Advertisement

Sand Case ಸುಜೀರು: ಅಕ್ರಮ ಮರಳಿನ ದಿಣ್ಣೆಗಳು ವಶ

01:42 AM Dec 23, 2023 | Team Udayavani |

ಬಂಟ್ವಾಳ: ಪುದು ಗ್ರಾಮದ ಸುಜೀರಿನ ನೇತ್ರಾವತಿ ನದಿ ಕಿನಾರೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 36 ಯೂನಿಟ್‌ ಮರಳಿನ ದಿಣ್ಣೆಯನ್ನು ಶುಕ್ರವಾರ ಬಂಟ್ವಾಳ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

Advertisement

ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಎಸ್‌ಐ ಹರೀಶ್‌ ಎಂ.ಆರ್‌. ಹಾಗೂ ಸಿಬಂದಿ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ 60 ಸಾವಿರ ರೂ. ಮೌಲ್ಯದ 36 ಯೂನಿಟ್‌(12 ಲೋಡ್‌) ಮರಳನ್ನು ಅಲ್ಲಲ್ಲಿ ದಿಣ್ಣೆಗಳ ಮೂಲಕ ಯಾವುದೇ ಪರವಾನಿಗೆ ಪಡೆಯದೆ ಸಂಗ್ರಹಿಸಿಟ್ಟಿದ್ದರು. ಮರಳಿನ ದಿಣ್ಣೆಗಳನ್ನು ವಶಪಡಿಸಿಕೊಂಡಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ.

ಮರಳು ಸಾಗಾಟದ ಲಾರಿ ವಶ
ಬೆಳ್ತಂಗಡಿ: ನದಿಯಿಂದ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಧರ್ಮಸ್ಥಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಚಾರ್ಮಾಡಿಯ ನದಿಯಿಂದ ಯಾವುದೇ ಪರವಾನಿಗೆ ಇಲ್ಲದೇ ಮರಳು ತೆಗೆದು ಲಾರಿಯಲ್ಲಿ ಸಾಗಾಟ ಮಾಡುತ್ತಿದ್ದಾಗ, ಧರ್ಮಸ್ಥಳ ಠಾಣಾ ಪೊಲೀಸ್‌ ಉಪನಿರೀಕ್ಷಕರು ಹಾಗೂ ಸಿಬಂದಿ ಕಲ್ಮಂಜ ಗ್ರಾಮದ ಸತ್ಯನಪಲ್ಕೆ ಮೂರು ಮಾರ್ಗ ಜಂಕ್ಷನ್‌ನಲ್ಲಿ ಪತ್ತೆಹಚ್ಚಿ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಮರಳುಗಾರಿಕೆ: 5 ದೋಣಿ ವಶಕ್ಕೆ
ಮಂಗಳೂರು: ಮಂಗಳೂರು ತಾಲೂಕಿನ ಅಡೂxರು ಗ್ರಾಮದ ಕೆಳಗಿನ ಕೆರೆಯಲ್ಲಿ ಅಕ್ರಮ ಮರಳುಗಾರಿಕೆಗೆ ಬಳಕೆ ಮಾಡುತ್ತಿದ್ದ 5 ದೋಣಿಗಳನ್ನು ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ.

Advertisement

ಗಣಿಗಾರಿಕೆ ಇಲಾಖೆಯ ಉಪನಿರ್ದೇಶಕರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ದಾಸ್ತಾನಿರಿಸಿದ್ದ ಮರಳು ಕೂಡ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next