Advertisement

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

11:23 AM Apr 18, 2024 | Team Udayavani |

ಕೊಪ್ಪಳ: ಪ್ರಜಾಪ್ರಭುತ್ವದಲ್ಲಿ ಟೀಕೆಗಳು ಸಹಜ. ಟಿಕೆಟ್ ಸಿಗದಿರುವ ಕಾರಣ ನಾನು ಬಿಜೆಪಿ ತೊರೆದಿಲ್ಲ, ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲ ಅನಿಸಿತು. ಬಿಜೆಪಿಯ ನಾಯಕರು ಸಂಘಟನೆ ಮಾಡುವ ವಿಚಾರ, ಅಭಿವೃದ್ಧಿ ವಿಚಾರ ಕೇಳಲಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಬಿಜೆಪಿ ತೊರೆದೆ. ಬಿಜೆಪಿ ನಾಯಕರ ನಡವಳಿಕೆ ಬೇಸರ ತರಿಸಿತು ಎಂದು ಬುಧವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಸಂಗಣ್ಣ ಕರಡಿ ಹೇಳಿದರು.

Advertisement

ಕೊಪ್ಪಳದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಜೊತೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿ ಬಿಜೆಪಿ ತೊರೆದೆ. ನಿನ್ನೆ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿರುವೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ, ಸಚಿವರು, ಮುಖಂಡರು ಉಪಸ್ಥಿತಿಯಲ್ಲಿ ಸೇರಿರುವೆ.  ಅವರೆಲ್ಲರೂ ನನ್ನ ಆತ್ಮೀಯವಾಗಿ ಪಕ್ಷಕ್ಕೆ ಸ್ವಾಗತ ಕೋರಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಬೇಡಿಕೆ ಇಲ್ಲದೇ ಸೇರಿರುವೆ. ಕೊಪ್ಪಳ ಲೋಕಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಲು ಸಿಎಂಗೆ ಮನವಿ ಮಾಡಿರುವೆ. ಕೊಪ್ಪಳ ಲೋಕಸಭಾ ಕ್ಷೇತ್ರ ಅಭಿವೃದ್ಧಿಯಾಗಬೇಕಿದೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ನೂರಕ್ಕೆ ನೂರು ಗೆಲ್ಲುತ್ತಾರೆ. ಕ್ಷೇತ್ರದಲ್ಲಿ ಸಿಂಗಟಾಲೂರು ಯೋಜನೆ ಕಾರ್ಯಗತವಾಗಬೇಕು. ಮುನಿರಾಬಾದ್ ಮಹೆಬೂಬ ನಗರ ರೈಲೈ, ಗದಗ- ವಾಡಿ ರೈಲ್ವೆ ಆಗಬೇಕು. ಕೊಪ್ಪಳದಲ್ಲಿ ವಿಮಾನ ನಿಲ್ದಾಣ ಆಗಬೇಕು. ಮುಂದೆ ಕೊಪ್ಪಳ ಕ್ಷೇತ್ರಕ್ಕೆ ಅಭಿವೃದ್ಧಿ ಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕಾಗಿದೆ. ಸಿಂಧನೂರು ಗೆ ಮೆಡಿಕಲ್ ಕಾಲೇಜು ಬೇಕಿದೆ ಎಂದರು.

ಕುಟುಂಬಕ್ಕೆ ಟಿಕೆಟ್ ಕೇಳಿಲ್ಲ: ಮೋದಿ ದೇವರು ಆದರೆ ಅಭ್ಯರ್ಥಿ ಯಾಕೆ ಹಾಕಬೇಕು? ಹಿಂದೆ ಸಿ ವಿ ಚಂದ್ರಶೇಖರ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟರು ನನ್ನ ಕೇಳಿದ್ರಾ?ಸೌಜನ್ಯಕ್ಕೂ ನನ್ನ ಒಂದು ಮಾತು ಕೇಳಲಿಲ್ಲ. ಬಿಜೆಪಿ ನಾಯಕರು ಸೌಜನ್ಯಕ್ಕೂ ನನ್ನ ಅಭಿಪ್ರಾಯ ಕೇಳಲಿಲ್ಲ. 2023 ರಲ್ಲಿ ವಿಧಾನ ಸಭೆಗೆ ನಮ್ಮ ಕುಟುಂಬಕ್ಕೆ ಟಿಕೆಟ್ ಕೇಳಿದ್ದಿಲ್ಲ. ಕೊಪ್ಪಳಕ್ಕೆ ಪಂಚಮಸಾಲಿ ಸಮಾಜಕ್ಕೆ ಟಿಕೆಟ್ ಕೊಡಲು ನಿರ್ಧರಿಸಿದ್ದರು. ಕೊಪ್ಪಳದ ಸ್ಥಳೀಯ ನಾಯಕರನ್ನು ಕೇಳಿದ್ದರು. ಅವರು ಯಾರು ಮುಂದೆ ಬರಲಿಲ್ಲ. ಆಗಲೂ ನನ್ನ ಸೊಸೆಗೆ ಟಿಕೆಟ್ ಕೇಳಲಿಲ್ಲ. ಬಿಜೆಪಿ ನಾಯಕರೆ ಪಂಚಮಸಾಲಿ ನಾಯಕರಿಗೆ ಟಿಕೆಟ್ ಕೊಡಬೇಕು ಎಂದು ನಿರ್ಧಾರ ಮಾಡಿದ್ದರು. ಶೋಭಾ ಅವರೇ ಕರೆ ಮಾಡಿ ನನ್ನ ಸೊಸೆಗೆ ಟಿಕೆಟ್ ಕೊಟ್ಟರು. ಕೊನೆಯಲ್ಲಿ ನನ್ನ ವಿಲನ್ ಮಾಡಿದರು. ಬಿಜೆಪಿಯೇ ನಮ್ಮನ್ನು ಸೋಲಿಸಿತು. ನನಗೆ ಮಂತ್ರಿ ಸ್ಥಾನ ಸಿಗಲಿಲ್ಲ ಅದು ದುರ್ದೈವ. 1978 ರಲ್ಲಿ ನನಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿತ್ತು. ಕ್ಷೇತ್ರದಲ್ಲಿ ಜನಪರ ನಿಲುವು ವಿಷಯಗಳನ್ನು ಮುಂದಿಟ್ಟು ಅಭ್ಯರ್ಥಿ ಪರ ಪ್ರಚಾರ ಮಾಡುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next