Advertisement

“ಧೋನಿ’ಚಿತ್ರದ ಸಹನಟ ಸಂದೀಪ್‌ ನಹಾರ್ ಆತ್ಮಹತ್ಯೆ

11:55 PM Feb 15, 2021 | Team Udayavani |

ಮುಂಬೈ: “ಎಂ.ಎಸ್‌. ಧೋನಿ’ ಚಿತ್ರದ ನಾಯಕ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ರಪ್ರೇಮಿಗಳ ಮನಸ್ಸಿನಿಂದ ಮಾಸುವ ಮುನ್ನವೇ ಅದೇ ಚಿತ್ರದಲ್ಲಿ ಸಹ ನಟರಾಗಿ ಅಭಿನಯಿಸಿದ್ದ ನಟ ಸಂದೀಪ್‌ ನಹಾರ್‌ ಕೂಡ ಆತ್ಮಹತ್ಯೆ ಮಾಡಿಕೊಂಡು ದೊಡ್ಡ ಶಾಕ್‌ ನೀಡಿದ್ದಾರೆ.

Advertisement

ಫೇಸ್‌ಬುಕ್‌ನಲ್ಲಿ ದೀರ್ಘ‌ವಾದ ಆತ್ಮಹತ್ಯಾ ಲೇಖನ ಬರೆದಿರುವ ಅವರು, ಮುಂಬೈನಲ್ಲಿ ಓರ್ವ ನಟನಾಗಲು ತಾವು ಪಟ್ಟ ಪರಿಶ್ರಮ, ಬಾಲಿವುಡ್‌ನ‌ ರಾಜಕೀಯದಿಂದಾಗಿ ತಾವು ಅವಕಾಶ ವಂಚಿತರಾಗುತ್ತಿರುವುದನ್ನು ವಿವರಿಸಿದ್ದಾರೆ. ಜೊತೆಗೆ, ಈ ಎಲ್ಲಾ ವಿವರಣೆಯನ್ನು ತಾವೇ ಹೇಳಿರುವ ವಿಡಿಯೋವೊಂದನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ. ಆನಂತರ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಎಲ್ಲ ಮಾದರಿಯ ಕ್ರಿಕೆಟಿಗೆ ನಮನ್‌ ಓಜಾ ವಿದಾಯ : ಎರಡು ದಶಕಗಳ ಕ್ರಿಕೆಟ್‌ ಬದುಕಿಗೆ ತೆರೆ

2016ರಲ್ಲಿ ತೆರೆ ಕಂಡಿದ್ದ ಎಂ.ಎಸ್‌. ಧೋನಿ: ದ ಅನ್‌ಟೋಲ್ಡ್‌ ಸ್ಟೋರಿ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಧೋನಿ ನಿಜ ಜೀವನದಲ್ಲಿ ರಾಂಚಿಯಲ್ಲಿ ಕ್ರೀಡಾ ಸಾಮಗ್ರಿಗಳ ಅಂಗಡಿಯನ್ನಿಟ್ಟುಕೊಂಡಿದ್ದ ಸಿಖ್‌ ಧರ್ಮೀಯ ಸ್ನೇಹಿತರೊಬ್ಬರು ಧೋನಿ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಪಾತ್ರವನ್ನು ಸಂದೀಪ್‌ ನಹಾರ್‌ ನಿರ್ವಹಿಸಿದ್ದರು. ಚಿತ್ರ ನೋಡುವಾಗ ಅವರ ಪಾತ್ರವೂ ಹೆಚ್ಚು ಗಮನ ಸೆಳೆಯುತ್ತದೆ. ಹಾಗಾಗಿ, ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಸಂದೀಪ್‌, ಅಕ್ಷಯ್‌ ಕುಮಾರ್‌ ಅವರ ಕೇಸರಿ ಚಿತ್ರದಲ್ಲೂ ಅಭಿನಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next