Advertisement

ಹಿರಿಯ ನಟಿ ವಿನಯ ಪ್ರಸಾದ್ ಮನೆಯಲ್ಲಿ ಕಳ್ಳತನ : ಬೆಂಗಳೂರಿನಿಂದ ಉಡುಪಿಗೆ ಬಂದಿದ್ದ ವೇಳೆ ಘಟನೆ

01:33 PM Oct 30, 2022 | Team Udayavani |

ಬೆಂಗಳೂರು : ಹಿರಿಯ ನಟಿ ವಿನಯ್‌ ಪ್ರಸಾದ್‌ ಮನೆಯ ಬಾಗಿಲು ಮೀಟಿರುವ ಕಳ್ಳರು ಬೆಡ್‌ರೂಮ್‌ನಲ್ಲಿರುವ 7 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನಟಿ ವಿನಯ ಪ್ರಸಾದ್‌ ನಂದಿನಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Advertisement

ವಿನಯ್‌ ಪ್ರಸಾದ್‌ ಮತ್ತು ಪತಿ ಜ್ಯೋತಿಪ್ರಕಾಸ್‌ ಹತ್ರಿ ಅವರು ಅ.22ರಂದು ತಮ್ಮ ಸ್ವಂತ ಊರಾದ ಉಡುಪಿಗೆ ಹೋಗಿದ್ದರು. ಅ.26ರಂದು ಸಂಜೆ 4.30ರ ಸುಮಾರಿಗೆ ಮನೆಗೆ ವಾಪಸ್‌ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.

ಮನೆಯ ಮುಂಬಾಗಿಲಿನ ಲಾಕ್‌ ಅನ್ನು ಮೀಟಿ ಮನೆಯೊಳಗೆ ಪ್ರವೇಶಿಸಿಸಿರುವ ಕಳ್ಳರು, ಬೆಡ್‌ರೂಮ್‌ನಲ್ಲಿದ್ದ 7 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನಟಿ ವಿನಯ್‌ಪ್ರಸಾದ್‌ ದೂರು ನೀಡಿದ್ದಾರೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ : 70 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಗೆ ತಲೆ ಬುಡವೇ ಇಲ್ಲದಂತಾಗಿದೆ: ಪ್ರಮೋದ್ ಟೀಕೆ

Advertisement

Udayavani is now on Telegram. Click here to join our channel and stay updated with the latest news.

Next