ಉಡುಪಿ: ರಾಜಕೀಯ ನಾಯಕರು ಮರಳುಗಾರಿಕೆ ವಿಚಾರದಲ್ಲಿ ಪರಸ್ಪರ ಕಿತ್ತಾಡುವುದನ್ನು ನಿಲ್ಲಿಸಿ ಮರಳುಗಾರಿಕೆ ಪ್ರಾರಂಭಿಸುವ ಕಡೆ ಗಮನ ಹರಿಸಬೇಕು ಎಂದು ಸಿಡಬ್ಲ್ಯೂಎಫ್ಐ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ತಿಳಿಸಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆ, ಸಿಐಟಿಯು, ಸಿಡಬ್ಲ್ಯೂಎಫ್ಐ ಸಹಯೋಗದಲ್ಲಿ ಕಟ್ಟಡ ಕಾರ್ಮಿಕರಿಂದ ಸೆ.23ರಿಂದ ಮರಳು ತೆಗೆಯುಲು ನದಿಗೆ ಇಳಿಯುವ ತನಕ ನಡೆಯಲಿರುವ ಧರಣಿ ಸಭೆಯಲ್ಲಿ ಮಾತನಾಡಿದರು.
ಮರಳುಗಾರಿಕೆ ಸ್ಥಗಿತವಾಗಿರುವು ಜಿಲ್ಲೆಯಲ್ಲಿ ಆರ್ಥಿಕತೆ ಕುಸಿತಕ್ಕೆ ಕಾರಣವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮರಳುಗಾರಿ ಪ್ರಾರಂಭಿಸುವುದಾಗಿ ಭರವಸೆ ನೀಡಿ ವರ್ಷಗಳು ಕಳೆದಿವೆ. ಶಾಸಕ ಕೆ.ರಘುಪತಿ ಭಟ್ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರ ಸ್ವೀಕರಿಸಿದ 10 ದಿನದೊಳಗೆ ಮರಳುಗಾರಿಕೆ ಪ್ರಾರಂಭಿಸುವುದಾಗಿ ಭರವಸೆ ನೀಡಿದರು. ಆದರೆ ಇದೀಗ ತಿಂಗಳಾದರೂ ಮರುಳುಗಾರಿಕೆ ಪ್ರಾರಂಭವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತದಲ್ಲಿ ಇದೆ. ಜಿಲ್ಲೆ ಮರಳು ಗಾರಿಕೆಗೆ ಇರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕಟ್ಟಡ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಸಿಗುವ 14 ಸವಲತ್ತುಗಳನ್ನು ಪಡೆಯಲು ಕಾರ್ಮಿಕರು ಕನಿಷ್ಠ 90 ಕೆಲಸ ಮಾಡಬೇಕು. ಆದರೆ ಜಿಲ್ಲೆ ಕಟ್ಟಡ ಮರಳುಗಾರಿಕೆ ಸ್ಥಗಿತಗೊಂಡಿರುವುದರಿಂದ ಕಾರ್ಮಿಕರು ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಬೇಡಿಕೆ
ಮರಳುಗಾರಿ ಶೀಘ್ರದಲ್ಲಿ ಆರಂಭಿಸ ಬೇಕು. ಕುಂದಾಪುರದಲ್ಲಿ ಮರಳುಗಾರಿಕೆ ಅವಕಾಶ ಕಲ್ಪಿಸಬೇಕು. ಮರಳು ಸಮಸ್ಯೆಗೆ ಶಾಶ್ವತ ಪರಿಹಾರ, ಕುಂದಾಪುರದ ಸಿಹಿ ನೀರು ನದಿಯಲ್ಲಿ ಮರಳುಗಾರಿಕೆಗೆ ಅವಕಾಶ, ಮರಳು ಸಮಸ್ಯೆಯಿಂದ ಕೆಲಸ ಕಳೆದುಕೊಂಡ ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆಯಲ್ಲಿ ಒತ್ತಾಯಿಸಲಾಯಿತು.
ಕಮ್ಯುನಿಸ್ಟ್ ಸಂಘಟನೆಗಳ ನಾಯಕರಾದ ಸುರೇಶ್ ಕಲ್ಲಾಗರ್, ಶೇಖರ್ ಬಂಗೇರ, ದಾಸಭಂಡಾರಿ, ಸಿಐಟಿಯು ಕಾರ್ಯದರ್ಶಿ ಎಚ್. ನರಸಿಂಹ, ರಾಜೀವ್ ಪಡುಕೋಣೆ, ವಿಠuಲ ಪೂಜಾರಿ, ದಯಾನಂದ ಕೋಟ್ಯಾನ್, ಸುಭಾಷ್ ನಾಯಕ್, ಗಣೇಶ್ ನಾಯಕ್ ಉಪಸ್ಥಿತರಿದ್ದರು.