Advertisement

ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯ

08:05 AM Oct 18, 2022 | Team Udayavani |

ದಾವಣಗೆರೆ: ದಾವಣಗೆರೆಯ ಬೆಣ್ಣೆದೋಸೆ ರುಚಿಗೆ ಮನಸೋಲದವರೇ ಇಲ್ಲ. ಅದಕ್ಕೆ ಸ್ಯಾಂಡಲ್‌ವುಡ್‌ನ ಮೋಹಕ ತಾರೆ ರಮ್ಯ ಸಹ ಹೊರತಾಗಿಲ್ಲ.

Advertisement

ಭಾನುವಾರ ರಾತ್ರಿ ಎಂಬಿಎ ಕಾಲೇಜು ಮೈದಾನದಲ್ಲಿ ನಡೆದ ಡಾಲಿ ಧನಂಜಯ ಅಭಿನಯದ ಹೆಡ್‌ಬುಷ್… ಚಿತ್ರದ ಪ್ರಿ ರಿಲೀಸ್ ಇವೆಂಟ್‌ಗೆ ಬಂದಿದ್ದಂತಹ ರಮ್ಯ ವೇದಿಕೆಯಲ್ಲೇ ನನಗೆ ಬೆಣ್ಣೆ ದೋಸೆ ಎಂದರೆ ಬಹಳ ಇಷ್ಟ. ಡಯಟ್ ಮಾಡುತ್ತಿದ್ದರೂ ಸೋಮವಾರ ಬೆಳಗ್ಗೆ ಬ್ರೇಕ್‌ಫಾಸ್ಟ್ ಮಾಡಿಕೊಂಡೇ ಬೆಂಗಳೂರಿಗೆ ಹೋಗುತ್ತೇನೆ. ಯಾವ ಹೋಟೆಲ್ ಫೇಮಸ್ ಎಂದು ಪ್ರೇಕ್ಷಕರನ್ನೇ ಕೇಳಿದ್ದರು.

ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ… ಹೋಟೆಲ್ ಎಂದು ಅನೇಕರು ಉತ್ತರಿಸಿದ್ದರು. ಅದರಂತೆ  ಸೋಮವಾರ ಬೆಳಗ್ಗೆ ಬಾಪೂಜಿ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಶ್ರೀ ಗುರು ಕೊಟ್ಟೂರೇಶ್ವರ ಬೆಣ್ಣೆದೋಸೆ ಹೋಟೆಲ್‌ಗೆ ಆಗಮಿಸಿದ ರಮ್ಯ ಖಾಲಿ ಮತ್ತು ಬೆಣ್ಣೆದೋಸೆ ಸವಿದರು. ದೋಸೆಯ ರುಚಿಗೆ ಮಾರು ಹೋದರು. ರಮ್ಯ ಹೋಟೆಲ್‌ಗೆ ಬಂದಿರುವುದು ಗೊತ್ತಾಗುತ್ತಿದ್ದಂತೆ ಜನರು ರಮ್ಯ ನೋಡಲು, ಸೆಲ್ಫಿಗೆ ಮುಗ್ಗಿ ಬಿದ್ದ ಪರಿಣಾಮ ಟ್ರಾಫಿಕ್ ಜಾಮ್ ಆಗಿತ್ತು. ರಮ್ಯ ಬರುವತನಕ ಕಾದಂತಹ ಕೆಲವರು ಹ್ಯಾಂಡ್ ಶೇಕ್ ಮಾಡಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಇದನ್ನೂ ಓದಿ : ಶೋಪಿಯಾನ್‌ನಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: ಉತ್ತರ ಪ್ರದೇಶದ ಇಬ್ಬರು ವಲಸೆ ಕಾರ್ಮಿಕರು ಸಾವು

Advertisement

Udayavani is now on Telegram. Click here to join our channel and stay updated with the latest news.

Next