Advertisement

Sandalwood; ಚಿರು ಸಮಾಧಿ ಮುಂದೆ ಮಲಗಿದ ಧ್ರುವ ಸರ್ಜಾ

04:21 PM Sep 09, 2023 | Team Udayavani |

ಕನ್ನಡ ಚಿತ್ರರಂಗದಲ್ಲಿ ನಟರಾದ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಸಹೋದರರ ಬಾಂಧವ್ಯದ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಅಣ್ಣ ಚಿರಂಜೀವಿ ಸರ್ಜಾ ಅವರ ಹಠಾತ್‌ ನಿಧನದಿಂದ ತಮ್ಮ ಧ್ರುವ ಸರ್ಜಾ ಕುಗ್ಗಿ ಹೋಗಿದ್ದರು. ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿ ಇದ್ದರೂ ಇಡೀ ಕುಟುಂಬದಲ್ಲಿ ಎಲ್ಲರಿಗೂ ಧೈರ್ಯ ತುಂಬಿ ಮುನ್ನಡೆಸಿಕೊಂಡು ಹೋಗುತ್ತಿರುವ ಧ್ರುವ ಸರ್ಜಾ, ಈಗಲೂ ಆಗಾಗ್ಗೆ ತಮ್ಮ ಅಣ್ಣನ ಜೊತೆಗಿನ ನೆನಪುಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳ ಮುಂದೆ ಹಂಚಿಕೊಳ್ಳುತ್ತಿದ್ದಾರೆ.

Advertisement

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ಅಂಥದ್ದೇ ಒಂದು ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಧ್ರುವ ಸರ್ಜಾ, ಅಣ್ಣ ಚಿರು ಸಮಾಧಿ ಮುಂದೆ ಮಲಗಿ ದ್ದಾರೆ. ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next