Advertisement

“ಕೈ’ ಬಿಡದ ಸಂಡೂರು ಮತದಾರ; ಬಿಜೆಪಿಗೆ ಜಯದ ಕಾತರ: 13 ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ

01:13 PM Oct 31, 2024 | Team Udayavani |

ಉದಯವಾಣಿ ಸಮಾಚಾರ
ಬಳ್ಳಾರಿ: “ಕಾಂಗ್ರೆಸ್‌ ಭದ್ರಕೋಟೆ’ ಎಂಬ ಗಣಿ ಜಿಲ್ಲೆ ಬಳ್ಳಾರಿಯ ಹಣೆಪಟ್ಟಿಯನ್ನು ಇಂದಿಗೂ ಉಳಿಸಿಕೊಂಡು ಬಂದಿ ರುವ ಸಂಡೂರು ವಿಧಾ ನಸಭಾ ಕ್ಷೇತ್ರ ರಾಜ್ಯ ವಿಧಾನಸಭೆಗೆ ಈವರೆಗೆ ನಡೆದಿರುವ 15 ಸಾರ್ವತ್ರಿಕ ಚುನಾವಣೆಗಳಲ್ಲಿ 13ರಲ್ಲಿ ಕಾಂಗ್ರೆಸ್‌ ಜಯ ಗಳಿಸಿದೆ.

Advertisement

ಕ್ಷೇತ್ರದ ಕೈ ಕೋಟೆಯಲ್ಲಿ “ಕಮಲ’ ಅರಳಿಸಬೇಕೆಂಬ ಕೇಸರಿಪಡೆಯ 2 ದಶಕಗಳ ಪ್ರಯತ್ನ ಕೈಗೂಡದಿರುವುದು ಗಮನಾರ್ಹ.
ಪ್ರತ್ಯೇಕ ಸಂಸ್ಥಾನ, ಅದಿರು ಗಣಿಗಾರಿಕೆ, ಅತ್ಯಂತ ಹೇರಳವಾಗಿ ನೈಸರ್ಗಿಕ ಸಂಪನ್ಮೂಲವುಳ್ಳ ಸಂಡೂರು ಕ್ಷೇತ್ರ, ರಾಜ್ಯ ವಿಧಾನಸಭೆಗೆ 1957ರಲ್ಲಿ ನಡೆದ ಮೊದಲ ಚುನಾವಣೆಯಿಂದಲೂ ಕಾಂಗ್ರೆಸ್‌ ಭದ್ರಕೋಟೆ ಎಂಬುದು ಜಗಜ್ಜಾಹೀರು.

1957ರಿಂದ 2023ವರೆಗೆ 15 ವಿಧಾನಸಭೆ ಚುನಾವಣೆ ನಡೆದಿವೆ. 1985ರಲ್ಲಿ ಸಿಪಿಐ ಪಕ್ಷದಿಂದ ಯು.ಭೂಪತಿ, 2004ರಲ್ಲಿ ಜೆಡಿಎಸ್‌ನಿಂದ ಹಾಲಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಗೆಲುವು ಹೊರತುಪಡಿಸಿ, ಉಳಿದೆಲ್ಲ 13 ಚುನಾವಣೆಗಳಲ್ಲೂ ಕಾಂಗ್ರೆಸ್‌ ಜಯಭೇರಿ ಬಾರಿಸಿದೆ. ಇದರಲ್ಲಿ ಸಂಡೂರು ರಾಜಮನೆತನದ ಮುರಾರಿರಾವ್‌ ಯಶ್ವಂತ್‌ರಾವ್‌ ಘೋರ್ಪಡೆ (ಎಂ.
ವೈ.ಘೋರ್ಪಡೆ) ಒಮ್ಮೆ ಅವಿ ರೋಧ ಆಯ್ಕೆ ಸೇರಿ 7 ಬಾರಿ ಜಯಗಳಿಸುವ ಮೂಲಕ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರರಂತೆ ಮೆರೆದಿದ್ದಾರೆ.

ಎಸ್‌ಟಿ ಮೀಸಲು ಕ್ಷೇತ್ರ: ಸಂಡೂರು ರಾಜಮ ನೆತನದ ಎಂ.ವೈ.ಘೋರ್ಪಡೆ ಕ್ಷೇತ್ರದ ಮೇಲೆ ತಮ್ಮದೇ ಹಿಡಿತ ಹೊಂದಿದ್ದರು. ಘೋರ್ಪಡೆ ಮೇಲೆ ಕ್ಷೇತ್ರದ ಮತದಾರರು, ಜನರಿಗೆ ಇದ್ದ ವಿಶ್ವಾಸ ಅವರು ಪ್ರತಿನಿಧಿಸುತ್ತಿದ್ದ ಕಾಂಗ್ರೆಸ್‌ ಪಕ್ಷಕ್ಕೂ ಕ್ಷೇತ್ರದಲ್ಲಿ ಭದ್ರಬುನಾದಿಯಾಗಿದೆ. ಇದು 2008 ರಲ್ಲಿ ಕ್ಷೇತ್ರ ಮರುವಿಂಗಡ ಣೆಯಾಗಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದರೂ ಕಾಂಗ್ರೆಸ್‌ ತನ್ನ ಪಾರುಪತ್ಯ ಮುಂದುವರಿಸಿದೆ. 2008ರಲ್ಲಿ ಅಕ್ರಮ ಗಣಿಗಾರಿಕೆಯಿಂದ “ರಿಪಬ್ಲಿಕ್‌ ಆಫ್‌ ಬಳ್ಳಾರಿ’ ಎಂಬ ಅಪವಾದದ ನಡುವೆ ಅವಿಭಜಿತ ಬಳ್ಳಾರಿ ಜಿಲ್ಲೆಯ 9 ಕ್ಷೇತ್ರಗಳಲ್ಲಿ 8ರಲ್ಲಿ “ಕಮಲ’ ಅರಳಿದರೂ ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲುವ ಮೂಲಕ ಸಂಡೂರು “ಕೈ ಭದ್ರಕೋಟೆ’ ಎಂಬ ಹಣೆಪಟ್ಟಿ ಉಳಿಸಿ ಕೊಂಡಿದೆ.

2ನೇ ಉಪಚುನಾವಣೆ: ಸಂಡೂರು ಕ್ಷೇತ್ರ 1959ರಲ್ಲೇ ಒಮ್ಮೆ ಉಪಚುನಾವಣೆಯನ್ನು ಎದುರಿಸಿದೆ. ರಾಜ್ಯ ವಿಧಾನಸಭೆಗೆ 1957ರಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಎಚ್‌.ರಾಯನಗೌಡ ಕೆಲವೇ ತಿಂಗಳಲ್ಲಿ ನಿಧನರಾದರು. ಇದರಿಂದ ತೆರ ವಾದ ಶಾಸಕ ಸ್ಥಾನಕ್ಕೆ 1959ರಲ್ಲಿ ಉಪಚುನಾವಣೆ ಎದುರಾಗಿದ್ದು, ರಾಜಮನೆತನದ ಎಂ.ವೈ.ಘೋರ್ಪಡೆ ಅವರು ಸ್ಪರ್ಧಿಸಿ ಗೆಲ್ಲುವ ಮೂಲಕ ರಾಜಕೀಯ ಪ್ರವೇಶಿಸಿದರು. ಇದೀಗ 2008 ರಿಂದ 2023ರವರೆಗೆ ಸತತ ನಾಲ್ಕು ಚುನಾವಣೆಗಳಲ್ಲಿ ಕಾಂಗ್ರೆಸ್‌ ಜಯ ಗಳಿಸುತ್ತಲೇ ಬಂದಿದೆ.

Advertisement

ಶಾಸಕ ಸ್ಥಾನಕ್ಕೆ ರಾಜೀನಾಮೆ: ಸಂಡೂರು ಕ್ಷೇತ್ರದಿಂದ ಸತತ 4 ಬಾರಿ ಕಾಂಗ್ರೆಸ್‌ನಿಂದ ಜಯ ಗಳಿಸಿರುವ ಹಾಲಿ ಸಂಸದ ತುಕರಾಂ, 2024ರ ಲೋಕಸಭೆ ಚುನಾವಣೆಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ್ದಾರೆ. ಇದರಿಂದ ಶಾಸಕ ಸ್ಥಾನಕ್ಕೆ ಸಂಸದ ತುಕ ರಾಂ ರಾಜೀನಾಮೆ ನೀಡಿದ್ದು, ತೆರವಾಗಿದ್ದ ಸ್ಥಾನಕ್ಕೆ ಇದೀಗ ಉಪ ಚುನಾವಣೆ ನಡೆಯುತ್ತಿದೆ. ಸದ್ಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಂಸದ ತುಕರಾಂ ಪತ್ನಿ ಅನ್ನಪೂರ್ಣ ಕಣಕ್ಕಿಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ಎದುರಾಗಿದೆ.

ಎಸ್‌ಟಿ ಮತಗಳೇ ನಿರ್ಣಾಯಕ
ಸಂಡೂರು ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಅತಿ ಹೆಚ್ಚು ಎಸ್‌ಟಿ ಸಮುದಾಯದ 65 ಸಾವಿರ ಮತಗಳು ನಿರ್ಣಾಯಕ ವೆನಿಸಿದರೂ, ಮೀಸಲು ಕ್ಷೇತ್ರವಾದ್ದರಿಂದ ಮತ ವಿಭಜ ನೆ ಸಾಧ್ಯತೆಯಿದೆ. ಲಿಂಗಾಯತ 35 ಸಾವಿರ, ಕುರುಬ 30 ಸಾವಿರ, ಮುಸ್ಲಿಂ 10 ಸಾವಿರ, ಎಸ್‌ಸಿ 40 ಸಾವಿರ, ಬ್ರಾಹ್ಮಣ, ಶೆಟ್ಟಿ, ಕಮ್ಮ, ಬಲಿಜ ಇತರೆ ಸೇರಿ 40 ಸಾವಿರ ಮತಗಳು ಇವೆ. ಈ ಪೈಕಿ ಮುಸ್ಲಿಂ, ಕುರುಬ, ಎಸ್‌ಸಿ ಮತಗಳು ಕಾಂಗ್ರೆಸ್‌ ಕೈಹಿಡಿದರೆ, ಲಿಂಗಾಯತ, ಇತರೆ ಮತಗಳು ಕಮಲ ಪರ ವಾಲಬಹುದು. ಮುಖ್ಯವಾಗಿ ತೋರಣಗಲ್ಲು, ಕುಡತಿನಿ ಭಾಗದಲ್ಲಿ ಬಿಜೆಪಿಗೆ ಭದ್ರನೆಲೆ ಇದ್ದರೂ ಉಳಿದ ಭಾಗದಲ್ಲಿ ಕಾಂಗ್ರೆಸ್‌ ಭದ್ರವಾಗಿದೆ.

■ ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next