Advertisement

ಕನ್ನಡ ಚಿತ್ರರಂಗದ PRO ಸುಧೀಂದ್ರ ವೆಂಕಟೇಶ್ ಪುತ್ರಿ ವಿವಾಹದಲ್ಲಿ Sandalwood ತಾರೆಯರು

07:44 PM May 09, 2023 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಾರಕರ್ತ(ಪಿಆರ್ ಓ) ಸುಧೀಂದ್ರ ವೆಂಕಟೇಶ್ ಅವರ ಪುತ್ರಿ ಚಂದನ‌ ಅವರ ವಿವಾಹ ಪ್ರಸನ್ನ ಭಾಸ್ಕರ್ ಅವರೊಂದಿಗೆ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು.

Advertisement

ಚಂದನ ಹಾಗೂ ಪ್ರಸನ್ನ ಭಾಸ್ಕರ್ ಅವರ ವಿವಾಹ ಮಹೋತ್ಸವಕ್ಕೆ ಸ್ಯಾಂಡಲ್ ವುಡ್ ನ ಖ್ಯಾತ ತಾರೆಯರು ಸಾಕ್ಷಿಯಾದರು.

ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಪಿ ಆರ್ ಓ ಆಗಿ ಸುಧೀಂದ್ರ ವೆಂಕಟೇಶ್ ಸಕ್ರಿಯರಾಗಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಪ್ರಚಾರ ನೀಡಿದ ಹೆಗ್ಗಳಿಕೆ ಅವರದ್ದು.

ಕ್ರೇಜಿ ಸ್ಟಾರ್ ರವಿಚಂದ್ರನ್, ರಮೇಶ್ ಅರವಿಂದ್, ಉಪೇಂದ್ರ, ಧ್ರುವ ಸರ್ಜಾ, ಅಜೇಯ್ ರಾವ್ , ವಿನೋದ್ ಪ್ರಭಾಕರ್, ಹಂಸಲೇಖ ದಂಪತಿ, ಸುಧಾರಾಣಿ, ರಾಗಿಣಿ ದ್ವಿವೇದಿ, ಚಾಂದಿನಿ, ಅಮೂಲ್ಯ, ಸೋನು ಗೌಡ , ಪ್ರಗತಿ ರಿಷಭ್ ಶೆಟ್ಟಿ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಧರ್ಮ, ತಬಲ ನಾಣಿ, ಶ್ರೀನಾಥ್, ಕೀರ್ತಿ ರಾಜ್, ಧರ್ಮ ಕೀರ್ತಿರಾಜ್, ಸಿಹಿಕಹಿ ಚಂದ್ರು, ಬಿ.ಸುರೇಶ್, ಗುರುದತ್, ದತ್ತಣ್ಣ ರವಿಚೇತನ್ ನಿರ್ಮಾಪಕರಾದ ಸಾ.ರಾ.ಗೋವಿಂದು, ಎಸ್.ಎ.ಚಿನ್ನೇಗೌಡ, ಎಸ್ ವಿ ಬಾಬು, ಎಂ.ಜಿ.ರಾಮಮೂರ್ತಿ, ಟಿ.ಪಿ.ಸಿದ್ದರಾಜು, ಶೈಲಜಾ ನಾಗ್, ರಾಜಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಟಿ.ಎಸ್.ನಾಗಾಭರಣ, ಪಿ.ಶೇಷಾದ್ರಿ, ಆರ್ ಚಂದ್ರು, ಟಿ.ಎನ್ ಸೀತಾರಮ್, ಬಹದ್ದೂರ್ ಚೇತನ್, ಸಾಹಸ ನಿರ್ದೇಶಕ ರವಿವರ್ಮ, ಗಾಯಕಿಯರಾದ ಮಂಜುಳಾ ಗುರುರಾಜ್, ಬಿ.ಆರ್ ಛಾಯಾ, ಸಂಗೀತ ಕಟ್ಟಿ ಸೇರಿದಂತೆ ಮುಂತಾದ ಚಿತ್ರರಂಗದ ಗಣ್ಯರು ವಿವಾಹ ಮಹೋತ್ಸವಕ್ಕೆ ಆಗಮಿಸಿ ವಧು-ವರರನ್ನು ಆಶೀರ್ವದಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next