Advertisement

ಪುನೀತ್ ಸ್ಮರಣಾರ್ಥ ಕ್ಯಾನ್ಸರ್ ರೋಗಿಗಳಿಗೆ ಕೂದಲು ದಾನ ಮಾಡಿದ ನಟಿ ರಿಷಿಕಾ ರಾಜ್

04:17 PM Jan 06, 2022 | Team Udayavani |

ಮೈಸೂರು: ಸ್ಯಾಂಡಲ್‌ವುಡ್ ನಟಿ ರಿಷಿಕಾ ರಾಜ್ ಅವರು ತಮ್ಮ 14 ಇಂಚಿನಷ್ಟು ಕೂದಲನ್ನು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡಿ ಮಾದರಿಯಾಗಿದ್ದಾರೆ.

Advertisement

ಟಗರು ಚಿತ್ರದ ಮೂಲಕ ಖ್ಯಾತಿ ಗಳಿಸಿರುವ ರಿಷಿಕಾ ಅವರು ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಹೇರ್ ಮತ್ತು ಬ್ಯೂಟಿ ಅಸೋಸಿಯೇಷನ್ ​​ಮೈಸೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಂಗವಾಗಿ ತಮ್ಮ ಕೂದಲನ್ನು ದಾನ ಮಾಡಿದರು. ರಿಷಿಕಾ ಉದ್ಘಾಟಿಸಿದ ಕಾರ್ಯಕ್ರಮದಲ್ಲಿ ಸುಮಾರು 70 ದಾನಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.

”ಕ್ಯಾನ್ಸರ್ ರೋಗಿಗಳಿಗೆ ತನ್ನ ಕೂದಲನ್ನು ದಾನ ಮಾಡಲು ತುಂಬಾ ಸಂತೋಷವಾಗಿದೆ. ‘ವಿದ್ಯಾದಾನ,ಕನ್ಯಾದಾನದಂತೆ ಕೇಶದಾನ ಕೂಡ ಮಹತ್ವದ್ದಾಗಿದೆ” ಎಂದು ಅವರು ಹೇಳಿಕೆ ನೀಡಿದ್ದಾರೆ.

“ನನ್ನ ಅನೇಕ ಸ್ನೇಹಿತರು ಮತ್ತು ಸಂಬಂಧಿಕರು ಕ್ಯಾನ್ಸರ್ನಿಂದ ಬಳಲುತ್ತಿರುವುದನ್ನು ನಾನು ನೋಡಿದ್ದೇನೆ. ಕೀಮೋಥೆರಪಿಗೆ ಒಳಗಾದ ನಂತರ ರೋಗಿಗಳು ತಮ್ಮ ಕೂದಲನ್ನು ಕಳೆದುಕೊಳ್ಳುತ್ತಾರೆ. ಅದನ್ನು ನೋಡುವುದು ತುಂಬಾ ನೋವಿನ ಸಂಗತಿ. ದೇವರು ನಮಗೆ ಉತ್ತಮ ಆರೋಗ್ಯ ಮತ್ತು ಉತ್ತಮ ಕೂದಲನ್ನು ನೀಡಿದ್ದಾನೆ, ಆದ್ದರಿಂದ ನಾನು ದಾನ ಮಾಡುತ್ತಿದ್ದೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next