Advertisement

ತೋರಣಗಲ್ಲಿನಲ್ಲಿ ಡೆಂಘೀ ದಿನಾಚರಣೆ

06:50 PM May 22, 2020 | Naveen |

ಸಂಡೂರು: ಸ್ವಚ್ಛತೆ ಕೊರತೆಯಿಂದ ವಿಶೇಷ ಜ್ವರಬಾಧೆಗಳು ಕಾಡುತ್ತಿವೆ. ಅದರಲ್ಲಿ ಡೆಂಘೀ ಸಹ ಒಂದಾಗಿದೆ. ಆದ್ದರಿಂದ ಅದನ್ನು ತಡೆಯಬೇಕಾದರೆ ಸ್ವಚ್ಛತೆ ಅತಿ ಅಗತ್ಯವಾಗಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು.

Advertisement

ಅವರು ತಾಲೂಕಿನ ತೋರಣಗಲ್ಲಿನಲ್ಲಿ ಡೆಂಘೀ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ ಆರೋಗ್ಯ ಇಲಾಖೆ ನಿರಂತರವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದು ಅವರಿಗೂ ಸಹ ರೋಗ ಹರಡುವ ಭೀತಿ ಇರುತ್ತದೆ. ಆದರೆ ಅದಕ್ಕೆ ಕುಟುಂಬದ ಮತ್ತು ಸಮಾಜದ ಬೆಂಬಲ ಅತಿ ಅಗತ್ಯವಾಗಿದೆ. ಇಂದು ಸಿಬ್ಬಂದಿ ರೋಗ ತಡೆಯಲು ಸಾರ್ವಜನಿಕರಿಗೆ ಸೊಳ್ಳೆಪರದೆ ಬಳಕೆ, ಕುಡಿಯುವ ನೀರನ್ನು ಮುಚ್ಚಿಡುವ ಬಗ್ಗೆ, ಸೊಳ್ಳೆಗಳ ಉತ್ಪತ್ತಿ ಕೇಂದ್ರಗಳನ್ನು ತಕ್ಷಣ ಮುಚ್ಚುವುದು, ಮಸ್ಕಿಟೋ ಕಾಯಿಲ್‌ ಬಳಕೆ , ಸಂಜೆ 5.30ರಿಂದ 7.30ರ ವರೆಗೆ ಬಾಗಿಲು ಮುಚ್ಚಿಕೊಳ್ಳುವುದು, ಡೆಂಘೀ ಜೊತೆಗೆ ಚಿಕನ್‌ ಗುನ್ಯಾ, ಮಲೇರಿಯಾ ಇತರ ಎಲ್ಲ ರೀತಿಯ ಜ್ವರ ಬಾಧೆಗಳನ್ನು ತಡೆಯಲು ಸಹಾಯಕವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಆರೋಗ್ಯ ಇಲಾಖೆ ಸಿಬ್ಬಂದಿ ಜನರಲ್ಲಿ ಜಾಗೃತಿ ಉಂಟುಮಾಡುವ ಮೂಲಕ ಈ ರೀತಿಯ ಎಲ್ಲ ಜ್ವರಬಾಧೆಗಳನ್ನು ತಡೆಯಲು ಸಹಾಯಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಭಾಗ್ಯಲಕ್ಷ್ಮೀ, ಆಶಾ ಪಿಸಿಲಿಟೇಟರ್‌ ಬಸಮ್ಮ, ಆಶಾಕಾರ್ಯಕರ್ತೆಯರಾದ ವಿಜಯಶಾಂತಿ, ವೆಂಕಟಲಕ್ಷ್ಮೀ, ರಾಜೇಶ್ವರಿಗೆ, ಪದ್ಮಾವತಿ, ಕಾವೇರಿ, ಮಂಜುಳಾ, ಆಶಾ, ಶ್ರೀದೇವಿ, ಲಕ್ಷ್ಮೀ ಗೋವಿಂದಮ್ಮ, ತೇಜಮ್ಮ, ಹುಲಿಗೆಮ್ಮ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next