Advertisement
ಇದು ಎಂಟು ವರ್ಷಗಳ ಹಿಂದಿನ ಕತೆಯಾದರೂ ಅಂದು ಆ ಬಗೆಯ ವದಂತಿಗಳು ವ್ಯಾಪಕವಾಗಿ ಹಬ್ಬಿದ್ದಂತೂ ನಿಜ. ಅಂದಿನ ಈ ರೋಚಕ ವದಂತಿಯ ಎಳೆಯೊಂದನ್ನು ಗಟ್ಟಿಯಾಗಿ ಹಿಡಿದುಕೊಂಡು ಸಾನಿಯಾ ಮಿರ್ಜಾ ಬಾಯಿಯಿಂದ ಅಲ್ಪಸ್ವಲ್ಪ ಸತ್ಯವನ್ನಾದರೂ ಹೊರತರಬೇಕೆಂಬ ಯತ್ನದಲ್ಲಿ “ಕಾಫಿ ವಿತ್ ಕರಣ್’ ಟಿವಿ ಶೋ ಖ್ಯಾತಿಯ ಕರಣ್ ಜೋಹರ್ ಸ್ವಲ್ಪಮಟ್ಟಿನ ಯಶಸ್ಸು ಗಳಿಸಿದ್ದಾರೆ.
Related Articles
Advertisement
ನಿಮ್ಮ ಮತ್ತು ಶಾಹಿದ್ ಕಪೂರ್ ಬಗ್ಗೆ ಅಂದಿನ ದಿನಗಳಲ್ಲಿ ತುಂಬಾ ಗುಸುಗುಸು ಸುದ್ದಿ-ವದಂತಿಗಳು ಇದ್ದವಲ್ಲ – ಅವು ನಿಜವೇ ?
“ಎಂಟು ವರ್ಷ ಅಂದ್ರೆ ಈಗ ಅದು ತುಂಬಾ ಹಳೇ ವಿಷಯವಾಯ್ತು; ನನಗೀಗ ಯಾವುದೂ ನೆನಪಿಲ್ಲ; ಆದ್ರೂ ಅಂಥದ್ದೇನೂ ನಡೆದ ಹಾಗೆ ನನಗೆ ನೆನಪಿಲ್ಲ; ಮೇಲಾಗಿ ನಾನು ಇಂದಿನ ಹಾಗೆ, ಅಂದಿನ ದಿನಗಳಲ್ಲಿ ಕೂಡ ವಿಪರೀತ ಪ್ರಯಾಣದಲ್ಲಿದ್ದೆ….’
ಆ ಮಾತು ಹಾಗಿರಲಿ, ಈಗೊಂದು ಪ್ರಶ್ನೆ : ಶಹೀದ್ ಕಪೂರ್, ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್ ಅವರಲ್ಲಿ ನೀವು ಯಾರನ್ನು ಕೊಲ್ಲಲು, ಮದುವೆಯಾಗಲು ಮತ್ತು ಅಂಟಿಕೊಂಡಿರಲು ಇಷ್ಟಪಡುವಿರಿ ?
“ನಾನು ರಣವೀರ್‌ಗೆ ಅಂಟಿಕೊಂಡಿರಲು, ರಣಬೀರ್‌ನನ್ನು ಮದುವೆಯಾಗಲು ಮತ್ತು ಶಾಹಿದ್ ಕಪೂರ್‌ನನ್ನು ಕೊಲ್ಲಲು ಬಯಸುತ್ತೇನೆ….’
ಕರಣ್ ಜೋಹರ್ ಕೇಳಿದ ಈ ಪ್ರಶ್ನೆಯಲ್ಲಿ ಶಾಹಿದ್ ಕಪೂರ್‌ನನ್ನು ಕೊಲ್ಲಲು ಸಾನಿಯಾ ಮಿರ್ಜಾ ಯಾಕೆ ಬಯಸಿರಬಹುದು ಎಂಬ ಬಗ್ಗೆ ಜಿಜ್ಞಾಸೆ ನಡೆಸಿದರೆ ಬಹುಷಃ ಅವರೊಳಗೆ ಅಂದಿನ ದಿನಗಳಲ್ಲಿ ಗುಪ್ತವಾಗಿ ಡೇಟಿಂಗ್ ನಡೆದು ಕೊನೆಗೆ ಅದು ಹಠಾತ್ತನೇ ನಿಂತು ಹೋಗಿರಬಹುದು ಮತ್ತು ಆ ಕಾರಣಕ್ಕೆ ಸಾನಿಯಾಗೆ ಶಾಹಿದ್ ಮೇಲೆ ಈಗಲೂ ಒಳಗೊಳಗೇ ಕೋಪ ಇದ್ದಿರಬಹುದು ಎಂಬ ಗುಮಾನಿ ಹುಟ್ಟುವಂತಿದೆ.
ಉಡ್‌ತಾ ಪಂಜಾಬ್ ಚಿತ್ರದ ಮೂಲಕ ಮತ್ತೆ ಪ್ರಸಿದ್ಧಿಗೆ ಬಂದ ಶಾಹಿದ್ ಕಪೂರ್, ಕರೀನಾ ಕಪೂರ್ ಜತೆಗಿನ ಗೆಳೆತನದಿಂದ ಹೊರಬಂದ ಸಂದರ್ಭದಲ್ಲಿ, ಎಂಟು ವರ್ಷಗಳ ಹಿಂದೆ ಸಾನಿಯಾ ಮಿರ್ಜಾ ಜತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ದಟ್ಟವಾಗಿದ್ದವು. ಅಂದ ಹಾಗೆ ಅನಂತರದಲ್ಲಿ ಸಾನಿಯಾ ಮಿರ್ಜಾ ಅವರು ಪಾಕ್ ಕ್ರಿಕೆಟ್ ತಾರೆ ಶೋಯಿಬ್ ಮಲಿಕ್ ಅವರ ಪತ್ನಿಯಾದರು.