Advertisement

ಸ್ಯಾಂಡಲ್ ವುಡ್ ನೆನಪಿಸಿಕೊಂಡಂತೆ ಎಸ್.ಪಿ ಬಾಲಸುಬ್ರಹ್ಮಣ್ಯಂ..

03:59 PM Sep 25, 2020 | keerthan |

ಬೆಂಗಳೂರು: ಗಾನಗಾರುಡಿ, ಬಹುಭಾಷಾ ಗಾಯಕ, ಸಂಗೀತ ಲೋಕದ ದಿಗ್ಗಜ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಇಂದು ಮಧ್ಯಾಹ್ನ ಅಸುನೀಗಿದ್ದಾರೆ. ಸುಮಾರು ಐದು ದಶಕಗಳ ಕಾಲ ಸಂಗೀತ ಪ್ರೇಮಿಗಳಿಗೆ ರಸದೌತಣ ನೀಡಿದ ಎಸ್ ಪಿಬಿ ಇನ್ನು ನೆನಪು ಮಾತ್ರ. ಈ ಸಂದರ್ಭದಲ್ಲಿ ಕನ್ನಡದ ಕೆಲವು ನಟರು, ಯುವ ನಿರ್ದೇಶಕರು ಬಾಲಸುಬ್ರಹ್ಮಣ್ಯಂ ಅವರನ್ನು ಈ ರೀತಿ ನೆನಪಿಸಿಕೊಂಡಿದ್ದಾರೆ.

Advertisement

ಯಾರ ಕಣ್ಣು ತಾಕಿತು!
ಯಾವತಪ್ಪಿಗೆ ನಿಮಗೆ ಈಶಿಕ್ಷೆ!
ಇನ್ನು ಎಷ್ಟು ಸಾಧಕರು
ಈಸಾವಿನ ಶಿಕ್ಷೆಗೆ ಸಾಲು ನಿಂತಿಹರು!
ವಿಶ್ವಶಾಂತಿ ಭಂಗಕ್ಕೆ ಕೊರೋನ ಹರಡಿ ಮಳ್ಳಿಯಂತ ದರಿದ್ರ ದೇಶ ಚೀನವನ್ನು ವಿಶ್ವದ ಕಾಳಜಿ ಇರುವ ಇತರ ರಾಷ್ಟ್ರಗಳು ಮಟ್ಟಹಾಕಿ ಮೂಲೆಗುಂಪು ಮಾಡಬೇಕು!
ನನ್ನನೆಚ್ಚಿನ ಹೃದಯವನ್ನ ಈ ರೀತಿ ಕಳೆದುಕೊಳ್ಳುವೆ ಎನಿಸಲಿಲ್ಲಾ! ಓಂಶಾಂತಿ.!

– ಜಗ್ಗೇಶ್

ಎಸ್ಪಿಬಿ ಅವರದ್ದು ಪ್ರೋತ್ಸಾಹ ಕೊಡುವ ಮನೋಭಾವ. ಯಾವುದೇ ಸಿಂಗರ್ ಬಂದರೂ ಅವರನ್ನು ಪ್ರೋತ್ಸಾಹಿಸುತ್ತಿದ್ದರು. ಅವರದ್ದು ಅಮೃತದಂತಹ ಮಾತು. ಅದು ಅವರ ತಂದೆ ತಾಯಿ ಬೆಳೆಸಿದ ರೀತಿಯಿಂದ ಬಂದಿದ್ದು. ಹಣದಿಂದ ಅಲ್ಲ, ಹೃದಯದಿಂದ ಎಲ್ಲವನ್ನು ಗಳಿಸಿದ ಗಾಯಕ.

– ಶಿವರಾಜ್‌ಕುಮಾರ್

Advertisement

ಇದನ್ನೂ ಓದಿ: ಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

ತಮ್ಮ ಸುಮಧುರ ಕಂಠದಿಂದ 50ಕ್ಕೂ ಹೆಚ್ಚು ವರ್ಷಗಳಿಂದಲೂ ಎಲ್ಲರ ಮನ ತಣಿಸಿದ ಅದ್ಭುತ ಸಹೃದಯಿ ಗಾಯಕ, ಲೆಜೆಂಡ್ ಎಸ್.ಪಿ. ಬಾಲಸುಬ್ರಮಣ್ಯಂ ರವರು ಇಂದು ವಿಧಿವಶರಾಗಿರುವುದು ನಮ್ಮ ದೇಶಕ್ಕೆ ದುಃಖಕರ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಎಂದು ದೇವರಲ್ಲಿ ಮನವಿ ಮಾಡುತ್ತೇನೆ

-ನಿಮ್ಮ ದಾಸ ದರ್ಶನ್

ಸಂಗೀತದಲ್ಲಿನ ಅತ್ಯಂತ ಶಾಂತವಾದ ಆದರೆ ಭವ್ಯವಾದ ನೋಟ್ ಗಳಲ್ಲಿ ಒಂದು ಶಾಶ್ವತವಾಗಿ ಕಳೆದುಹೋಗುತ್ತದೆ ಆದರೆ ಅದು ಶಾಶ್ವತವಾಗಿ ಉಳಿಯುತ್ತದೆ. ಈ ದಂತಕಥೆಯೊಂದಿಗಿನ ಪ್ರತಿಯೊಂದು ಮಾತುಕತೆಯನ್ನೂ ನಾನು ಅಮೂಲ್ಯವಾಗಿ ಕಾಪಿಡುತ್ತೇನೆ.

-ರಮೇಶ್ ಅರವಿಂದ್

ಎಸ್ ಪಿಬಿ ಸರ್ ಇನ್ನಿಲ್ಲ ಎಂಬ ಸುದ್ದಿ ತಿಳಿದು ಬಹಳ ದುಖಃವಾಯಿತು. ಇಂದಿಗೆ ಒಂದು ಯುತಾಂತ್ಯವಾಯಿತು. ನೀವು ಎಂದಿಗೂ ನಮ್ಮಗಳ ನೆನಪಿನಲ್ಲಿ ಇರುತ್ತೀರಿ. ಭಾವಪೂರ್ಣ ಶ್ರದ್ಧಾಂಜಲಿ.

-ರಕ್ಷಿತ್ ಶೆಟ್ಟಿ

ಇದನ್ನೂ ಓದಿ: ‘ಪ್ರೇಮದ ಹೂಗಾರ ಈ ಹಾಡುಗಾರ… ಹೂ ನೀಡುತಾನೆ.. ಮುಳು ಬೇಡುತಾನೆ..’: ಹೋಗಿ ಬನ್ನಿ SPB

ಬೆಳ್ಳಿ ರಥದಲಿ ಸೂರ್ಯ ತಂದ ಕಿರಣ
“ಎಸ್.ಪಿ . ಬಾಲಸುಬ್ರಮಣ್ಯಂ”ನವರಿಗೆ ಅಂತಿಮ ನಮನಗಳು..
ನೀವು ಅಗಲಿರಬಹುದು…ನಿಮ್ಮ ಧ್ವನಿ ಚಿರಾಯು.

-ಸಿಂಪಲ್ ಸುನಿ

ಗಾಯನ ನಿಂತಿದೆ ಹಾಡುಗಳಲ್ಲ… ಉಸಿರು ನಿಂತಿದೆ ಹೆಸರಲ್ಲ…. ಪ್ರತಿ ಸಾರಿ ನಿಮ್ಮ ಧ್ವನಿ ಕೇಳಿದಾಗಲೂ ನೀವು ಜೀವಿಸುತ್ತೀರಿ ನಮ್ಮಲ್ಲಿ, ಈ ನಾಡಲ್ಲಿ

-ಸಂತೋಷ್ ಆನಂದರಾಮ್

Advertisement

Udayavani is now on Telegram. Click here to join our channel and stay updated with the latest news.

Next