Advertisement
ಜಿಲ್ಲಾಧಿಕಾರಿಗಳು ಎಸಿ ಅವರಿಂದ ಪುನಃ ಸರ್ವೆಗೆ ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಇದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ, ಎಸಿ ಸರ್ವೆ ನಡೆಸುವುದಕ್ಕೆ ಯಾವ ಕಾನೂನಿನಲ್ಲಿ ಅವಕಾಶ ಇದೆ? ಇಲ್ಲಿಯ ವರೆಗೆ ಹೀಗೆ ನಡೆದಿದೆಯೇ? ಇದುವರೆಗೆ ಇಲ್ಲದೆ ಇರುವಂತಹ ಕ್ರಮವನ್ನು ಈಗ ಜಾರಿಗೆ ತಂದು ಜನರಿಗೆ ಏಕೆ ತೊಂದರೆ ನೀಡುತ್ತಿದ್ದಾರೆ? ಇದು ಪರಿಹಾರವಾಗಲು ಇನ್ನು ಎಷ್ಟು ಕಾಲ ಬೇಕು ಎಂದು ಪ್ರಶ್ನಿಸಿದ ಸಚಿವೆ, ಈ ರೀತಿ ಜನರ ಭಾವನೆಗಳ ಜತೆಗೆ ಆಟ ಆಡಲಾಗದು ಎಂದರು. ನಾನು ಶನಿವಾರ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ, ಮತ್ತೆ ಮಾತನಾಡುತ್ತೇನೆ. ಮುಖ್ಯ ಮಂತ್ರಿಗಳು, ಉಸ್ತುವಾರಿ ಸಚಿವರು, ವಿಪಕ್ಷ ನಾಯಕರು, ಶಾಸಕರು ಕೇಳಿದರೂ ಇನ್ನೂ ಮರಳು ದಿಣ್ಣೆಗಳನ್ನು ಗುರುತಿಸುವ ಕೆಲಸ ನಡೆಯುತ್ತಿಲ್ಲವಾದರೆ ಏನು ತೊಡಕು ಎನ್ನುವುದರ ಬಗ್ಗೆ ಮತ್ತೆ ವಿವರಣೆ ಕೇಳುತ್ತೇನೆ ಎಂದರು.
ಗುರುವಾರದೊಳಗೆ ಮರಳು ದಿಣ್ಣೆ ಗುರುತಿಸುವ ಕೆಲಸ ಆರಂಭಗೊಳ್ಳದೆ ಇದ್ದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆ ಸುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಮತ್ತು ರಘುಪತಿ ಭಟ್ ತಿಳಿಸಿದ್ದಾರೆ. ಸಚಿವರೊಂದಿಗೆ ಮರಳು ಸಮಸ್ಯೆ ಕುರಿತು ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತ ನಾಡಿ, ಸಾರ್ವ ಜನಿಕರು ಸಂಕಷ್ಟಕ್ಕೊಳಗಾಗಿದ್ದಾರೆ. ಬೇಥ ಮೆಟ್ರಿಕ್ ಬದಲು ಎನ್‌ಐಟಿಕೆ ಸರ್ವೆ ನಡೆಸ ಬೇಕೆಂಬುದು ಜಿಲ್ಲೆಯ ಎಲ್ಲ ಶಾಸಕರ ಆಗ್ರಹವಾಗಿತ್ತು. ಅದಕ್ಕೆ ಮುಖ್ಯಮಂತ್ರಿ ಕೂಡ ಒಪ್ಪಿಗೆ ಸೂಚಿಸಿದ್ದಾರೆ. ಮೀನು ಗಾರಿಕೆ ಇಲಾಖೆ ಎಲ್ಲೆಲ್ಲಿ ಮರಳು ದಿಣ್ಣೆಗಳಿಂದ ದೋಣಿ ಸಂಚಾರಕ್ಕೆ ತೊಡ ಕಾಗು ತ್ತಿದೆ ಎಂಬುದನ್ನು ಗುರುತಿಸಿ 7 ಜನರ ಸಮಿತಿಗೆ ವರದಿ ನೀಡಿದೆ. ಈಗ ಪುನಃ ಎಸಿ ಸರ್ವೆಗೆ ಆದೇಶಿಸಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಇದನ್ನು ವಿರೋಧಿಸುತ್ತೇವೆ. ಸೋಮವಾರ ಎನ್‌ಐಟಿಕೆಗೆ ಸರ್ವೆ ನಡೆಸಲು ಜಿಲ್ಲಾಡಳಿತದ ಪತ್ರ ಹೋಗಿ, ಗುರುವಾರದೊಳಗೆ ಆರಂಭವಾಗಬೇಕು, ಇಲ್ಲವಾದಲ್ಲಿ ಜಿಲ್ಲೆಯ ಶಾಸಕರು, ಎಂಜಿನಿಯರ್‌ಗಳು, ಗುತ್ತಿಗೆದಾರರು ಡಿಸಿ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಹೇಳಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಇದ್ದರು.