Advertisement

ಮರಳು: ಷರತ್ತು ಉಲ್ಲಂಘನೆ ಪ್ರಕರಣ ಮರುಪರಿಶೀಲನೆಗೆ ಸೂಚನೆ

01:25 AM Mar 07, 2019 | |

ಉಡುಪಿ: ಮರಳು ದಿಬ್ಬಗಳನ್ನು ತೆರವುಗೊಳಿಸುವ ಸಂದರ್ಭ ಎರಡನೆಯ ಬಾರಿ ಷರತ್ತು ಉಲ್ಲಂಘನೆ ಮಾಡಿದ ಕಾರಣ ಸಾಂಪ್ರದಾಯಿಕ ಮರಳು ತೆಗೆಯುವವರಿಗೆ ರದ್ದುಪಡಿಸಿದ ಪರವಾನಿಗೆಯನ್ನು ಪುನಃಪರಿಶೀಲಿಸಲು ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

Advertisement

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಏಳು ಸದಸ್ಯರ ಸಮಿತಿಯು  26 ವ್ಯಕ್ತಿಗಳು ಬೋಟ್‌ ಸಂಚಾರ ಉಲ್ಲಂಘನೆ ಮಾಡಿರುವುದಕ್ಕೆ ಅವರಿಗೆ ಅನುಮತಿ ನಿರಾಕರಿಸಿತು ಎಂಬ ವರದಿಯನ್ನು ರಾಜ್ಯ ಸರಕಾರಕ್ಕೆ ಬರೆದಿತ್ತು. ಗಣಿ ಸಚಿವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಕಾರ್ಯದರ್ಶಿಯವರು ಷರತ್ತು ಉಲ್ಲಂಘನೆ ಪ್ರಕರಣಗಳಿಗೆ ವಿನಾಯಿತಿ ನೀಡಲು ನಿರ್ದೇಶನ ನೀಡುವುದಾಗಿ ತಿಳಿಸಿದ್ದರು.

ಸಿಆರ್‌ಝಡ್‌ ನದಿ ಪಾತ್ರಗಳಲ್ಲಿ ನೀರಿನ ಏರಿಳಿತ ಇರುವುದರಿಂದ ಕೆಲವೊಮ್ಮೆ ಬೋಟುಗಳು ಆಚೀಚೆ ಹೋಗಬೇಕಾಗುತ್ತದೆ ಎಂದೂ ಸಮಿತಿ ನಡಾವಳಿಯಲ್ಲಿ ತಿಳಿಸಿತ್ತು. ಈ ಉಲ್ಲಂಘನೆಯ ಪ್ರಕರಣಗಳಲ್ಲಿ ಈ ನ್ಯೂನತೆಯ ಬಗ್ಗೆ ಮರು ಪರಿಶೀಲಿಸಿ ವರದಿ ನೀಡಲು ನಿರ್ದೇಶಕರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next