Advertisement

ಎಗ್ಗಿಲ್ಲದೆ ಸಾಗುತ್ತಿದೆ ಮರಳು ಗಣಿಗಾರಿಕೆ

05:59 PM Apr 11, 2021 | Team Udayavani |

ಮುಧೋಳ: ತಾಲೂಕಿನ ಸರಹದ್ದಿಗೆ ಹೊಂದಿ ಕೊಂಡಿರುವ ಚಿಕ್ಕಾಲಗುಂಡಿ, ಕೊಪ್ಪ ಎಸ್‌.ಕೆ., ಕಾತರಕಿ, ನಿಂಗಾಪುರ ಗ್ರಾಮಕ್ಕೆ ಹೊಂದಿಕೊಂಡಿರುಘಟಪ್ರಭಾ ನದಿಯಲ್ಲಿ ಅಕ್ರಮವಾಗಿ ಮರಳು ಎತ್ತುವ ಕಾರ್ಯ ಎಗ್ಗಿಲ್ಲದೆ ಸಾಗಿದೆ.

Advertisement

ಮರಳು ಎತ್ತಲು ನದಿಪಾತ್ರದ ಹಲವುಗ್ರಾಮಗಳಿಂದ ವಿಶಿಷ್ಟ ಪದ್ಧತಿ ಜಾರಿಯಲ್ಲಿದೆ. ತಮ್ಮಗ್ರಾಮದ ಪಕ್ಕದಲ್ಲಿ ಹಾದುಹೋಗಿರುವ ನದಿಯಲ್ಲಿತಮ್ಮೂರಿನವರೇ ಮರಳು ಎತ್ತಬೇಕು. ಅದನ್ನುಹೊರತುಪಡಿಸಿ ಬೇರೆಡೆಯಿಂದ ಮರಳು ಎತ್ತಲು ಬಂದರೆ ಸ್ಥಳೀಯರು ಅಂತಹ ವಾಹನಗಳಿಗೆಅನುಮತಿ ನೀಡುವುದಿಲ್ಲ. ಇದರಿಂದಾಗಿ ನದಿಮೂಲಕ ಹರಿದುಬರುವ ಮರಳು ನದಿಪಾತ್ರದಗ್ರಾಮಗಳ ಸ್ವತ್ತು ಎಂಬಂತಹ ವಾತಾವರಣ ನಿರ್ಮಾಣವಾಗಿದೆ.

ಅಗತ್ಯತೆಗೆ ಮೀರಿ ಸಂಗ್ರಹ: ನದಿ ಪಾತ್ರದ ಗ್ರಾಮಗಳಜನರು ಬೇರೆಡೆಯಿಂದ ಬರುವ ವಾಹನಗಳಿಗೆಮರಳು ತುಂಬಲು ಅವಕಾಶ ನೀಡುವುದಿಲ್ಲ.ಆದರೆ, ತಾವು ಮಾತ್ರ ಅಗತ್ಯಕ್ಕೂ ಮೀರಿ ಮರಳನ್ನುಸಂಗ್ರಹ ಮಾಡಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ನಾವುಸಂಗ್ರಹ ಮಾಡುವ ಮರಳನ್ನು ಮುಂದಿನ ದಿನಗಳಲ್ಲಿಮಾರಾಟ ಮಾಡುತ್ತೇವೆ ಎಂದು ಉತ್ತರಿಸುತ್ತಾರೆ ಅಕ್ರಮ ಮರಳು ಸಂಗ್ರಹಕೋರರು.

ಹೆಚ್ಚಿನ ದರಕ್ಕೆ ಮಾರಾಟ: ಸದ್ಯ ಘಟಪ್ರಭಾ ನದಿಗೆ ನೀರು ಹರಿಸಿರುವ ಪರಿಣಾಮ ನದಿ ಪಾತ್ರದ ಗ್ರಾಮಗಳಲ್ಲಿ ಮರಳುಗಾರಿಕೆ ಕಡಿಮೆಯಾಗಿದೆ. ಆದರೆ, ನದಿ ನೀರು ಬತ್ತಿದಾಗ ಒಂದು ಟ್ರ್ಯಾಕ್ಟರ್‌ ಮರಳಿಗೆ 1000ರಿಂದ 1500 ರೂ.ವರೆಗೆವೆಚ್ಚವಾಗುತ್ತಿತ್ತು. ಅದರಲ್ಲಿ ಟ್ರೇಲರ್‌ಗೆ ಮರಳುತುಂಬುವ ಕಾರ್ಮಿಕರಿಗೆ 600 ಹಾಗೂ ಮರಳು ಸಾಗಾಣಿಕೆಗೆ ದಾರಿ ನೀಡುವ ಹೊಲದವರಿಗೆ 600ಮತ್ತು ಸ್ಥಳೀಯ ಗ್ರಾಮದವರ ತಮ್ಮ ಗ್ರಾಮದಲ್ಲಿನ ದೈವಕ್ಕೆ 300ರೂ.ನಂತೆ ನಿಗದಿಪಡಿಸಿದ್ದರು. ಈ ಎಲ್ಲ ಮೊತ್ತ ಸೇರಿ 1500 ರೂ. ಆಗುತ್ತದೆ. ಹೀಗೆ ಹಣ ನೀಡಿ ಸಂಗ್ರಹ ಮಾಡುವ ಮರಳು ಮಾರಾಟಗಾರರುಮುಂದಿನ ದಿನಗಳಲ್ಲಿ ಒಂದು ಟ್ರಿಪ್‌ ಮರಳಿಗೆಕನಿಷ್ಠ 5ರಿಂದ 6 ಸಾವಿರ ರೂ. ನಿಗದಿ ಮಾಡುತ್ತಾರೆ.ಇದರಿಂದಾಗಿ ಮರಳು ಕೊಳ್ಳುವವರಿಗೆ ಮುಂದಿನದಿನದಲ್ಲಿ ಮರಳು ಕೊಳ್ಳುವುದು ದುಬಾರಿಯಾದರೂ ಅಚ್ಚರಿ ಪಡಬೇಕಿಲ್ಲ.

ಗಗನಕ್ಕೇರಲಿದೆ ಬೆಲೆ: ನದಿ ಪಾತ್ರದಲ್ಲಿನ ಮರಳು ಎತ್ತಿ ದಂಡೆಯಲ್ಲಿ ಸಂಗ್ರಹಿಸಿರುವ ಮರಳಿಗೆ ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ದೊರೆಯುವುದರಲ್ಲಿಯಾವುದೇ ಅನುಮಾನವಿಲ್ಲ. ಇದೀಗ ನದಿಪಾತ್ರದಲ್ಲಿಮಾತ್ರ ಮರಳು ಸಂಗ್ರಹವಾಗಿದ್ದು, ಅದನ್ನು ಕೊಳ್ಳಲು ಬೇರೆ ಗ್ರಾಮದವರು ಹೆಚ್ಚಿನ ಹಣ ನೀಡಬೇಕಾಗುತ್ತದೆ. ಒಟ್ಟಿನಲ್ಲಿ ಅಕ್ರಮ ಮರಳುಗಾರಿಕೆಎಂಬುದು ಈ ಭಾಗದಲ್ಲಿ ಚಿನ್ನದ ಮೊಟ್ಟೆಯಿಡುವ ಕೋಳಿಯಂತಾಗಿದೆ.

Advertisement

ಕಣ್ಣಿದ್ದು ಕುರುಡನಂತಾದ ಆಡಳಿತ ಯಂತ್ರ: ಇನ್ನು ನದಿಪಾತ್ರದ ಗ್ರಾಮಗಳಲ್ಲಿ ಸಂಗ್ರಹಿಸಿರುವ ಮರಳಿನ ಬಗ್ಗೆ ಅಧಿಕಾರಿವರ್ಗಕ್ಕೆ ತಿಳಿದಿಲ್ಲವೆಂದೇನಿಲ್ಲ. ಆದರೆ, ಇದೆಲ್ಲವನ್ನೂ ನೋಡಿಕೊಂಡು ಗೊತ್ತಿ ದ್ದು,ಗೊತ್ತಿಲ್ಲದಂತೆ ಅಧಿಕಾರಿಗಳು ವರ್ತಿಸು ತ್ತಿರುವುದುಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ.

ಕಬ್ಬಿನಗದ್ದೆಯಲ್ಲಿ ರಾಶಿ ರಾಶಿ ಮರಳು: ಇನ್ನು ಅಕ್ರಮ ಮರಳು ಸಂಗ್ರಹಕ್ಕೆ ದಂಧೆಕೋರರು ಗುಪ್ತವಾದ ಸ್ಥಳಗಳನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಪ್ರಮುಖವಾಗಿ ಕೊಪ್ಪ ಎಸ್‌.ಕೆ. ಹಾಗೂ ಚಿಕ್ಕಾಲಗುಂಡಿಗ್ರಾಮಗಳ ಮಧ್ಯೆ ಇರುವ ಒಳರಸ್ತೆಯಲ್ಲಿ ಸಾಗಿದರೆಕಲ್ಲಿನ ಕ್ವಾರಿಯಂತಹ ತಗ್ಗುಪ್ರದೇಶ ಹಾಗೂ ಕಬ್ಬಿನಗದ್ದೆಯ ಮಧ್ಯೆ ಭಾಗದಲ್ಲಿ ಸಂಗ್ರಹಿಸಲಾಗಿದೆ.ಇದೆಲ್ಲವನ್ನೂ ಗಮನಿಸಿದರೆ ಮರಳು ದಂಧೆಕೋರರುದೊಡ್ಡ ಪ್ರಮಾಣದ ಮರಳು ಸಂಗ್ರಹ ಮಾಡಿದ್ದಾರೆ ಎಂಬ ಅನುಮಾನ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಅಗತ್ಯಕ್ಕೂ ಹೆಚ್ಚಾಗಿ ಸಂಗ್ರಹಿಸಿರುವ ಮರಳನ್ನುವಶಪಡಿಸಿಕೊಂಡು ಅಕ್ರಮ ಮರಳುಗಾರಿಕೆಗೆಕಡಿವಾಣ ಹಾಕಬೇಕು ಎಂಬುದು ಪ್ರಜ್ಞಾವಂತರ ಆಗ್ರಹವಾಗಿದೆ.

ಕೊಪ್ಪ ಎಸ್‌.ಕೆ., ಚಿಕ್ಕಾಲಗುಂಡಿ, ನಿಂಗಾಪುರ ಭಾಗದಲ್ಲಿ ಅಕ್ರಮಮರಳುಗಾರಿಕೆ ನಡೆಯುತ್ತಿರುವ ಬಗ್ಗೆ ನನ್ನ ಗಮನಕ್ಕೆಬಂದಿಲ್ಲ. ಅಕ್ರಮ ಮರಳು ದಂಧೆಕೋರರು ಮರಳನ್ನು ಸಂಗ್ರಹಿಸಿರುವ ಬಗ್ಗೆ ವಿಚಾರಿಸಿ ಈ ಬಗ್ಗೆಸೂಕ್ತ ಕ್ರಮ ಕೈಗೊಳ್ಳಲಾಗುವುದು.  -ಶಂಕರ ಗೌಡಿ, ತಹಶೀಲ್ದಾರ್‌ ಬೀಳಗಿ

 

-ಗೋವಿಂದಪ್ಪ ತಳವಾರ

Advertisement

Udayavani is now on Telegram. Click here to join our channel and stay updated with the latest news.

Next