ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಸ್ಯಾಂಡಲ್‌ವುಡ್ ನಿರ್ಮಾಪಕ ಶಂಕರ್‌ಗೌಡ ವಿಚಾರಣೆ ಸಂದರ್ಭ ದಲ್ಲಿ ಕೆಲವೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಈ ಮೂಲಕ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣ ದ ಎರಡನೇ ಅಧ್ಯಾಯ ಆರಂಭವಾಗಲಿದೆ.
ಮತ್ತೂಂದೆಡೆ ಶಂಕರ್ ಗೌಡ “ಒನ್ ಲವ್” ಎಂಬ ಕೋಡ್‌ವರ್ಡ್ ಮೂಲಕ ಮಸ್ತಾನ್ ಚಂದ್ರ ಮತ್ತು ಜಾನ್ ಹಾಗೂ ಫಯೂಮ್ ಮೂಲಕ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಶಂಕರ್‌ಗೌಡ ವಿಚಾರಣೆಯಲ್ಲಿ ಈಗಾಗಲೇ ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ನಟ-ನಟಿಯರು, ಸಂಗೀತ ನಿರ್ದೇಶಕರು ಹಾಗೂ ನಗರದ ಪ್ರತಿಷ್ಠಿತ ಉದ್ಯಮಿಗಳ ಹೆಸರು ಬೆಳಕಿಗೆ ಬಂದಿದೆ. ಅವರನ್ನು ಸದ್ಯ ದಲ್ಲೇ ನೋಟಿಸ್ ನೀಡಿ ಹಂತ-ಹಂತವಾ ಗಿ ವಿಚಾರಣೆಗೆ ಕರೆಸಲಾಗುತ್ತದೆ. ಇನ್ನು ಶಂಕರ್ ಗೌಡ ಅವರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಶುಕ್ರವಾರ ಮೂರನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾ ಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ 2ನೇ ಅಧ್ಯಾಯ:
ಚಂದನವನ ಸಂಪರ್ಕ ಹೊಂದಿದ್ದ ಅನಿಕಾ ಎಂಬ ಡ್ರಗ್ಲ್ ಪೆಡ್ಲರ್ ಮೂಲಕ ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸ್ ಬೆನ್ನು ಹತ್ತಿದ್ದ ಸಿಸಿಬಿ ಪೊಲೀಸರು ನಟಿಯರಾದ ರಾಗಿಣಿ ದ್ವಿವೇದಿ,ಸಂಜನಾ ಗಲ್ರಾನಿ ಮತ್ತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಡ್ರಗ್ಸ್ ಪೆಡ್ಲರ್‌ಗಳು,ಕೇರಳ ಮಾಡೆಲ್ ಸೇರಿ ಸುಮಾರು 20ಕ್ಕೂ ಅಧಿಕ ಮಂದಿಯನ್ನು ಬಂಧಿಸಿ ದ್ದರು. ಇದೀಗ ಬಿಗ್‌ಬಾಸ್ ಸ್ಪರ್ಧಿ ಮಸ್ತಾನ್ ಚಂದ್ರ ಮೂಲಕ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ಎರಡನೇ ಅಧ್ಯಾಯ ಆರಂಭವಾಗಲಿದೆ.
ಪೊಲೀಸ್ ಮೂಲಗಳ ಪ್ರಕಾರ ಹಳೇಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವರು ಈ ಪ್ರಕರಣದ ಆರೋಪಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದರು. ಅಲ್ಲದೆ, ಶಂಕರ್‌ಗೌಡ ಆಯೋಜಿಸುತ್ತಿದ್ದ ಪೇಜ್-ತ್ರಿಪಾರ್ಟಿಗಳಿಗೆ ಅವರು ಖಾಯಂ ಅತಿಥಿಯಾಗಿದ್ದರು. ಹೀಗಾಗಿ ಅದೇ ಆರೋಪಿಗಳನ್ನು ಮತ್ತೂಮ್ಮೆ ವಿಚಾರಣೆಗೆ ಕರೆಯಲಾಗುತ್ತದೆ. ಜತೆಗೆ ಕೆಲ ಪ್ರಸಿದ್ದ ನಟರು, ಅವರ ಪುತ್ರರು ಡ್ರಗ್ಸ್ ಪ್ರಕರಣದಲ್ಲಿ ಭಾಗಿ ಯಾಗಿದ್ದಾರೆ ಎಂದು ಹೇಳಲಾಗಿದೆ.
ಶಂಕರ್‌ಗೌಡ ಸ್ಯಾಂಡಲ್‌ವುಡ್, ಟಾಲಿವುಡ್, ಬಾಲಿವುಡ್‌ನ ಕೆಲ ಪ್ರಮುಖ ನಟ-ನಟಿಯರು, ನಿರ್ಮಾಪಕ ರು ಹಾಗೂ ನಗರದ ಪ್ರತಿಷ್ಠಿತ ಉದ್ಯಮಿಗಳು ತಮ್ಮ ಪಾರ್ಟಿಗಳಿಗೆ ನಿರಂತರವಾಗಿ ಬರುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.