನಲ್ಲಿ ಭಾರತದ ಲಿಯಾಂಡರ್‌ ಪೇಸ್‌-ಪುರವ್‌ ರಾಜ ರಶ್ಯದ ಕರೆನ್‌ ಕಶನೋವ್‌-ಆ್ಯಂಡ್ರೆ ರುಬ್ಲೆವ್‌ ವಿರುದ್ಧ 4-6, 7-6 (7) ಅಂತರದ ಸೋಲನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next